LOCAL NEWS : ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ; ಫೆ.22ರಂದು ಪೂರ್ವಭಾವಿ ಸಭೆ.

You are currently viewing LOCAL NEWS : ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ; ಫೆ.22ರಂದು ಪೂರ್ವಭಾವಿ ಸಭೆ.

LOCAL NEWS : ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ; ಫೆ.22ರಂದು ಪೂರ್ವಭಾವಿ ಸಭೆ..!!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕುಕನೂರು ಫೆ. 19 : ಜಗತ್ತಿಗೆ ಶೈವ ತತ್ವ ಶಾಸ್ತ್ರವನ್ನು ಜನಸಾಮಾನ್ಯರಿಗೆ ಪರಿಚಯಿಸಿದ ಮಹಾನ್ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ಪೂರ್ವಭಾವಿ ಸಭೆಯನ್ನು ಶನಿವಾರ ಆಯೋಜಿಸಲಾಗಿದೆ ಎಂದು ಜಂಗಮ ಸಮಾಜದ ಕುಕನೂರು ತಾಲೂಕ ಅಧ್ಯಕ್ಷ ಮಹೇಶ ಕಲ್ಮಠ ತಿಳಿಸಿರುತ್ತಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಜಂಗಮ ಸಮುದಾಯದ ತಾಲೂಕ ಅಧ್ಯಕ್ಷ ಮಹೇಶ ಕಲ್ಮಠ ಮಾತನಾಡುತ್ತಾ ಇಡಿ ಪ್ರಪಂಚಕ್ಕೆ ವೀರಶೈವ ತತ್ವ ಶಾಸ್ತ್ರವನ್ನು ಪರಿಚಯಿಸಿದ ಮಹಾನ್ ಪುರುಷರ ಜಯಂತಿಯನ್ನು ತಾಲೂಕ ಮಟ್ಟದಲ್ಲಿ ವಿಜೃಂಭಣೆಯಿಂದ ಆಚರಿಸುವ ಉದ್ದೇಶವನ್ನು ಹೊಂದಿದ್ದು ಇದಕ್ಕೆ ಸಂಬಂಧಪಟ್ಟಂತೆ ಪೂರ್ವಭಾವಿ ಸಭೆಯನ್ನು ಇದೆ ಫೆಬ್ರವರಿ 22ರ ಭಾನುವಾರ ಪಟ್ಟಣದ ಮುಂಡರಗಿ ಶ್ರೀ ಅನ್ನದಾನೀಶ್ವರ ಶಾಖಾಮಠದಲ್ಲಿ ಬೆಳಗ್ಗೆ 10 ಗಂಟೆ ಬೆಳಿಗ್ಗೆ ಆಯೋಜಿಸಿದ್ದು ತಾಲೂಕಿನ ಸಮಸ್ತ ವೀರಶೈವ- ಜಂಗಮ ಬಾಂಧವರು ಹಾಗೂ ಹಿತೈಷಿಗಳು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ರೂಪರೇಷೆಗಳನ್ನು ಸಿದ್ಧತೆಗೊಳಿಸುವ ನಿಟ್ಟಿನಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು ಶಿಸ್ತು ಬದ್ಧವಾದ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲು ಸಹಕರಿಸಬೇಕು ಎಂದು ಮಹೇಶ್ ಕಲ್ಮಠ ಕರೆ ನೀಡಿದ್ದಾರೆ.

Leave a Reply

error: Content is protected !!