You are currently viewing LOCAL NEWS : ಕುಕನೂರಿನಲ್ಲಿ  ಮಾರ್ಚ್ 14ರಂದು “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮ : ಮಮತಾ ರಾಯರೆಡ್ಡಿ
ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಮತಾ ರಾಯರೆಡ್ಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಮಂತ್ರಣ ಪ್ರತಿಕೆ ಬಿಡುಗಡೆ ಮಾಡಿದರು.

LOCAL NEWS : ಕುಕನೂರಿನಲ್ಲಿ  ಮಾರ್ಚ್ 14ರಂದು “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮ : ಮಮತಾ ರಾಯರೆಡ್ಡಿ

LOCAL NEWS : ಕುಕನೂರಿನಲ್ಲಿ  ಮಾರ್ಚ್ 14ರಂದು “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮ : ಮಮತಾ ರಾಯರೆಡ್ಡಿ

 

ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಮತಾ ರಾಯರೆಡ್ಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಮಂತ್ರಣ ಪ್ರತಿಕೆ ಬಿಡುಗಡೆ ಮಾಡಿದರು.

 

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಕುಕನೂರು, ಮಾರ್ಚ್ 12 : ಮಹಿಳೆಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷವಾದ ವಿಭಿನ್ನ ರೀತಿಯಲ್ಲಿ ಕುಕನೂರು ಪಟ್ಟಣದಲ್ಲಿ ಇದೇ ಮಾರ್ಚ್ 14ರಂದು “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ”ಯನ್ನು ಆಯೋಜಿಸಲಾಗಿದೆ ಎಂದು ಆರಾಮ್ ಸಂಸ್ಥೆಯ ಅಧ್ಯಕ್ಷೆ ಮಮತಾ ರಾಯರೆಡ್ಡಿ  ತಿಳಿಸಿದರು.

ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಅವರು, ‘ಕೊಪ್ಪಳ ಜಿಲ್ಲಾ ಹಾಗೂ ತಾಲೂಕ ವಿಧಾನಸಭಾ ಮಹಿಳಾ ಕಾಂಗ್ರೆಸ್ ಹಾಗೂ ನಮ್ಮ  ಆರಾಮ್ ಫೌಂಡೇಶನ್  ಸಂಯೋಗದಲ್ಲಿ ಈ ಕಾರ್ಯಕ್ರಮವನ್ನು ಪಟ್ಟಣದ ಹೊರ ವಲಯದಲ್ಲಿರುವ ಬಿವಿ ಶೆಟ್ಟರ್ ಮಂಗಳ ಭವನದಲ್ಲಿ ನಡೆಸಲಾಗುತ್ತದೆ ಎಂದರು.

ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಮಣಿಗಳನ್ನು “ಕೊಪ್ಪಳ ಸ್ತ್ರೀರತ್ನ ಪ್ರಶಸ್ತಿ” ನೀಡಿ ಗೌರವಿಸುವ ಮೂಲಕ ಅವರ ಸಾಧನೆಗೆ ಪ್ರೇರಣೆ ನೀಡಲಾಗುವುದು ಎಂದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದರೆ ಮಹಿಳೆಯರ ಸಾಧನೆಯನ್ನು ಬರೀ ಮಾತಿನಲ್ಲಿ ಹೊಗಳದೆ ಸಾಧನೆಗೆ ತಕ್ಕಂತೆ, ಜಿಲ್ಲೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಅವರನ್ನು ಗುರುತಿಸುವಂತೆ ಪ್ರೋತ್ಸಾಹ ನೀಡುವುದು ಬಹಳ ಮುಖ್ಯ ಎಂದರು.

ಈ ಕಾರ್ಯಕ್ರಮದಲ್ಲಿ ಹಾಗೂ ಮಹಿಳಾ ರಕ್ಷಣೆ ತಂಡದವರಿಗೆ, ಮಾನಸಿಕ ಚಟುವಟಿಕೆ ಕುರಿತು ಕಾರ್ಯಕ್ರಮಗಳನ್ನು ಆಚರಿಸಲಾಗುವುದು. ಹದಿನಾರು ವರ್ಷದ ಒಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾವನ್ನು ದೂರ ಇಡಬೇಕು ಎನ್ನುವ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರ ವಿಚಾರಧಾರೆಗಳು ಅತ್ಯಂತ ಸೂಕ್ತವಾಗಿದ್ದು, ನಮ್ಮ ಫೌಂಡೇಶನ್ ವತಿಯಿಂದ ಆ ನಿಟ್ಟಿನಲ್ಲಿ ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ಹಲವು ಕರಕುಶಲತೆಗೆ ಹೆಸರಾಗಿದೆ, ಕಲೆಯನ್ನು ದೇಶದಾದ್ಯಂತ ಬೆಳಕಿಗೆ ತರುವ ಉದ್ದೇಶ ಹೊಂದಿದ್ದು, ಕಾರ್ಯಕ್ರಮದಲ್ಲಿ ಕಿನ್ನಾಳ ಕರಕುಶಲದ ವಸ್ತುಗಳ ಮಾರಾಟ ಮಳಿಗೆಗಳನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.

ವಿಶೇಷವಾಗಿ ಮಹಿಳಾ ಕಾರ್ಯಕ್ರಮ ಆಗಿರುವುದರಿಂದ ಜಿಲ್ಲೆಯಾದ್ಯಂತ ಮಹಿಳೆಯರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಯಲಬುರ್ಗಾ ಬ್ಲಾಕ್  ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸಾವಿತ್ರಿ ಗೊಲ್ಲರ್, ಕುಕನೂರು ತಾಲೂಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಫರೀದಾ ಬೇಗಂ ತಂಬಾಕದಾರ, ನಂದಿತಾ ದಾನರೆಡ್ಡಿ, ಪೂರ್ಣಿಮಾ ಸಸಿಮಠ್ ಇದ್ದರು.

Leave a Reply

error: Content is protected !!