You are currently viewing LOCAL NEWS : ಕುಕನೂರು | ಜಯಂತಿ ಆಚರಣೆಗೆ ಪೂಜ್ಯರ, ಸರ್ವಧರ್ಮಿಯರ ಸಹಕಾರ ಅವಶ್ಯ : ಹಂಪಯ್ಯ ಹಿರೇಮಠ

LOCAL NEWS : ಕುಕನೂರು | ಜಯಂತಿ ಆಚರಣೆಗೆ ಪೂಜ್ಯರ, ಸರ್ವಧರ್ಮಿಯರ ಸಹಕಾರ ಅವಶ್ಯ : ಹಂಪಯ್ಯ ಹಿರೇಮಠ

LOCAL NEWS : ಜಯಂತಿ ಆಚರಣೆಗೆ ಪೂಜ್ಯರ, ಸರ್ವಧರ್ಮಿಯರ ಸಹಕಾರ ಅವಶ್ಯ : ಹಂಪಯ್ಯ ಹಿರೇಮಠ 

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :-

ಕುಕನೂರು ಮಾ.12 : ಪ್ರತಿಯೊಬ್ಬ ಮಹನೀಯರ ಜಯಂತಿಗಳು ಯಶಸ್ವಿಯಾಗಿ ನೆರವೇರಲು ಎಲ್ಲಾ ಪೂಜ್ಯರ ಹಾಗೂ ಸರ್ವಧರ್ಮೀಯರ ಸಹಕಾರ ಅತ್ಯಂತ ಅವಶ್ಯಕವಾಗಿದೆ ಎಂದು ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಲದ ನಿರ್ದೇಶಕ ಹಂಪಯ್ಯ ಹಿರೇಮಠ ಹೇಳಿದರು.

ತಾಲೂಕಿನ ಮಂಡಲಗಿರಿ ಗ್ರಾಮದಲ್ಲಿ ತಾಲೂಕ ವೀರಶೈವ ಜಂಗಮ ಸಂಘ ಕುಕನೂರು ಹಾಗೂ ವೀರಭದ್ರೇಶ್ವರ ಬೇಡ ಜಂಗಮ ಕ್ಷೆಮಾಭಿವೃದ್ಧಿ ಸಂಘ ಮಂಡಲಗಿರಿ ಇವರ ವತಿಯಿಂದ ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ, ಜಯಂತೋತ್ಸವ ಹಾಗೂ ತಾಲೂಕ ಸಮಾವೇಶವನ್ನು ಗುರುವಾರ ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಳದ ನಿರ್ದೇಶಕರಾದ ಹಂಪಯ್ಯ ಹಿರೇಮಠ ಮಾತನಾಡುತ್ತ ಪ್ರತಿಯೊಂದು ಜಯಂತಿಗಳ ಯಶಸ್ವಿ ನ ಹಿಂದೆ ಪೂಜ್ಯರ ಹಾಗೂ ಸರ್ವಧರ್ಮೀಯರ ಸಹಕಾರ ಅವಶ್ಯಕತೆವಾಗಿದ್ದು ಪ್ರತಿಯೊಬ್ಬರ ಸಹಕಾರದಿಂದಲೇ ಯಂತ್‌ಗಳು ಯಶಸ್ವಿಯಾಗುತ್ತವೆ. ಮಾನವ ಧರ್ಮವನ್ನು ಸ್ಥಾಪಿಸುವಲ್ಲಿ ನಾಂದಿ ಹಾಡಿದ ಮಹಾನ್ ಚೇತನ ಜಗದ್ಗುರು ಆದಿ ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನೆಯನ್ನು ಮಂಡಲಗಿರಿ ಗ್ರಾಮದಲ್ಲಿ

ಫೋಟೋ
ಮಂಡಲಗಿರಿಯಲ್ಲಿ ನಡೆದ ರೇಣುಕಾಚಾರ್ಯ ಜಯಂತಿಯಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್ ಭಾಗವಹಿಸಿದರು.

ನೆರವೇರಿಸಿರುವುದು ಅತ್ಯಂತ ಲಾಗನೀಯವಾಗಿದೆ ಎಂದು ಹೇಳಿದರು.

 

ಆದಿ ಜಗದ್ಗುರು ರೇಣುಕಾಚಾರ್ಯರು ಮಾನವರನ್ನು ಆಂತರಿಕವಾಗಿ ಪರಿವರ್ತನೆಗೊಳಿಸುತ್ತಾ ಮಹಾದೇವರನ್ನಾಗಿಸಿದ ದಿವ್ಯ ಚೇತನರಾಗಿದ್ದು ಅವರು ಹಾಕಿಕೊಟ್ಟ ಸಂಪ್ರದಾಯವನ್ನು ಉಳಿಸಿಕೊಂಡು ಸುಶಿಕ್ಷಿತರಾಗಿ ಬಾಳೋಣ ಎಂದು ತಿಳಿಸಿದರು .

ಹಿರೇಮಠದ ಪೂಜ್ಯರಾದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಜಗದ್ಗುರುಗಳು ವೀರ ಸಂಸ್ಕೃತಿಯ ಚೇತನವಾಗಿದ್ದು ಬಸವಣ್ಣನವರ ಕಾಲದ ಪೂರ್ವದಲ್ಲಿಯೂ ಸಹ ವೀರಶೈವ ಧರ್ಮ ಇತ್ತು ಎಂಬುದನ್ನು ಎಲ್ಲರೂ ಮನಗಾಣಬೇಕು ಜೊತೆಗೆ ವೀರಶೈವ ಮತ್ತು ಲಿಂಗಾಯತ ಬೇರೆಬೇರೆ ಎಂದು ಕೆಲವರು ಸುಳ್ಳು ಹೇಳುತ್ತಿದ್ದು. ಜನತೆ ಅದನ್ನೆಲ್ಲಾ ನಂಬಬಾರದು, ವೀರಶೈವ ಲಿಂಗಾಯತ ಎರಡು ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿವೆ ಹಾಗೂ ಪ್ರತಿಯೊಬ್ಬರೂ ವಾಸ್ತವಿಕ ಮೂಲವನ್ನು ಬಿಟ್ಟು ಪ್ರಚಲಿತತೆ ಹಿಂದೆ ಹೊರಟಿರುವುದು ವಿಷಾಧನೆಯವಾಗಿದ್ದು ವಾಸ್ತವವನ್ನು ಅರಿತು ಹೆಜ್ಜೆ ಇಡಬೇಕು ಎಂದು ಹೇಳಿದರು.

 

ಕುದುರೆಮತಿ ಗ್ರಾಮದ ಮೈಸೂರು ಸಂಸ್ಥಾನ ಮಠದ ಪೂಜ್ಯರಾದ ವಿಜಯ ಮಹಾಂತೇಶ್ವರ ಮಹಾಸ್ವಾಮಿಗಳು ಮಾತನಾಡಿ ಜಗತ್ತಿನ ಉದಯದಿಂದ ಪ್ರಾರಂಭವಾದ ಪ್ರಾಚೀನ ಧರ್ಮ ಹಿಂದೂ ಧರ್ಮವಾಗಿದ್ದು ಇದರಲ್ಲಿ ಬ್ರಹ್ಮಾಂಡವನ್ನೇ ಲಿಂಗವಾಗಿ ಪೂಜಿಸಲ್ಪಡುತ್ತಿದೆ. ಲಿಂಗಕ್ಕೆ ಯಾವುದೇ ಜಾತಿ ಭೇದಭಾವವಿಲ್ಲ ಎಲ್ಲಾ ಸಮುದಾಯದವರೆಗೂ ಲಿಂಗದಾರಣೆ ಅವಶ್ಯಕತೆವಾಗಿದ್ದು ಜಂಗಮರು ಪರಿಶುದ್ಧ ಆತ್ಮದಿಂದ ಕೂಡಿರಬೇಕು. ಆ ಜಾತಿ ಈ ಜಾತಿ ಎಂದು ಬಡಿದಾಡುವ ಬದಲು ನಾನೊಬ್ಬ ಭಾರತೀಯ, ನಾನೊಬ್ಬ ಹಿಂದು ಎಂದು ಸಾರಿ ಹೇಳುವುದರೊಂದಿಗೆ ಸಾಮರಸ್ಯ, ಸೌಹಾರ್ದತೆಯನ್ನು ನಿಮ್ಮದಾಗಿಸಿಕೊಳ್ಳಿ ಎಂದು ಹಿತವಚನ ನುಡಿದರು.

ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಯಲಬುರ್ಗಾ ಪಟ್ಟಣದ ಶ್ರೀಧರ ಮುರಡಿ ಮಠದ ಪೂಜ್ಯರಾದ ಶ್ರೀ ಬಸವಲಿಂಗ ಶಿವಾಚಾರ್ಯರು ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ನೆರವೇರಿಸಿದರು. ಮಾಜಿ ಸಚಿವ ಹಾಲಪ್ಪ ಆಚಾರ್ ಜಗದ್ಗುರುಗಳ ಭವ್ಯ ಮೆರವಣಿಗೆಗೆ ಹಾಗೂ ಕುಂಭಮೇಳಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ನಂತರ ಪ್ರತಿಯೊಬ್ಬರಿಗೂ ಅನ್ನ ಸಂತರ್ಪಣೆ ಆಯೋಜಿಸಲಾಯಿತು.

ವೇದಿಕೆಯಲ್ಲಿ ಕುಕನೂರು ಪಟ್ಟಣದ ಮುಂಡರಗಿ ಅನ್ನದಾನೇಶ್ವರ ಶಾಖಾಮಠದ ಪೂಜ್ಯರಾದ ಡಾ.ಮಹಾದೇವ ಮಹಾಸ್ವಾಮಿಗಳು ಹಾಗೂ ಮಂಗಳೂರು ಗ್ರಾಮದ ಅರಳಲೇ ಹಿರೇಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯರು ನೇತೃತ್ವವನ್ನು ವಹಿಸಿಕೊಂಡಿದ್ದರು. ಪ್ರಮುಖರಾದ ವೀರಯ್ಯ ತೋಂಟದಾರ್ಯ ಮಠ, ಮಹೇಶ ಕಲ್ಮಠ, ಹರೀಶ್ವರಯ್ಯ ಹಿರೇಮಠ, ವಿಶ್ವನಾಥಯ್ಯ ಹಿರೇಮಠ, ಪ್ರವೀಣ ಕುಮಾರ್ ಹಿರೇಮಠ, ಹಂಪಯ್ಯ ಮೆತಗಲ್, ಶ್ರೀಧರ ಹೊಸಮನಿ, ವೀರಣ್ಣ ಅಣ್ಣಿಗೇರಿ, ಶಿವಕುಮಾರ್ ನಾಗಲಾಪುರ ಮಠ, ಮಹೇಶ್ ಮಳೆ ಮಠ, ಗಿರೀಶ್ ಹಿರೇಮಠ, ಹಂಚಾಳಪ್ಪ ತಳವಾರ, ಹನುಮಂತಪ್ಪ ಉಪ್ಪಾರ, ಹನುಮಂತಪ್ಪ ನಾಗನಗೌಡರು, ಹಾಗೂ ಗ್ರಾಮದ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

error: Content is protected !!