You are currently viewing EXCLUSIVE NEWS : ಕುಕನೂರಿನ ಸಂಚಾರಿ ನ್ಯಾಯಾಲಯಕ್ಕೆ ತೆರೆ : ಇನ್ಮುಂದೆ ಪ್ರತಿದಿನ ಖಾಯಂ ಕೋರ್ಟ್ ಕಲಾಪ; ಹೈಕೋರ್ಟ್ ಮಹತ್ವದ ಆದೇಶ!

EXCLUSIVE NEWS : ಕುಕನೂರಿನ ಸಂಚಾರಿ ನ್ಯಾಯಾಲಯಕ್ಕೆ ತೆರೆ : ಇನ್ಮುಂದೆ ಪ್ರತಿದಿನ ಖಾಯಂ ಕೋರ್ಟ್ ಕಲಾಪ; ಹೈಕೋರ್ಟ್ ಮಹತ್ವದ ಆದೇಶ!

EXCLUSIVE NEWS : ಕುಕನೂರಿನ ಸಂಚಾರಿ ನ್ಯಾಯಾಲಯಕ್ಕೆ ತೆರೆ : ಇನ್ಮುಂದೆ ಪ್ರತಿದಿನ ಖಾಯಂ
ಕೋರ್ಟ್ ಕಲಾಪ; ಹೈಕೋರ್ಟ್ ಮಹತ್ವದ ಆದೇಶ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :

ಕುಕನೂರು, ಮಾರ್ಚ್ 19 ​: ತಾಲ್ಲೂಕಿನ ಜನತೆಗೆ ಕಾನೂನು ಸೇವೆಗಳನ್ನು ಇನ್ನಷ್ಟು ಹತ್ತಿರವಾಗಿಸುವ ನಿಟ್ಟಿನಲ್ಲಿ ಮಾನ್ಯ ಉಚ್ಚ ನ್ಯಾಯಾಲಯವು ಮಹತ್ವದ ನಿರ್ಧಾರ ಕೈಗೊಂಡಿದೆ. ಇಲ್ಲಿಯವರೆಗೆ ವಾರದಲ್ಲಿ ಕೆಲವು ದಿನಗಳ ಕಾಲ ಮಾತ್ರ ನಡೆಯುತ್ತಿದ್ದ ಸಂಚಾರಿ ನ್ಯಾಯಾಲಯದ (Circuit Court) ವ್ಯವಸ್ಥೆಯನ್ನು ಸದ್ಯದಲ್ಲೇ ಸ್ಥಗಿತಗೊಳಿಸಿ, ಇನ್ಮುಂದೆ ಪ್ರತಿದಿನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ (JMFC) ನ್ಯಾಯಾಲಯಗಳ ಕಲಾಪಗಳನ್ನು ನಡೆಸಲು ಆದೇಶಿಸಲಾಗಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಇನ್ಮುಂದೆ ಪ್ರತಿದಿನ ‘ಖಾಯಂ ನ್ಯಾಯಾಲಯದ’ (Permanent Court)(ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ (JMFC) ನ್ಯಾಯಾಲಯ) ಕಲಾಪಗಳು ನಡೆಯಲಿವೆ ಎಂದು ಮಾನ್ಯ ಉಚ್ಚ ನ್ಯಾಯಾಲಯವು ಮಹತ್ವದ ಆದೇಶ ಹೊರಡಿಸಿದೆ ಎನ್ನಲಾಗಿದೆ. ಈ ಹಿಂದೆ ಕುಕನೂರು ಸಂಚಾರಿ ನ್ಯಾಯಾಲಯವು ವಾರದಲ್ಲಿ ಮಂಗಳವಾರ-ಬುಧವಾರ ಎರಡು ದಿನಗಳ ಕಾಲ ಕೋರ್ಟ್ ಕಲಾಪಗಳು ನಡೆಯುತ್ತಿದೆ.

ಹೈಕೋರ್ಟ್ ಆದೇಶದ ಹಿನ್ನೆಲೆ : ​ಸಂಚಾರಿ ನ್ಯಾಯಾಲಯದ ವ್ಯವಸ್ಥೆಯಿಂದಾಗಿ ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬವಾಗುತ್ತಿರುವುದು ಮತ್ತು ಕಕ್ಷಿದಾರರಿಗೆ ಸಕಾಲದಲ್ಲಿ ನ್ಯಾಯ ಸಿಗದಿರುವುದನ್ನು ಗಮನಿಸಿದ ಉಚ್ಚ ನ್ಯಾಯಾಲಯವು ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ.

ಕುಕನೂರಿನಲ್ಲಿದ್ದ ಸಂಚಾರಿ ನ್ಯಾಯಾಲಯದ ವ್ಯಾಪ್ತಿಯಲ್ಲಿದ್ದ ಎಲ್ಲಾ ಪ್ರಕರಣಗಳನ್ನು ಇನ್ಮುಂದೆ ಹೊಸದಾಗಿ ಸ್ಥಾಪನೆಯಾಗುವ ಅಥವಾ ಮೇಲ್ದರ್ಜೆಗೇರಿಸಲಾದ ವ ಖಾಯಂ ನ್ಯಾಯಾಲಯಕ್ಕೆ (ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ (JMFC) ನ್ಯಾಯಾಲಯ) ವರ್ಗಾಯಿಸಲು ಸೂಚಿಸಲಾಗುತ್ತದೆ ಎಂದು ಕೋರ್ಟ್ ಬಲ್ಲಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈ ಕುರಿತು ಅಧಿಕೃತ ಆದೇಶ ಪ್ರತಿ ಬರಬೇಕಾಗಿದೆ.

ವಕೀಲರ ಸಂಘದ ಸ್ವಾಗತ:- ಸಂಚಾರಿ ನ್ಯಾಯಾಲಯವನ್ನು ಸ್ಥಗಿತಗೊಳಿಸಿ ಖಾಯಂ ಕಲಾಪಗಳನ್ನು ಆರಂಭಿಸುವ ಹೈಕೋರ್ಟ್ ನಿರ್ಧಾರವನ್ನು ಸ್ಥಳೀಯ ವಕೀಲರ ಸಂಘ ಸ್ವಾಗತಿಸಿದೆ.

  1. “ಇದೊಂದು ಐತಿಹಾಸಿಕ ತೀರ್ಪಾಗಿದ್ದು, ಕಕ್ಷಿದಾರರಿಗೆ ಸಂಚಾರಿ ನ್ಯಾಯಾಲಯದ ಅನಿಶ್ಚಿತತೆಯಿಂದ ಮುಕ್ತಿ ಸಿಗಲಿದೆ. ಇನ್ಮುಂದೆ ಪ್ರತಿದಿನ ನ್ಯಾಯಾಲಯದ ಆವರಣದಲ್ಲಿ ಕಾನೂನು ಚಟುವಟಿಕೆಗಳು ಸುಗಮವಾಗಿ ನಡೆಯಲಿವೆ,” ಎಂದು ತಾಲೂಕಾ ವಕೀಲರ ಸಂಘದ ಅಧ್ಯಕ್ಷ ಸುಬಾಸ್ ಎಸ್ ಹೊಂಬಳ ತಿಳಿಸಿದ್ದಾರೆ.

Leave a Reply

error: Content is protected !!