You are currently viewing EXCLUSIVE NEWS : ಕುಕನೂರು ಮತ್ತು ಕಾರಟಗಿಗೆ ಖಾಯಂ ನ್ಯಾಯಾಲಯ ಆರಂಭ : ಒಟ್ಟು 32 ಹುದ್ಧೆಗಳಿಗೆ ಸರ್ಕಾರ ಗ್ರೀನ್ ಸಿಗ್ನಲ್..!

EXCLUSIVE NEWS : ಕುಕನೂರು ಮತ್ತು ಕಾರಟಗಿಗೆ ಖಾಯಂ ನ್ಯಾಯಾಲಯ ಆರಂಭ : ಒಟ್ಟು 32 ಹುದ್ಧೆಗಳಿಗೆ ಸರ್ಕಾರ ಗ್ರೀನ್ ಸಿಗ್ನಲ್..!

EXCLUSIVE NEWS : ಕುಕನೂರು ಮತ್ತು ಕಾರಟಗಿಗೆ ಖಾಯಂ ನ್ಯಾಯಾಲಯ ಆರಂಭ : ಒಟ್ಟು 32 ಹುದ್ಧೆಗಳಿಗೆ ಸರ್ಕಾರ ಗ್ರೀನ್ ಸಿಗ್ನಲ್..!

ಪ್ರಜಾ ವೀಕ್ಷಣೆ ಡಿಜಿಟಲ್‌ ಸುದ್ದಿ :

ಕೊಪ್ಪಳ: ಜಿಲ್ಲೆಯ ಕುಕನೂರು ಮತ್ತು ಕಾರಟಗಿ ತಾಲೂಕಿನ ಜನತೆಯ ದಶಕಗಳ ಬೇಡಿಕೆ ಕೊನೆಗೂ ಈಡೇರಿದೆ. ಈ ಎರಡೂ ತಾಲೂಕು ಕೇಂದ್ರಗಳಲ್ಲಿ ಖಾಯಂ ಸಿವಿಲ್ ನ್ಯಾಯಾಲಯಗಳನ್ನು (Civil Judge & JMFC) ಆರಂಭಿಸಲು ರಾಜ್ಯ ಸರ್ಕಾರ ಅಧಿಕೃತವಾಗಿ ಅನುಮೋದನೆ ನೀಡಿದ್ದು, ನ್ಯಾಯಾಲಯದ ಸುಗಮ ಕಾರ್ಯನಿರ್ವಹಣೆಗಾಗಿ ಒಟ್ಟು 32 ವಿವಿಧ ವೃಂದದ ಹುದ್ದೆಗಳ ಸೃಜನೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಈವರೆಗೆ ಈ ಭಾಗದ ಜನರು ಸಣ್ಣಪುಟ್ಟ ನ್ಯಾಯಾಂಗ ಕೆಲಸಗಳಿಗಾಗಿ ಪಕ್ಕದ ತಾಲೂಕುಗಳಿಗೆ ಅಥವಾ ಜಿಲ್ಲಾ ಕೇಂದ್ರಕ್ಕೆ ಅಲೆಯಬೇಕಿತ್ತು. ಈಗ ಕುಕನೂರು ಮತ್ತು ಕಾರಟಗಿಯಲ್ಲೇ ಖಾಯಂ ನ್ಯಾಯಾಲಯಗಳು ಸ್ಥಾಪನೆಯಾಗುವುದರಿಂದ ಸಮಯ ಮತ್ತು ಹಣ ಉಳಿತಾಯವಾಗಲಿದ್ದು, ನ್ಯಾಯಾಂಗ ಪ್ರಕ್ರಿಯೆಗಳು ಜನರಿಗೆ ಇನ್ನಷ್ಟು ಹತ್ತಿರವಾಗಲಿವೆ.

ಹುದ್ದೆಗಳ ವಿವರ: ಸರ್ಕಾರದ ಆದೇಶದಂತೆ ಪ್ರತಿ ನ್ಯಾಯಾಲಯಕ್ಕೆ ತಲಾ 16 ಹುದ್ದೆಗಳಂತೆ ಒಟ್ಟು 32 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ.

ಇದರಲ್ಲಿ: ಸಿವಿಲ್ ನ್ಯಾಯಾಧೀಶರು, ಶಿರಸ್ತೇದಾರರು ಮತ್ತು ಆಡಳಿತಾಧಿಕಾರಿಗಳು, ಬೆರಳಚ್ಚುಗಾರರು (Typists), ಜವಾನರು ಮತ್ತು ಆದೇಶ ಜಾರಿ ಮಾಡುವವರು (Process Servers)
ಸೇರಿದಂತೆ ವಿವಿಧ ತಾಂತ್ರಿಕ ಮತ್ತು ಆಡಳಿತಾತ್ಮಕ ಹುದ್ದೆಗಳು ಒಳಗೊಂಡಿವೆ.

ಶೀಘ್ರದಲ್ಲೇ ಕಾರ್ಯಾರಂಭ:

ಹುದ್ದೆಗಳ ಸೃಜನೆಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿರುವುದರಿಂದ, ಮುಂದಿನ ದಿನಗಳಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಮಾರ್ಗಸೂಚಿಯಂತೆ ನೇಮಕಾತಿ ಅಥವಾ ನಿಯೋಜನೆ ಪ್ರಕ್ರಿಯೆ ನಡೆಯಲಿದ್ದು, ಮೂಲಸೌಕರ್ಯಗಳ ವ್ಯವಸ್ಥೆಯಾದ ಬೆನ್ನಲ್ಲೇ ನ್ಯಾಯಾಲಯಗಳು ಅಧಿಕೃತವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ. ಈ ನಿರ್ಧಾರದಿಂದ ಕೊಪ್ಪಳ ಜಿಲ್ಲೆಯ ನ್ಯಾಯಾಂಗ ವ್ಯವಸ್ಥೆಗೆ ಹೊಸ ಬಲ ಬಂದಂತಾಗಿದೆ.

Leave a Reply

error: Content is protected !!