You are currently viewing ಮುದಗಲ್ಲ :- ಪೆಟ್ರೋಲ್‌ಗೆ ಮುಗಿ ಬಿದ್ದ ಸವಾರರು.

ಮುದಗಲ್ಲ :- ಪೆಟ್ರೋಲ್‌ಗೆ ಮುಗಿ ಬಿದ್ದ ಸವಾರರು.

ಮುದಗಲ್ಲ :- ಪೆಟ್ರೋಲ್‌ಗೆ ಮುಗಿ ಬಿದ್ದ ಸವಾರರು..

ಮುದಗಲ್ಲ :- ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ಹಾಗೂ ಅಲಭ್ಯ ಎಂದು ಮಂಗಳವಾರ ಮಧ್ಯಾಹ್ನದಿಂದ ಇಂತಹದೊಂದು ಸುದ್ದಿ ಹಬ್ಬುತ್ತಿದ್ದಂತೆ, ಇಲ್ಲಿರುವ ಭಾರತ ಪೆಟ್ರೋಲಿಯಂ, Nahar ಪೆಟ್ರೋಲ್ ಬಂಕ್ ಇಂಡಿಯನ್ ಪೆಟ್ರೋಲಿಯಂ, ಸೇರಿದಂತೆ ಪೆಟ್ರೋಲ್‌ಗೆ ಮುಗಿ ಬಿದ್ದ ಪೆಟ್ರೋಲ್ ಹಾಕಿಕೊಳ್ಳುವ ದೃಶ್ಯ ಕಂಡು ಬಂದಿವೆ ಸುಳ್ಳು ಸುದ್ದಿಯನ್ನು ನಂಬಿದ ಜನರು ಆತಂಕಗೊಂಡು ಇದೀಗ ಪೆಟ್ರೋಲ್ ಬಂಕ್‌ಗಳಿಗೆ ನೂಕುನುಗ್ಗಲು ಮಾಡುತ್ತಿದ್ದಾರೆ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧದ ಕಾರ್ಮೋಡಗಳು ತೈಲ ಬೆಲೆಯ ಮೇಲೆ ಭಾರಿ ಹೊಡೆತ ನೀಡಲಿವೆ ಎಂಬ ವದಂತಿ ಪಟ್ಟಣದಲ್ಲಿ ಸಂಚಲನ ಮೂಡಿಸಿದೆ. ಸುಳ್ಳು ಸುದ್ದಿಯನ್ನು ನಂಬಿದ ಜನರು ಆತಂಕಗೊಂಡು ಇದೀಗ ಪೆಟ್ರೋಲ್ ಬಂಕ್‌ಗಳಿಗೆ ನೂಕುನುಗ್ಗಲು ಮಾಡುತ್ತಿದ್ದಾರೆ ಯುದ್ಧದ ಹಿನ್ನೆಲೆಯಲ್ಲಿ ಪೆಟ್ರೋಲ್ ಬೆಲೆ ಏಕಾಏಕಿ ಹೆಚ್ಚಾಗಬಹುದು ಅಥವಾ ಪೂರೈಕೆ ಸ್ಥಗಿತಗೊಳ್ಳಬಹುದು ಎಂಬ ತಪ್ಪು ಗ್ರಹಿಕೆಯಿಂದ ಜನರು ಪೆಟ್ರೋಲ್ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಪಟ್ಟಣದ ಪ್ರಮುಖ ಪೆಟ್ರೋಲ್ ಪಂಪ್‌ಗಳಲ್ಲಿ ವಾಹನ ಸವಾರರು ಸಾಲುಗಟ್ಟಿ ನಿಂತಿದ್ದು, ಕೆಲವೇ ಗಂಟೆಗಳಲ್ಲಿ ಎರಡಕ್ಕೂ ಹೆಚ್ಚು ಬಂಕ್‌ಗಳಲ್ಲಿ ಪೆಟ್ರೋಲ್ ಸಂಪೂರ್ಣ ಖಾಲಿಯಾಗಿದೆ ಕೇವಲ ವಾಹನಗಳಿಗೆ ಮಾತ್ರವಲ್ಲದೆ, ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿಯೂ ಲೀಟರ್‌ಗಟ್ಟಲೆ ಪೆಟ್ರೋಲ್ ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬಂದಿವೆ.

ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!