ಮುದಗಲ್ಲ ವರದಿ..
ಪುರಸಭೆ ಕಚೇರಿಯಲ್ಲಿ ಕನಕ ಜಯಂತಿ ಆಚರಣೆ..
ಮುದಗಲ್ಲ:- ಪಟ್ಟಣದ ಪುರಸಭೆಯಲ್ಲಿ ದಾಸ ಶ್ರೇಷ್ಠ ಸಂತ ಕನಕದಾಸರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಭಕ್ತ ಕನಕ ದಾಸರ ಭಾವಚಿತ್ರಕ್ಕೆ ಸಮಾಜದ ಮುಖಂಡ ಮಂಜುನಾಥ ಬನ್ನಿಗೋಳಕರ್ ಹೂಮಾಲೆ ಹಾಕುವ ಮೂಲಕ ಪೂಜೆ ಸಲ್ಲಿಸಿ ಜಯಂತಿ ಆಚರಣೆ ಮಾಡಲಾಯಿತು.

ಜಯಂತಿ ಕಾರ್ಯಕ್ರಮದಲ್ಲಿ ಸಂತ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನಗಳನ್ನು ಸಲ್ಲಿಸಲಾಯಿತು.
ಕನಕದಾಸರು ತಮ್ಮ ಕೀರ್ತನೆಗಳು, ಸಾಹಿತ್ಯ ಹಾಗೂ ಸಾಮಾಜಿಕ ಚಿಂತನೆಗಳ ಮೂಲಕ ಸಮಾಜದಲ್ಲಿ ಸಮಾನತೆ, ಭಕ್ತಿ, ಮಾನವೀಯತೆ ಮತ್ತು ಜಾತಿಭೇದ ನಿವಾರಣೆಯ ಸಂದೇಶ ಸಾರಿದ ಮಹಾನ್ ಸಂತರು. ಅವರ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಗಣ್ಯರು ಸ್ಮರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮ್ಯಾನೇಜರ್ ಜಗದೀಶ್, ರೖಮತ್ ಹುನ್ನಿಸಾ,ವೆಂಕಟೇಶ ತಳವಾರ್ ,ಶಿವನಾಗಪ್ಪ ,ಕುರುಬ ಸಮಾಜದ ಮುಖಂಡರಾದ ಅಯಪ್ಪಯ್ಯ, ರಾಯಪ್ಪ, ನಂದಪ್ಪ, ಚನ್ನಬಸಪ್ಪ ,ಹಾಗೂ ಹಿರಿಯಮುಖಂಡರಾದ ,ಉದಯಕುಮಾರ ಕಮ್ಮಾರ,ಮಲ್ಲಪ್ಪ ಮಾಟೂರು,ಹುಸೇನ್ ಅಲಿ, ಸಜೀವ ಕುಮಾರ್, ಹಾಗೂ ಸಜೀವಪ್ಪ, ವೆಂಕಣ್ಣ, ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು..
ವರದಿ:- ಮಂಜುನಾಥ ಕುಂಬಾರ