You are currently viewing PV NEWS : ಕೊಪ್ಪಳ | ಕೋತಿ ದಾಳಿ ಬಳಿಕ ಕುಸಿದುಬಿದ್ದು 91 ವರ್ಷದ ವೃದ್ಧೆ ಸಾವು! ವಿಡಿಯೋ ವೈರಲ್..

PV NEWS : ಕೊಪ್ಪಳ | ಕೋತಿ ದಾಳಿ ಬಳಿಕ ಕುಸಿದುಬಿದ್ದು 91 ವರ್ಷದ ವೃದ್ಧೆ ಸಾವು! ವಿಡಿಯೋ ವೈರಲ್..

PV NEWS : ಕೊಪ್ಪಳ | ಕೋತಿ ದಾಳಿ ಬಳಿಕ ಕುಸಿದುಬಿದ್ದು 91 ವರ್ಷದ ವೃದ್ಧೆ ಸಾವು!

ಎಬ್ಬಿಸಲು ಬಂದ ಮಹಿಳೆಯ ಮೇಲೂ ಕೋತಿ ದಾಳಿ; ಘಟನೆ ಸಿಸಿಟಿವಿಯಲ್ಲಿ ಸೆರೆ

PV NEWS ಕನ್ನಡ 24×7| 

ಕೊಪ್ಪಳ, ಸೆ.21: ಮನೆಯ ಮುಂದೆ ನಿಂತಿದ್ದ 91 ವರ್ಷದ ವೃದ್ಧೆಯೊಬ್ಬರನ್ನು ಕೋತಿಯೊಂದು ತಳ್ಳಿದ ಪರಿಣಾಮ ಅವರು ನೆಲಕ್ಕೆ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಕೊಪ್ಪಳದ ಬಿ.ಟಿ. ಪಾಟೀಲ ನಗರದಲ್ಲಿ ನಡೆದಿದೆ.

ಮೃತರನ್ನು ಬಿ.ಟಿ. ಪಾಟೀಲ ನಗರದ ನಿವಾಸಿ ನಜಮುನಿಸಾ ಬೇಗಂ (91) ಎಂದು ಗುರುತಿಸಲಾಗಿದೆ. ಮನೆಯ ಮುಂದೆ ನಿಂತಿದ್ದ ವೇಳೆ ಕೋತಿಯೊಂದು ಏಕಾಏಕಿ ಅವರ ಮೇಲೆ ದಾಳಿ ನಡೆಸಿ ತಳ್ಳಿದೆ ಎನ್ನಲಾಗಿದ್ದು, ಪರಿಣಾಮ ಅವರು ನೆಲಕ್ಕೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ನಂತರ ನಜಮುನಿಸಾ ಬೇಗಂ ಅವರನ್ನು ಎಬ್ಬಿಸಲು ಮಹಿಳೆಯೊಬ್ಬರು ಮುಂದಾದಾಗ, ಆಕೆಯ ಮೇಲೂ ಕೋತಿ ದಾಳಿ ನಡೆಸಿದೆ ಎನ್ನಲಾಗಿದೆ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಘಟನೆಯಿಂದ ಬಿ.ಟಿ. ಪಾಟೀಲ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಗರದಲ್ಲಿ ಹೆಚ್ಚುತ್ತಿರುವ ಕೋತಿಗಳ ಹಾವಳಿಯನ್ನು ನಿಯಂತ್ರಿಸಲು ಸಂಬಂಧಿಸಿದ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

Prajavikshane

Chandru R Bhanapaur

Leave a Reply

error: Content is protected !!