You are currently viewing ಮುದಗಲ್ಲ :- ಶ್ರೀ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಶನಿವಾರ ಪೂರ್ವಭಾವಿ ಸಭೆ…

ಮುದಗಲ್ಲ :- ಶ್ರೀ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಶನಿವಾರ ಪೂರ್ವಭಾವಿ ಸಭೆ…

ಪೂರ್ವಭಾವಿ ಸಭೆ…

ಮುದಗಲ್‌: ಪಟ್ಟಣದ ಕುಂಬಾರ ಓಣಿಯ ಶ್ರೀ ಬಸವೇಶ್ವರ
ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಶನಿವಾರ ಪೂರ್ವಭಾವಿ ಸಭೆ ನಡೆಯಿತು.

ಆರ್ಥಿಕ ಸಂಪನ್ಮೂಲ ಸಂಗ್ರಹ, ದಾಸೋಹ,ರಥೋತ್ಸವ, ಭಕ್ತರ ಅನುಕೂಲದ ವ್ಯವಸ್ಥೆ ಕುಡಿಯುವ ನೀರು, ಸ್ವಚ್ಛತೆ, ವಿದ್ಯುತ್, ಸುಣ್ಣ-ಬಣ್ಣ ಹಚ್ಚಿಸುವುದು. 10 ದಿನ ನಡೆಯುವ ಅಮರೇಶ್ವರ ಚರಿತಾಮೃತ ಪ್ರವಚನ ಹಾಗೂ ಇತರೆ ವಿಷಯ ಕುರಿತು ಚರ್ಚಿ ಸಲಾಯಿತು.ಏ.9ರಿಂದ 19 ರವರೆಗೆ ನಿತ್ಯ ಸಾಯಂಕಾಲ ಗುರುಗುಂಟಾ ಅಮರೇಶ್ವರ ಚರಿತಾಮೃತ ಪ್ರವಚನ ಕಾರ್ಯಕ್ರಮ ಇರುತ್ತದೆ.ನಂದವಾಡಗಿ ಪೂಜ್ಯರಾದ ಡಾ.ಅಭಿನವ ಚೆನ್ನಬಸವ ಶಿವಾಚಾರ್ಯರಿಂದ ಪ್ರವಚನ ನಡೆಯುತ್ತದೆ. ಏ.20
ರಂದು ಬೆಳಗ್ಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆ,
ಕುಂಭ-ಕಳಸ ಜತೆಗೆ ಮಹಿಳೆಯರು ಭಾಗವಹಿಸುವರು.

ಸಾಯಂಕಾಲ ಮಹಾರಥೋತ್ಸವ ನಡೆಯುತ್ತದೆ. ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಪ್ಪ ಮಾಟೂರು, ಸಿದ್ಧಯ್ಯಸ್ವಾಮಿ ಸಾಲಿಮಠ, ವೀರಭದ್ರಯ್ಯ ಸರಗಣಾಚಾರಿ, ಅಮರೇಶ ತಲೇಖಾನ್,ಸಂಗಪ್ಪ ಕೊಡೆಕಲ್ಲ ,ಗುಂಡಪ್ಪ ಗಂಗಾವತಿ, ಶರಣಪ್ಪ ಕುಂಬಾರ  ,ಅಮರಪ್ಪ ಕುಂಬಾರ ,ಉದಯಕಂಬಾರ, ಶರಣಪ್ಪ ಸಜ್ಜನ್ ,ವಿಶ್ವನಾಥ, ಶರಣಪ್ಪ ಕುಂಬಾರ, ಆದಪ್ಪ ಕುಂಬಾರ , ಮಹಾಂತೇಶ್ ಗದ್ದಿ ,ಶಂಕರ ಮಾಟೂರು,ಮಂಜುನಾಥ ಕುಂಬಾರ , ಚೆನ್ನಪ್ಪ ಗದ್ದಿ, ಸಂಗಪ್ಪ ಪಟ್ಟಣಶೆಟ್ಟಿ ಇದ್ದರು.

ವರದಿ:-ಮಂಜುನಾಥ ಕುಂಬಾರ

Leave a Reply

error: Content is protected !!