You are currently viewing BREAKING : ದಲಿತ ಮುಖಂಡನ ಮೇಲೆ ಕುಕನೂರು ಪಿಎಸ್ಐಯಿಂದ ದೌರ್ಜನ್ಯ ಆರೋಪ : ಅಮಾನತು ಮಾಡುವಂತೆ ತಾಕೀತು..!!

BREAKING : ದಲಿತ ಮುಖಂಡನ ಮೇಲೆ ಕುಕನೂರು ಪಿಎಸ್ಐಯಿಂದ ದೌರ್ಜನ್ಯ ಆರೋಪ : ಅಮಾನತು ಮಾಡುವಂತೆ ತಾಕೀತು..!!

BREAKING : ದಲಿತ ಮುಖಂಡನ ಮೇಲೆ ಕುಕನೂರು ಪಿಎಸ್ಐಯಿಂದ ದೌರ್ಜನ್ಯ : ಅಮಾನತು ಮಾಡುವಂತೆ ತಾಕೀತು..!!

ಕುಕನೂರು : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಿಂದ ದಲಿತ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ ಎಂದು ದಲಿತ ಸಮಾಜದ ಮುಖಂಡರು ಆರಂಭಿಸಿದ್ದಾರೆ. ಪೊಲೀಸ್ ಠಾಣೆಯ ಬಳಿ ಬಹು ದೊಡ್ಡ ಹೈಡ್ರಾಮವೇ ನಡೆಯಿತು.

ಇದೀಗ ಕುಕನೂರು ಪೊಲೀಸ್ ಠಾಣೆ ಎದುರು ದಲಿತ ಸಂಘಟನೆಗಳ ಮುಖಂಡರಿಂದ ಧರಣಿ ಕುಳಿತುಕೊಂಡಿದ್ದು, ಪಿಎಸ್ಐಟಿ ಗುರುರಾಜ ಅಮಾನತು ಆಗೋವರೆಗೂ ನಮ್ಮ ಧರಣಿಯನ್ನು ಮುಂದುವರಿಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಹೌದು, ಇದೇ ತಾಲೂಕಿನ ತಾಳಕಲ್ ಗ್ರಾಮದ ಸಂಬಂಧಿಕರ ಜಗಳ ಬಗೆಹರಿಸಲು ಪೊಲೀಸ್ ಠಾಣೆಗೆ ಬಂದಂತಹ ಗಾಳೆಪ್ಪ ಹಿರೇಮನಿ ಎಂಬುವರ ಮೇಲೆ ಕುಕನೂರು ಪೊಲೀಸ್ ಠಾಣೆಯ ಪಿಎಸ್ಐ ಟಿ ಗುರುರಾಜ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.

ಕೊಪ್ಪಳ ವಿಭಾಗದ ಡಿವೈಎಸ್ಪಿ ಮುತ್ತಣ್ಣ ಸರ್ವಗೌಳ್ ಸ್ಥಳಕ್ಕೆ ಭೇಟಿ ನೀಡಿ, ನೊಂದ ಗಾಳಪ್ಪ ಎಂಬುವವರಿಂದ ಮಾಹಿತಿ ಕಲೆಹಾಕಿ, ಪ್ರತಿಭಟನಾಕರಾರಿಂದ ಮನವೊಲಿಸಲು ಪ್ರಯತ್ನ ಮಾಡಿದರು.

ಇದೇ ಸಂದರ್ಭದಲ್ಲಿ ಯಲಬುರ್ಗಾ ವೃತ್ತದ ಸಿಪಿಐ ಮೌನೇಶ್ ಪಾಟೀಲ್ ಹಾಗೂ ಜಿಲ್ಲೆಯ ಪ್ರಮುಖ ದಲಿತ ಮುಖಂಡರು ಇದ್ದರು.

Prajavikshane

Chandru R Bhanapaur

Leave a Reply

error: Content is protected !!