You are currently viewing LOCAL BREAKING : ಕೃಷಿಹೊಂಡದ ಹೂಳು ಎತ್ತುವಾಗ ಟ್ರ್ಯಾಕ್ಟರ್ ಪಲ್ಟಿ : ಚಾಲಕ ದುರ್ಮರಣ!!

LOCAL BREAKING : ಕೃಷಿಹೊಂಡದ ಹೂಳು ಎತ್ತುವಾಗ ಟ್ರ್ಯಾಕ್ಟರ್ ಪಲ್ಟಿ : ಚಾಲಕ ದುರ್ಮರಣ!!

LOCAL BREAKING : ಕೃಷಿಹೊಂಡದ ಹೂಳು ಎತ್ತುವಾಗ ಟ್ರ್ಯಾಕ್ಟರ್ ಪಲ್ಟಿ : ಚಾಲಕ ದುರ್ಮರಣ!!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :

ಕುಕನೂರು, ಏಪ್ರಿಲ್ 16 : ಕೃಷಿಹೊಂಡವೊಂದರಲ್ಲಿ ಸಂಗ್ರಹವಾಗಿದ್ದ ಹೂಳನ್ನು ತೆಗೆಯುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ತಾಲೂಕಿನ ತಳಕಲ್ ಗ್ರಾಮದ ಸಮೀಪ ನಡೆದಿದೆ.

​ಮೃತ ಚಾಲಕನನ್ನು ತಳಕಲ್ ಗ್ರಾಮದ ಬಸುವರಾಜ ಹಂಚಲಪ್ಪ ಚೀಲವಾಡಗಿ, (ವರ್ಷ 32 ವಯಸ್ಸು ) ಎಂದು ಗುರುತಿಸಲಾಗಿದೆ. ಮಳೆಗಾಲಕ್ಕೆ ಮುನ್ನ ಕೃಷಿಹೊಂಡವನ್ನು ಸಿದ್ಧಪಡಿಸಿಕೊಳ್ಳಲು ಹೂಳು ಎತ್ತುವ ಕೆಲಸ ನಡೆಯುತ್ತಿತ್ತು. ಹೊಂಡದ ಆಳವಾದ ಪ್ರದೇಶದಿಂದ ಹೂಳನ್ನು ತುಂಬಿಕೊಂಡು ಮೇಲಕ್ಕೆ ಹತ್ತುತ್ತಿದ್ದ ವೇಳೆ, ಮಣ್ಣಿನ ಕುಸಿತ ಅಥವಾ ತಾಂತ್ರಿಕ ಕಾರಣದಿಂದ ಟ್ರ್ಯಾಕ್ಟರ್ ದಿಢೀರನೆ ಹಿಂದಕ್ಕೆ ಉರುಳಿದೆ ಎನ್ನಲಾಗಿದೆ.

ಸ್ಥಳದಲ್ಲೇ ಸಾವು : ​ಟ್ರ್ಯಾಕ್ಟರ್ ಪಲ್ಟಿಯಾದ ವೇಗಕ್ಕೆ ಚಾಲಕ ಇಂಜಿನ್ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಸ್ಥಳೀಯರು ತಕ್ಷಣ ರಕ್ಷಣೆಗೆ ಧಾವಿಸಿ, ಹರಸಾಹಸ ಪಟ್ಟು ಅವರನ್ನು ಹೊರತೆಗೆದರಾದರೂ, ತೀವ್ರ ರಕ್ತಸ್ರಾವ ಹಾಗೂ ತಲೆಗೆ ಪೆಟ್ಟು ಬಿದ್ದಿದ್ದರಿಂದ ಚಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಕುಟುಂಬದ ಆಕ್ರಂದನ : ಮೃತ ಚಾಲಕನು ಕಳೆದ ಹಲವು ವರ್ಷಗಳಿಂದ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಕುಟುಂಬಕ್ಕೆ ಆಧಾರವಾಗಿದ್ದನು. ಘಟನಾ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತನಿಗೆ ಪತ್ನಿ ಹಾಗೂ 3 ವರ್ಷದ ಒಂದು ಗಂಡು ಮಗುವಿದೆ ಎಂದು ತಿಳಿದು ಬಂದಿದೆ.

 ಈ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

Leave a Reply

error: Content is protected !!