ಮದಗಲ್ಲ ವರದಿ
ನಿವೃತ್ತ ವೀರ ಯೋಧ ಶಿವು ಕುಮಾರ್ ಬಾವಿಕಟ್ಟಿ ಅವರಿಗೆ ಜನತಾಪೂರ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ..

ಮುದಗಲ್ಲ:- ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಶುಕ್ರವಾರ ಆಗಮಿಸಿದ ಯೋಧ ಶಿವು ಕುಮಾರ್ ಅವರನ್ನು ಮುದಗಲ್ಲ ಪಟ್ಟಣದ ಸಮೀಪದ ಜನತಾಪೂರ ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತಿಸಿದರು. ನೀಲಕಂಠೇಶ್ವರ ದೇವಸ್ಥಾನ ಮುಂಭಾಗದಿಂದ ಆರಂಭವಾದ ತೆರೆದ ಕಾರುನಲ್ಲಿ ಮೆರವಣಿಗೆ ಮುದಗಲ್ಲ ಮುಖ್ಯ ಬೀದಿಗಳಲ್ಲಿ ಸಂಚರಿಸಿತು.

ಮುದಗನಲ್ಲಿ ಬೈಕ್ ಜಾಥಾ ಮೂಲಕ ಜಯ ಘೋಷ ಗಳೊಂದಿಗೆ ಊರಿಗೆ ಕರೆ ತರಲಾಯಿತು.ಗ್ರಾಮದಲ್ಲಿ ಡೊಳ್ಳು ಕುಣಿತ ಮೆರುಗು ನೀಡಿತು. ಗಮನ ಸೆಳೆದರು.
ಇದು ಗ್ರಾಮದ ಹೆಮ್ಮೆ ವಿಷಯವಾಗಿದ್ದು, ನಿವೃತ್ತಿಯಾಗಿ ಗ್ರಾಮಕ್ಕೆ ಬರುತ್ತಿರುವ ಕಾರಣ ಗೌರವ ಸಲ್ಲಿಸಲು ಈ ಕಾರ್ಯಕ್ರಮ ಆಯೋಜಿ ಸಲಾಗಿದೆ’ ಎಂದು ಆಯೋಜಕರು ಮಾಹಿತಿ ನೀಡಿದರು.

ನಂತರ ಮಾತನಾಡಿ ದ ನಿವೃತ್ತ ವೀರ ಯೋಧ ಶಿವು ಕುಮಾರ್
ಗ್ರಾಮಸ್ಥರು ನೀಡಿರುವ ಸ್ವಾಗತವು ನನ್ನ ಜೀವಮಾನದ ಮುಖ್ಯಘಟ್ಟವಾಗಿದೆ. ಜನರು ತೋರಿಸಿದ ಪ್ರೀತಿಯಿಂದ ಇಷ್ಟು ವರ್ಷ ದೇಶ ಕಾಯುವ ಕಾರ್ಯ ವನ್ನು ಮಾಡಿದ್ದು ಸಾರ್ಥಕ ಭಾವ ಮೂಡಿಸಿದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಜನಪರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳುತ್ತೇನೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಭಾರತೀಯ ಸೇನೆಯಲ್ಲಿ ಸುಧೀರ್ಘ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಮೆರವಣಿಗೆ ಶಿವಕುಮಾರ್ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಮಹಿಳೆಯರು ಆರತಿ ಬೆಳಗಿ ತಮ್ಮೂರಿನ ವೀರ ಯೋಧನಿಗೆ ಬರ ಮಾಡಿ ಕೊಂಡರು. ಯೋಧ ಶಿವಕುಮಾರ್ ಕೊಡುಗೆ ಹೆತ್ತವರಿಗೆ ಸೆಲ್ಯೂಟ್ ಹೊಡೆದು ಗೌರವಿಸಿದರು.
ಜನತಾಪೂರ ಗ್ರಾಮಸ್ಥರು ಸೇರಿದಂತೆ ಯೋಧನ ಕುಟುಂಬಸ್ಥರು ಉಪಸ್ಥಿತರಿದ್ದರು.
ವರದಿ :-ಮಂಜುನಾಥ ಕುಂಬಾರ