ಸರ್ಕಾರಿ ನೌಕರರ ಸಂಘದ ಚುನಾವಣಗೆ ಹೈಕೋರ್ಟ್ ನಿಂದ ತಡೆಯಾಜ್ಞೆ!! : 10 ದಿನಗಳೊಳಗೆ ಹೇಳಿಕೆ ಸಲ್ಲಿಸುವಂತೆ ಚುನಾವಣಾ ಅಧಿಕಾರಿಗಳಿಗೆ ಸೂಚನೆ!
ಕುಕನೂರು : ರಾಜ್ಯಾದ್ಯಂತ ಇದೆ ತಿಂಗಳ 28 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆಯಲಿದ್ದು, ಈ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಪೀಠ ಧಾರವಾಡದಿಂದ ತಡೆಯಾಜ್ಞೆ ಬಂದಿದೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಹಾಗೂ ಯಲಬುರ್ಗಾ ತಾಲೂಕಿನ ಸರ್ಕಾರಿ ನೌಕರರ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞ ನೀಡಿದ್ದು, ಸರ್ಕಾರಿ ನೌಕರರ ಮತದಾರರ ಪಟ್ಟಿಯಲ್ಲಿ ಕೆಲವು ವ್ಯತ್ಯಾಸಗಳು ಕಂಡುಬಂದಿದ್ದು ಈ ಕಾರಣ ನೀಡಿ ಹೈಕೋರ್ಟ್ ತಡೆಯಾದೆ ನೀಡಿದೆ.
ಕುಕನೂರು ತಾಲೂಕಿನ ಕಂದಾಯ ಇಲಾಖೆಯ ನಿರ್ದೇಶಕ ಸ್ಥಾನಕ್ಕೆ ನಾಮಪತ್ರಗಳು ಸಲ್ಲಿಸಲಾಗಿತ್ತು, ಮೂರು ಜನ ಕಂದಾಯ ಇಲಾಖೆ ಅಧಿಕಾರಿಗಳು ನಾಮಪತ್ರಗಳು ಸಲ್ಲಿಸಿದ್ದರು. ಈ ನಾಮಪತ್ರಗಳಲ್ಲಿ ಲೋಪದೋಷ ಕಂಡು ಬಂದಿದೆ ಎಂದು ಚುನಾವಣಾ ಅಧಿಕಾರಿ ನಾಮಪತ್ರಗಳನ್ನು ತಿರಸ್ಕಿರಿದ್ದರು. ಇದನ್ನು ಪ್ರಶ್ನಿಸಿ ನಾಮಪತ್ರ ಸಲ್ಲಿಸಿದ ನೌಕರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇನ್ನೊಂದು ಪರ್ಯಾಯ ಪ್ರಕರಣದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳ ಹೆಸರುಗಳನ್ನು ಮತದಾರ ಪಟ್ಟಿಯಲ್ಲಿ ಬಿಡಲಾಗಿದೆ ಎಂದು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವಳಿ ತಾಲೂಕಿನ ಸಹಕಾರಿ ಸಂಘದ ಮತದಾರ ಪಟ್ಟಿಯಲ್ಲಿ ಅತ್ಯಂತ ಗೊಂದಲಮಯವಾಗಿದೆ ಎಂದು ಕೆಲ ದಿನಗಳ ಹಿಂದೆ ಕೆಲಸ ಸರ್ಕಾರ ನೌಕರರು ಅಭಿಪ್ರಾಯಪಟ್ಟಿದ್ದರು. ತಮಗೆ ಬೇಕಾದವರ ಸರ್ಕಾರಿ ನೌಕರರ ಹೆಸರುಗಳನ್ನ ಮತದಾರ ಪಟ್ಟಿಯಲ್ಲಿ ಸೇರಿಸಿದ್ದು, ತಮಗೆ ಯಬೇಕಾದವರಿಗೆ ಹಾಗೂ ತಮಗೆ ವಿರುದ್ಧ ಯಾರೀದ್ದರೋ ಅಂಥವರ ಹೆಸರುಗಳನ್ನ ಕೈ ಬಿಡಲಾಗಿದೆ ಎಂದು ಕೆಲ ಸರ್ಕಾರ ನೌಕರರು ಆರೋಪ ಮಾಡಿದ್ದರು.
ಇದೀಗ ಹೈಕೋರ್ಟ್ ತಡೆ ಆಜ್ಞೆಯ ಆದೇಶದ ಪ್ರಕಾರ. ರಿಟ್ ಅರ್ಜಿದಾರರು ಹಾಜರುಪಡಿಸಿದ ದಾಖಲೆಗಳನ್ನು ಪರಿಶೀಲಿಸಿದ ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ನ್ಯಾಯ ಪೀಠವು ಮತದಾರರ ಪಟ್ಟಿಯಲ್ಲಿ ಮೇಲ್ನೋಟಕ್ಕೆ ಕಂಡುಬರುವ ವ್ಯತ್ಯಾಸಗಳನ್ನು ಪರಿಗಣಿಸಿ ಅಕ್ಟೋಬರ್ 28. ರಂದು ಕೂಕನೂರು ತಾಲೂಕು ಸಂಘದ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸದಂತೆ ಮಧ್ಯಂತರ ತಡೆಯಾಜ್ಞೆ ಆದೇಶವನ್ನು ಅಕ್ಟೋಬರ್ 25 ರಂದು ಹೊರಡಿಸಿದೆ.
ರಿಟ್ ಅರ್ಜಿಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಕೇಂದ್ರ ಸಂಘ ಬೆಂಗಳೂರು, ಜಿಲ್ಲಾ ಸಂಘ, ಕೊಪ್ಪಳ, ತಾಲೂಕು ಸಂಘ, ಕುಕನೂರು ಮತ್ತು ಯಲಬುರ್ಗಾ ಹಾಗೂ ರಾಜ್ಯ ಮತ್ತು ತಾಲೂಕು ಚುನಾವಣಾ ಅಧಿಕಾರಿಗಳನ್ನು ಎದುರುದಾರನ್ನಾಗಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಸೂಚನಾ ಪತ್ರ ದೊರೆತ ಹತ್ತು ದಿನಗಳೊಳಗೆ ಹಾಜರಾಗಿ ಹೇಳಿಕೆ ನೀಡುವಂತೆ ಎದುರುದಾರರಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಲಾಗಿದೆ ಎಂದು ರಿಟ್ ಅರ್ಜಿಯಲ್ಲಿ ತಿಳಿಸಲಾಗಿದೆ.
“ಇದುವರೆಗೂ ನನಗೆ ಯಾವುದೇ ಅಧಿಕೃತವಾದಂತ ಮಾಹಿತಿ ಬಂದಿಲ್ಲ, ಕೆಲ ಜನ ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಷಡ್ಯಂತರ ರೂಪಿಸಿದ್ದಾರೆ. ತಾತ್ಕಾಲಿಕ ಮತದಾರ ಪಟ್ಟಿ ಪ್ರಕಟಗೊಂಡಾಗ, ಆಕ್ಷೇಪಣೆ ಸಲ್ಲಿಸಿ, ನಮ್ಮ ಗಮನಕ್ಕೆ ತರಬೇಕಾಗಿತ್ತು, ಚುನಾವಣೆಯ ಮತದಾನ ಇನ್ನೇನು ಹತ್ತಿರದಲ್ಲಿದ್ದಾಗ ಈ ರೀತಿ ಮಾಡಿದ್ದು ನಮಗೆ ಅನುಮಾನ ಮೂಡಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಕಾನೂನು ಪ್ರಕಾರ ಏನಾಗುತ್ತೆ ಕಾದು ನೋಡೋಣ, ಸತ್ಯಕ್ಕೆ ಎಂದು ಜಯ ಸಿಗಲಿದೆ”
ಮಹೇಶ್ ಸಬರದ್
ಪ್ರಭಾರಿ ಅಧ್ಯಕ್ಷ, ಕರ್ನಾಟಕ ರಾಜ ನೌಕರರ ಸಂಘ ತಾಲೂಕು ಘಟಕ ಕುಕನೂರು.