ELECTION BREAKING : ‘ಮತದಾರ ಪಟ್ಟಿಯಿಂದ ನಮ್ಮನ್ನು ಉದ್ದೇಶಪೂರ್ವಕವಾಗಿ ಕೈ ಬಿಟ್ಟಿದ್ದಾರೆ’ : ಸರ್ಕಾರಿ ನೌಕರ ಹಾಗೂ ಅರ್ಜಿದಾರ ಸಿದ್ದರಾಮರೆಡ್ಡಿ ಹೇಳಿಕೆ!!
ಕುಕನೂರು : ರಾಜ್ಯಾದ್ಯಂತ ಇದೆ ತಿಂಗಳ 28 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆಯಲಿದ್ದು, ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚುನಾವಣೆಗಯ ಮತದಾನಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದಿಂದ ತಡೆಯಾಜ್ಞೆ ಬಂದಿದೆ.
ಈ ಕುರಿತು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ನೌಕಕರ ಸಂಘದ ಸದಸ್ಯರು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದ್ದರು. ಈ ಬಗ್ಗೆ ಸವಿವರವಾಗಿ ಮಾತನಾಡಿದ ಕೃಷಿ ಇಲಾಖೆಯ ನೌಕರ ಹಾಗೂ ಅರ್ಜಿದಾರ ಸಿದ್ದರಾಮರೆಡ್ಡಿ, ‘ಸರ್ಕಾರಿ ನೌಕರರ ಸಂಘದ ಚುನಾವಣೆಯ ಮತದಾರ ಪಟ್ಟಿಯು ಗೊಂದಲಮವಾಗಿದ್ದು, ಕೃಷಿ ಇಲಾಖೆಯಲ್ಲಿನ 4 ನಾಲ್ಕು ಜನ ನೌಕರರನ್ನು ಮತದಾರ ಪಟ್ಟಿಯಿಂದ ಕೈ ಬಿಡಲಾಗಿದೆ. ಇದು ನಮಗೆ ಅನ್ಯಾಯವಾಗಿದೆ ಎಂದು ಅರ್ಜಿದಾರ ಸಿದ್ದರಾಮರೆಡ್ಡಿ ತಿಳಿಸಿದರು.
‘ಮತದಾರ ಪಟ್ಟಿಯಲ್ಲಿ ನಮ್ಮನ್ನು ಉದ್ದೇಶಪೂರ್ವಕವಾಗಿ ನಮಗೆ ಕೈ ಬಿಟ್ಟಿದ್ದಾರೆ. ಈಗಿರುವ ಹಂಗಾಮಿ ತಾಲೂಕ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಯಡವಟ್ಟಿಗೆ ನಾವು ಬಲಿಪಶುಗಳಾಗಿದ್ದೇವೆ. ತಮ್ಮ ಸ್ವಹಿತಾಸಕ್ತಿಗೆ ಕೆಲ ನೌಕರರಿಗೆ ಚುನಾವಣೆ ರಂಗದಿಂದ ದೂರವಿರಾಸಿದ್ದಾರೆ. ಹಾಗಾಗಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಇದೀಗ ಮಾನ್ಯ ನ್ಯಾಯಾಲಯವು ಕುಕನೂರು ತಾಲೂಕಿನ ಚುನಾವಣೆಗೆ ತಡೆಯಾಜ್ಞೆ ನೀಡಿದೆ. ಈ ಕುರಿತು ನ್ಯಾಯಾಲಯದ ಸೂಚನಾ ಪತ್ರವನ್ನು ಚುನಾವಣೆ ಅಧಿಕಾರಿಗೆ ಕೊಡಲು ಹೋದರೆ ನಿರಾಕರಿಸಿದ್ದಾರೆ.
‘ನನಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ, ನೀವು ಯಾರು? ನನಗೆ ಸೂಚನಾ ಪತ್ರವನ್ನು ಕೊಡುವುದಕ್ಕೆ ಎಂದು ಜೋರು ಧ್ವನಿಯಲ್ಲಿ ಮಾತನಾಡುತ್ತಾರೆ. ಒಬ್ಬ ಚುನಾವಣಾಧಿಕಾರಿ ಕೆಲವರ ಕೈ ಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಳಿಕ ವಾಸ್ತವವನ್ನು ಅರಿತ ಚುನಾವಣಾಧಿಕಾರಿ ತಮ್ಮ ಸಹಾಯಕರ ಮೂಲಕ ನ್ಯಾಯಲಯದ ಸೂಚನಾ ಪತ್ರವನ್ನು ಸ್ವೀಕರಿಸದರು’ ಎಂದು ಚುನಾವಣಾಧಿಕಾರಿ ಬಸಪ್ಪ ತಿಮ್ಮಾಪುರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಈ ವೇಳೆಯಲ್ಲಿ ಮಾತನಾಡಿದ ಷರೀಫ್ ನದಾಫ್ ಅವರು, “ಕಂದಾಯ ಇಲಾಖೆಯ ನೌಕಕರಾದ (ಮಹಮ್ಮದ್ ಮುಸ್ತಫಾ, ರಾಣಿ ಹಳ್ಳಿ, ಷರೀಫ್ ನದಾಫ್) ನಮ್ಮ ನಾಮಪತ್ರವನ್ನು ಯಾವುದೋ ಒಂದು ಕಾರಣ ಹೇಳಿ ತಿಸ್ಕರಿಸಿದ್ದಾರೆ. ನಮಗೆ ಯಾವುದೇ ಲಿಖಿತವಾಗಿ ಕಾರಣ ನೀಡಿಲ್ಲ, ಎಲ್ಲಾ ನೌಕರರನ್ನು ವಿಶ್ವಾಸಕ್ಕೆ ತಗೆದುಕೊಂಡು ಚುನಾವಣೆಯನ್ನು ನಡೆಸಿಬೇಕಿತ್ತು ಆದರೇ ಏಕಪಕ್ಷೀಯವಾಗಿ ದೊರಣೆ ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸರ್ಕಾರಿ ನೌಕರ ಸುಬಾಸ್ ಮದಿನೂರು, ‘ ಮಾನ್ಯ ನ್ಯಾಯಾಲಯದ ರಿಟ್ ಅರ್ಜಿಯಲ್ಲಿಸರ್ಕಾರಿ ಸಂಘದ ಜಿಲ್ಲಾ ಸಂಘ, ಕೊಪ್ಪಳ, ತಾಲೂಕು ಸಂಘ, ಕುಕನೂರು ಮತ್ತು ಯಲಬುರ್ಗಾ ಹಾಗೂ ರಾಜ್ಯ ಮತ್ತು ತಾಲೂಕು ಚುನಾವಣಾ ಅಧಿಕಾರಿಗಳನ್ನು ಎದುರುದಾರನ್ನಾಗಿ ಮಾಡಲಾಗಿದೆ. ಇನ್ನೋಂದು ಗಂಭೀರ ವಿಚಾರ ಏನೆಂದರೆ, ಯಲಬುರ್ಗಾ-ಕುಕನೂರು ತಾಲೂಕಿನ ನ್ಯಾಯಾಂಗ ಇಲಾಖೆಯಲ್ಲಿ ರಾಕೇಶ್ ಎಂಬ ಸರ್ಕಾರಿ ನೌಕನಿದ್ದಾನೆ. ಎಂದು ಸುಳ್ಳು ಮಾಹಿತಿ ನೀಡಿ ಸೇರಿಸಲಾಗಿದೆ. ಅಂತಹ ಹೆಸರಿನ ಯಾವೊಬ್ಬ ವ್ಯಕ್ತಿಯು ಇಲ್ಲಾ ಎಂದು ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ರೀತಿ ಕಳ್ಳಾಟ ಆಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಿದ್ದರಾಮರೆಡ್ಡಿ, ಷರೀಫ್ ನದಾಫ್, ಸುಬಾಸ್ ಮದಿನೂರು, ಮಹಾಂತೇಶ್ ಅಂಗಡಿ ಹಾಗೂ ಇತರರು ಇದ್ದರು.
ರಿಟ್ ಅರ್ಜಿಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಕೇಂದ್ರ ಸಂಘ ಬೆಂಗಳೂರು, ಜಿಲ್ಲಾ ಸಂಘ, ಕೊಪ್ಪಳ, ತಾಲೂಕು ಸಂಘ, ಕುಕನೂರು ಮತ್ತು ಯಲಬುರ್ಗಾ ಹಾಗೂ ರಾಜ್ಯ ಮತ್ತು ತಾಲೂಕು ಚುನಾವಣಾ ಅಧಿಕಾರಿಗಳನ್ನು ಎದುರುದಾರನ್ನಾಗಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಸೂಚನಾ ಪತ್ರ ದೊರೆತ ಹತ್ತು ದಿನಗಳೊಳಗೆ ಹಾಜರಾಗಿ ಹೇಳಿಕೆ ನೀಡುವಂತೆ ಎದುರುದಾರರಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಲಾಗಿದೆ ಎಂದು ರಿಟ್ ಅರ್ಜಿಯಲ್ಲಿ ತಿಳಿಸಲಾಗಿದೆ.
ಇನ್ನು ಚುನಾವಣಾಧಿಕಾರಿಗೆ ಸೂಚನಾ ಪತ್ರ ದೊರೆತ ಹತ್ತು ದಿನಗಳೊಳಗೆ ಹಾಜರಾಗಿ ಹೇಳಿಕೆ ನೀಡುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಲಾಗಿದೆ ಎಂದು ರಿಟ್ ಅರ್ಜಿಯಲ್ಲಿ ತಿಳಿಸಲಾಗಿದೆ. ಇದೀಗ ಚುನಾವಣಾಧಿಕಾರಿ ಬಸಪ್ಪ ತಿಮ್ಮಾಪುರ್ ಅವರ ನಡೆ ಭಾರೀ ಕೂತುಹಲ ಮೂಡಿಸಿದೆ. ಈ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ‘ನನಗೆ ಅಧಿಕೃತ ಮಾಹಿತಿ ಸಿಕ್ಕ ತಕ್ಷಣ ಚುನಾವಣೆ ಮೂಂದೂಡಲಾಗಿದೆ ಎಂದು ಪ್ರಕಟಣೆ ನೀಡುತ್ತೇವೆ ಎಂದರು.