You are currently viewing BIG NEWS : ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರ ಆರೈಕೆಗೆ ಹೊಸ ಮಾರ್ಗಸೂಚಿ : ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ !

BIG NEWS : ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರ ಆರೈಕೆಗೆ ಹೊಸ ಮಾರ್ಗಸೂಚಿ : ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ !

BIG NEWS : ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರ ಆರೈಕೆಗೆ ಹೊಸ ಮಾರ್ಗಸೂಚಿ : ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ !

ಪ್ರಜಾ ವೀಕ್ಷಣೆ ಡಿಜಿಟಲ್‌ ಸುದ್ದಿ : 

ಬೆಂಗಳೂರು, ಮಾ. 27 : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮತ್ತು ಗರ್ಭಿಣಿಯರ ಆರೈಕೆ ಸೇವೆಯನ್ನು ಮತ್ತಷ್ಟು ಬಲಪಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಟ್ಟುನಿಟ್ಟಿನ ಆದೇಶ ಒಂದನ್ನು ಹೊರಡಿಸಿದೆ. ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಮುಖ ಐದು ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.

1) ಸ್ತ್ರೀರೋಗ ತಜ್ಞರ ನಿಯೋಜನೆಗೆ ನಿರ್ಬಂಧ 

ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ಒಬ್ಬರೇ ಸ್ತ್ರೀರೋಗ ತಜ್ಞರಿದ್ದರೆ, ಅವರನ್ನು ಬೇರೆ ಊರಿನ ಶಿಬಿರಗಳಿಗೆ ಅಥವಾ ಶಸ್ತ್ರಚಿಕಿತ್ಸಾ ಕಾರ್ಯಕ್ರಮಗಳಿಗೆ ನಿಯೋಜಿಸುವಂತಿಲ್ಲ. ಒಂದು ವೇಳೆ ಈಗಾಗಲೇ ನಿಯೋಜನೆಗೊಂಡಿದ್ದರೆ, ಗರ್ಭಿಣಿಯರ ತುರ್ತು ಸೇವೆಗೆ ಅಡ್ಡಿಯಾಗದಂತೆ ತಕ್ಷಣವೇ ಅಂತಹ ನಿಯೋಜನೆಯನ್ನು ರದ್ದುಗೊಳಿಸಲು ಸೂಚಿಸಲಾಗಿದೆ.

2) ಕೇಂದ್ರಸ್ಥಾನದಲ್ಲೇ ವಾಸ ಕಡ್ಡಾಯ

ತಜ್ಞ ವೈದ್ಯರು ತಾವು ನಿಯೋಜನೆಗೊಂಡಿರುವ ಕೇಂದ್ರಸ್ಥಾನದಲ್ಲೇ ಕಡ್ಡಾಯವಾಗಿ ವಾಸವಿರಬೇಕು. ದೂರದ ಊರುಗಳಿಂದ ಪ್ರಯಾಣ ಮಾಡುವುದನ್ನು ನಿಷೇಧಿಸಲಾಗಿದೆ. ವೈದ್ಯರ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಲು KAMS ಮೊಬೈಲ್ ಆಪ್ ಮೂಲಕ ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ 10 ಗಂಟೆಗೆ ಹಾಜರಾತಿ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

3) ರಕ್ತದ ಲಭ್ಯತೆ ಮತ್ತು ಒಪ್ಪಂದ (MoU)

ಹೆರಿಗೆ ಸಮಯದಲ್ಲಿ ರಕ್ತದ ಕೊರತೆಯಾಗದಂತೆ ನೋಡಿಕೊಳ್ಳಲು ಪ್ರತಿಯೊಂದು ಸರ್ಕಾರಿ ಆಸ್ಪತ್ರೆಯು ಹತ್ತಿರದ ಕನಿಷ್ಠ 2-3 ಖಾಸಗಿ ಅಥವಾ ಸರ್ಕಾರಿ ರಕ್ತನಿಧಿ ಕೇಂದ್ರಗಳೊಂದಿಗೆ ಅಧಿಕೃತ ಒಪ್ಪಂದ (MoU) ಮಾಡಿಕೊಳ್ಳಬೇಕು. ಅಲ್ಲದೆ, ಖಾಸಗಿ ರಕ್ತದಾನ ಶಿಬಿರಗಳಲ್ಲಿ ಸಂಗ್ರಹವಾಗುವ ರಕ್ತದ ಶೇ. 25 ರಷ್ಟನ್ನು ಸರ್ಕಾರಿ ಆಸ್ಪತ್ರೆಗಳಿಗೆ ನೀಡುವುದು ಕಡ್ಡಾಯವಾಗಿದೆ.

4) ARC ಪಾರ್ಟೋಗ್ರಾಫ್ ಕಡ್ಡಾಯ ಅನುಷ್ಠಾನ

ಪ್ರತಿ ಹೆರಿಗೆಯ ಪ್ರಗತಿಯನ್ನು ನೈಜ ಸಮಯದಲ್ಲಿ (Real-time) ಪಾರ್ಟೋಗ್ರಾಫ್‌ನಲ್ಲಿ ದಾಖಲಿಸಬೇಕು. ಇದರಲ್ಲಿ ನಿರ್ಲಕ್ಷ್ಯ ತೋರಿದರೆ ಸಂಬಂಧಪಟ್ಟ ಆಸ್ಪತ್ರೆಯ ತಂಡಕ್ಕೆ ನೀಡಲಾಗುವ AB-ArK ಪ್ರೋತ್ಸಾಹಧನವನ್ನು (Incentives) ತಡೆಹಿಡಿಯಲಾಗುವುದು ಎಂದು ಎಚ್ಚರಿಸಲಾಗಿದೆ.

5) ಹೆರಿಗೆ ವಾರ್ಡ್‌ಗಳಿಗೆ ಕಡ್ಡಾಯ ಭೇಟಿ

ಕರ್ತವ್ಯದಲ್ಲಿರುವ ತಜ್ಞ ವೈದ್ಯರು ಕಡ್ಡಾಯವಾಗಿ ಹೆರಿಗೆ ಕೋಣೆ ಮತ್ತು ಬಾಣಂತಿ ವಾರ್ಡ್‌ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು. ಒಂದು ವೇಳೆ ಸ್ತ್ರೀರೋಗ ತಜ್ಞರ ಹುದ್ದೆ ಖಾಲಿಯಿದ್ದರೆ, ತಕ್ಷಣವೇ ಜಿಲ್ಲಾ ಆಸ್ಪತ್ರೆಯ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಲು ಸೂಚಿಸಲಾಗಿದೆ.

Prajavikshane

Chandru R Bhanapaur

Leave a Reply

error: Content is protected !!