You are currently viewing ಮುದಗಲ್ಲ :-ಜನಗಣತಿ: ಜವಾಬ್ದಾರಿಯಿಂದ ನಿರ್ವಹಿಸಿ’:- ಸತ್ಯಮ್ಮ ಭೋವಿ(ತಹಶೀಲ್ದಾರ್‌)

ಮುದಗಲ್ಲ :-ಜನಗಣತಿ: ಜವಾಬ್ದಾರಿಯಿಂದ ನಿರ್ವಹಿಸಿ’:- ಸತ್ಯಮ್ಮ ಭೋವಿ(ತಹಶೀಲ್ದಾರ್‌)

ಮುದಗಲ್ಲ :-ಜನಗಣತಿ: ಜವಾಬ್ದಾರಿಯಿಂದ ನಿರ್ವಹಿಸಿ’:- ಸತ್ಯಮ್ಮ ಭೋವಿ(ತಹಶೀಲ್ದಾರ್‌)..

ಮುದಗಲ್ಲ : ‘ಜನಗಣತಿ ಕಾರ್ಯ ರಾಷ್ಟ್ರದ ಅಭಿವೃದ್ಧಿಗೆ ಆಧಾರವಾಗಿದ್ದು, ಪ್ರತಿಯೊಬ್ಬ ಗಣತಿದಾರರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮತ್ತು ಜವಾಬ್ದಾರಿ ಯಿಂದ ನೆರವೇರಿಸಬೇಕು’ ಎಂದು ಲಿಂಗಸೂರ ತಹಶೀಲ್ದಾರ್‌ ಸತ್ಯಮ್ಮ ಭೋವಿ ಹೇಳಿದರು.

ಪಟ್ಟಣದ ಆರ್ ಸಿ ಮೀಶನ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜನಗಣತಿ 2027ರ ಅಂಗವಾಗಿ ಆಯೋಜಿಸಲಾದ ಗಣತಿದಾರರು ಹಾಗೂ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಗಣತಿದಾರರು ತಮ್ಮ ಬ್ಲಾಕ್ ಪ್ರದೇಶಗಳಲ್ಲಿ ಏ.15ರವರೆಗೆ ಸಂಚರಿಸಿ ಮಾಹಿತಿ ಸಂಗ್ರಹಿಸಿ ಕೊಳ್ಳಬೇಕು, ಜಾಗೃತಿ ಮೂಡಿಸಿ ಹೆಚ್ಚಿನ ಪ್ರಮಾಣದಲ್ಲಿ ಸ್ವಯಂ-ಗಣತಿ ನಡೆಯುವಂತೆ ಪ್ರೋತ್ಸಾಹಿಸಬೇಕು’ ಎಂದರು.

‘ಏ.16ರಿಂದ ಮೇ 15ರವರೆಗೆ ಜನವಸತಿ ಕಟ್ಟಡಗಳ ಸ್ಥಿತಿ, ಸೌಲಭ್ಯಗಳು ಹಾಗೂ ಸ್ವತ್ತುಗಳ ಕುರಿತು ವಿವರವಾದ ಮಾಹಿತಿ ಯನ್ನು ಸಂಗ್ರಹಿಸುವ ಕಾರ್ಯ ವನ್ನು ಸಮರ್ಪಕವಾಗಿ ನಿರ್ವಹಿಸಬೇಕು’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಪುರಸಭೆ ಯ ಮುಖ್ಯಾಧಿಕಾರಿ ಪ್ರವೀಣ್ ಬೋಗರ್ ಅವರು ಮಾತನಾಡಿ, ‘ಗಣತಿದಾರರು ಮನೆಮನೆಗೆ ತೆರಳಿ ಸರಿಯಾದ ಹಾಗೂ ನಿಖರ ಮಾಹಿತಿ ಸಂಗ್ರಹಿಸುವ ಮೂಲಕ ಜನಗಣತಿಯ ಯಶಸ್ಸಿಗೆ ಕೈಜೋಡಿಸಬೇಕು. ಸಾರ್ವಜನಿಕ ರೊಂದಿಗೆ ಉತ್ತಮ ಸಂವಹನ ಬೆಳೆಸಿ, ಅವರಿಗೆ ಸ್ವಯಂ-ಗಣತಿ ಕುರಿತು ಸ್ಪಷ್ಟ ಮಾಹಿತಿ ನೀಡಿ ಸಹಕಾರ ಪಡೆಯುವುದು ಅಗತ್ಯವಾಗಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ತುಳಜಾರಾಮ ಸಿಂಗ್, ಸಿ ಅರ್ ಪಿ ರಾಮಚಂದ್ರ ಢವಾಳೆ, ಮಲ್ಲಪ್ಪ ಸರ್  ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಶಿಕ್ಷಕರು ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು..

ವರದಿ:- ಮಂಜುನಾಥ ಕುಂಬಾರ.

Leave a Reply

error: Content is protected !!