BREAKING : ಕುಕನೂರು | ಪತಿಯಿಂದಲೇ ಪತ್ನಿಯ ಹತ್ಯೆ! : ಪತಿ ವಿರುದ್ಧ ಎಫ್ ಐ ಆರ್ ದಾಖಲು!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು, ಏಪ್ರಿಲ್ 07 : ತಾಲೂಕಿನ ಸೋಂಪುರ ಗ್ರಾಮದಲ್ಲಿ ಪತಿಯಿಂದಲೇ ತನ್ನ ಪತ್ನಿಗೆ ಹತ್ಯೆಮಾಡಿದ್ದ ಹೃದಯವಿದ್ರಾವಕ ಘಟನೆ ಸೋಮವಾರ ತಡರಾತ್ರಿ ನಡೆದಿದೆ ಎಂದು ತಿಳಿದು ಬಂದಿದೆ.
ಸೋಂಪುರ ಗ್ರಾಮದ ಮಹಿಳೆ ಮಾನವಿಕಾ (27) ಮೂಲತ: ದೆಹಲಿ ಮೂಲದ ಮಹಿಳೆ ಎಂದು ತಿಳಿದು ಬಂದಿದ್ದು, ಅದೇ ಗ್ರಾಮದ 31 ವರ್ಷದ ಯುವಕನನ್ನು ಸುಮಾರು ನಾಲ್ಕೈದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ.
ಕೆಲವು ತಿಂಗಳ ಹಿಂದೆ ಕೌಟುಂಬಿಕ ಕಲಹದಿಂದ ಇಬ್ಬರಿಗೂ ವೈಮನಸ್ಸು ಉಂಟಾಗಿತ್ತು ಎಂದು ತಿಳಿದು ಬಂದಿದೆ. ಈ ಕಾರಣಗಳಿಂದ ನಿನ್ನೆ ತಡರಾತ್ರಿ ಹಾರೋಪಿತನಾದ ಪತಿಯು ತನ್ನ ಹೆಂಡತಿಯನ್ನೇ ಕೊಂದಿದ್ದಾನೆ ಎಂದು ಪ್ರಾಥಮಿಕ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಈ ಘಟನೆವು ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿತನ ವಿರುದ್ಧ ಪ್ರಕರಣ ದಾಖಲಾಗಿದೆ.