ಮುದಗಲ್ಲ ವರದಿ…
ನಿರಾಳ ಬದುಕಿಗೆ ಗುಡುಗುಂಟಾ ಶ್ರೀ ಅಮರೇಶ್ವರ ಚರಿತಾಮೃತ ಅಡಿಪಾಯ: ಅಭಿನವ ಚನ್ನ ಬಸವ ಶಿವಾಚಾರ್ಯರು..
ಮುದಗಲ್ಲ :- ಪಟ್ಟಣದ ಕುಂಬಾರಪೇಟೆಯ ಬಸವೇಶ್ವರ ಜಾತ್ರಾ ಮಹೋತ್ಸವದ ಹಾಗೂ ಬಸವ ಜಯಂತಿ ಉತ್ಸವದ ನಿಮಿತ್ತ 11 ದಿನಗಳು ನಡೆಯುವ ಪುರಾಣದಲ್ಲಿ ಮೂರನೇ ದಿನದಂದು ತೊಟ್ಟಿಲು ಶಾಸ್ತ್ರದ ದಿನ ಪುರಾಣದಲ್ಲಿ ಮಾತನಾಡಿದರು.

ಸುಕ್ಷೇತ್ರ ಗುಡುಗುಂಟಾ ಶ್ರೀ ಅಮರೇಶ್ವರ ಚರಿತಾಮೃತ ಪುರಾಣದಲ್ಲಿ ಜಟ್ಟಿಂಗ ಮಹಾರಾಜ ಕಾಲದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ. ಆದಯ್ಯ ಮಳಾಗೊಂಡಮ್ಮ ಇವರ ಮಗನಾಗಿ ಜನಿಸಿ ಆನೇಕ ಪವಾಡಗಳನು ಮಾಡುತ್ತಾ ಐಕ್ಯರಾಗಿರುತ್ತಾರೆ. ಅಮರಿ ಗಿಡದ ಕೆಳಗೆ ಸಿಕ್ಕಿರುವುದರಿಂದ ಈ ಸ್ವಾಮಿಗೆ ಅಮರೇಶ್ವರವೆಂಬ ನಾಮಕರಣವಾಗಿರುತ್ತದೆ ಎಂದರು
ಮೂರನೇ ದಿನದ ಪುರಾಣದಲ್ಲಿ, ತೊಟ್ಟಿಲು ಶಾಸ್ತ್ರ , ಗರ್ಭಿಣಿಯರಿಗೆ ಊಡಿ ತುಂಬುವ ಕಾರ್ಯಕ್ರಮ ಹಾಗೂ ಮುತ್ತೈದಿಯರಿಗೆ ಉಡಿ ತುಂಬವ ಕಾಯ೯ಕ್ರಮ ಶನಿವಾರ ನಡೆದವು ಹಾಗೂ ಬದುಕು ಸುಗಮವಾಗಿ ಸಾಗಲು ಕಾಯಕ ಬೇಕು. ಆ ಕಾಯಕ ಯಾವುದಾ ದರೂ ಆಗಲಿ, ಅದರೊಳಗೆ ಆನಂದವನ್ನು ಕಂಡರೆ ಅದಕ್ಕಿಂತ ಬೇರೆ ಕೈಲಾಸವಿಲ್ಲ’ ಎಂದು ನಂದವಾಡಗಿಯ ಅಭಿನವ ಚನ್ನಬಸವ ಶಿವಾಚಾರ್ಯರು ಹೇಳಿದರು.

ಕಷ್ಟಗಳನ್ನು ಸಮಚಿತ್ತದಿಂದ ಎದುರಿಸುವ, ನೋವು-ನಲಿವು, ಹೊಗಳಿಕೆ ತೆಗಳಿಕೆಗಳನ್ನು ಸಮದೃಷ್ಟಿಯಿಂದ ಕಾಣುವ ಕಲೆಯನ್ನು ಬಸವಾದಿ ಶರಣರ ವಚನಗಳು ಕಲಿಸುತ್ತವೆ’ ಸಚ್ಚಾರಿತ್ರದಲ್ಲಿ ಇತರರ ಲೋಪದೋಷಗಳನ್ನು ಎತ್ತಿ ಮಾತನಾಡದೇ ಇರುವ ಸದ್ಗುಣವು ಮುಖ್ಯವಾಗಿದೆ. ನಾಲಿಗೆ ಚಪಲಶೀಲ. ಸದಾ ಇತರರನ್ನು ನಿಂದಿಸುವ ಅವರ ಕುಂದುಗಳನ್ನು ಎತ್ತಿ ಮಾತನಾಡುವ ಹೀನತೆ ಇದಕ್ಕಂಟಿದೆ. ನಾಲಿಗೆಗೆ ಕಡಿವಾಣ ಹಾಕದಿದ್ದರೆ ಆಗುವ ಹಾನಿಗಳಿಗೆ ಲೆಕ್ಕವಿಲ್ಲ. ಮೂರಂಗುಲದ ನಾಲಿಗೆ ಅರಡಿಯ ಮಾನವನನ್ನು ಕುಸಿಯುವಂತೆ ಮಾಡಬಲ್ಲದು. ಲೋಕವನ್ನೇ ಕಂಗೆಡಿಸಬಲ್ಲದು

‘ಖಿನ್ನತೆಗೆ ಒಳಗಾಗಿರುವ ಯುವ ಸಮುದಾಯ, ದುಡಿಯುವ ವರ್ಗ, ಗೃಹಿಣಿಯರು, ವೃತ್ತಿಪರರು ಹಾಗೂ ವಿದ್ಯಾರ್ಥಿಗಳ ನಿರಾಳ ಬದುಕಿಗೆ ಶರಣ ಚರಿತಾಮೃತ ಪುರಾಣವು ಅಡಿಪಾಯವನ್ನು ಒದಗಿಸುತ್ತದೆ’
‘ಮನಸ್ಸು ಅರಳಿಸುವ ಮಾತುಗಳೇ ಪುರಾಣ . ಇಂತಹ ನುಡಿಗಳನ್ನು ಕೇಳಿದಾಗ ಶಾರೀರಿಕ ಆರೋಗ್ಯದ ಜೊತೆಗೆ ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ ಆರೋಗ್ಯವನ್ನು ಸಾಧಿಸಿ ನೆಮ್ಮದಿ ಸಂತೃಪ್ತಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ’ ಎಂದರು

ಈ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮಾಟೂರು, ಶಿವಾನಂದ ಸುಂಕದ, ಸಂಗಮೇಶ ಸರಗಣಾಚಾರಿ, ವೀರೇಶ ಖೇಣೇದ, ಅಮರೇಶಪ್ಪ ತಲೇಖಾನ್, ಶರಣಪ್ಪ ಕುಂಬಾರ, ಚನ್ನಬಸವ ಕುಂಬಾರ ,ಮಹಾಂತೇಶ ಗದ್ದಿ, ಅನುರಾಧ ಸಾಲಿಮಠ, ಶಶಿಕಲಾ ಭೋವಿ, ಬಸಮ್ಮ ಪಾಟೀಲ, ತೋಟಮ್ಮ ಅಂಗಡಿ, ಬಸವರಾಜ ಬಳೆಗಾರ, ಶರಣಪ್ಪ ಕುಂಬಾರ್ ಬಸಯ್ಯಸ್ವಾಮಿ, ನಾಗರಾಜ ದಫೇದಾರ, ಬಸವರಾಜ ಚಟ್ಟೇರ್, ಇದ್ದರು.
ವರದಿ:- ಮಂಜುನಾಥ ಕುಂಬಾರ