ಮುದಗಲ್ಲ ವರದಿ.
ಮುದಗಲ್ಲ :-ಕಸ-ಕಡ್ಡಿಗಳಿಂದ ತುಂಬಿರುವ ರಸ್ತೆ ಚರಂಡಿ ಇಲ್ಲದೆ ರಸ್ತೆ ಯ ಮೇಲೆ ನೀರು : ಸಾಂಕ್ರಾಮಿಕ ರೋಗದ ಭೀತಿಯಲ್ಲಿ 18ನೇ ವಾಡ೯ ಜನತೆ..
ಮುದಗಲ್ಲ :- ವಾಡ೯ ನಂಬರ್ 18 ರಲ್ಲಿ ಕಿಲ್ಲಾದ ದರ್ಗಾದ ಹಿಂದೆ ಸಿ.ಸಿ ರಸ್ತೆ ಪಕ್ಕದಲ್ಲಿ ಚರಂಡಿ ನಿಮಾ೯ನ ಮಾಡಿಲು ಮನವಿ..

ಮುದಗಲ್ಲ :-ಲಿಂಗಸಗೂರು ತಾಲೂಕಿನ ಮುದಗಲ್ಲಿನ ಪಟ್ಟಣದ
ಕಿಲ್ಲಾದ ದರ್ಗಾದ ಹಿಂದೆ ವಾಸಿಸುವ ಸಾರ್ವಜನಿಕರು 18 ನೇ ವಾರ್ಡ (ಹುಸೇನಿ ಆಲಂ ದರ್ಗಾದ ಹಿಂದೆ) ಚರಂಡಿ ಇಲ್ಲದ ಕಾರಣ ಸಾರ್ವಜನಿಕರ ನಳದ ನೀರು ಮತ್ತು ಸವ೯ಜನಿಕರ ಗುಮ್ಮಿಯ ನೀರು ರಸ್ತೆಯ ಮೇಲೆ ನಿಲ್ಲುವುದ ರಿಂದ ಇಲ್ಲಿಯ ಸಾರ್ವಜನಿಕರಿಗೆ ತಿರುಗಾಡಲು ತೊಂದರೆ ಯಾಗುತ್ತಿದೆ.

ಗುಮ್ಮಿಯ ನೀರು ಸತತವಾಗಿ ರಸ್ತೆಯ ಮೇಲೆ ನಿಲ್ಲುವುದರಿಂದ ಸೊಳ್ಳೆಗಳ ತಾಣವಾಗಿ ಸಾಂಕ್ರಮಿಕ
ರೋಗಗಳು ಹರಡುವ ಭೀತಿ ಉಂಟಾಗಿದೆ, ಹಾಗೂ ಇದಲ್ಲದೆ ಪುರಸಭೆಯ ಕಸಗುಡಿಸುವವರು ಸಮಯಕ್ಕೆ ಕಸ ವಿಲೇವಾರಿ ಮಾಡುತ್ತಿಲ್ಲ ಹಾಗೂ ರಸ್ತೆಯ ಪಕ್ಕದಲ್ಲಿ `ದನಕರಗಳ ಕಸದ ತಿಪ್ಪೆಗಳು ಇರುವುದರಿಂದ ಕಸವು ರಸ್ತೆಯ ಮೇಲೆ ಹರಡುತ್ತದೆ ಇದರಿಂದ ಕೆಟ್ಟ ದುರ್ವಾಸನೆ ಉತ್ಪಾತ್ತಿಯಾಗಿ ಸವ೯ಜನಿಕರಿಗೆ ತಿರುಗಾಡಲು ಬಹಳ ತೊಂದರೆ ಯಗುತ್ತಿದೆ.

ಮಳೆ ಬಂದಲ್ಲಿ ಮಳೆಯ ನೀರು ಕೂಡ ರಸ್ತೆಯ ತುಂಬ ಹರಡುತ್ತದೆ.ಸವಾ೯ಜನಿಕರಿಗೆ ಓಡಾಡುಲು ತುಂಬ ತೊಂದರೆ ಆಗುತ್ತದೆ ಸುಮಾರು ಸಾರಿ ಮುಖ್ಯಾಧಿಕಾರಿ ಮನವಿ ಸಲ್ಲಿಸಿದರ ಅಧಿಕಾರಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಎಂದು ಸ್ಥಳೀಯ ರಾದ ದೌಲಸಾಬ ಕೊರಿ ಅವರು ಆರೋಪ ಮಾಡಿದರು ಆದಷ್ಟು ಬೇಗನೆ ಚರಂಡಿ ವ್ಯವಸ್ಥೆ ಮಾಡಿ ವಾಡಿ೯ನ ಜನರಿಗೆ ತೊಂದರೆ ಯನ್ನು ನಿವಾರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಎಂದು ಪುರಸಭೆ ಗೆ ಮನವಿ ಸಲ್ಲಿಸಿದರು..

ವರದಿ:–ಮಂಜುನಾಥ ಕುಂಬಾರ…
