Post Views: 222
ಮುದಗಲ್ಲ ವರದಿ..
ಮುದಗಲ್ಲ :-ವಿಜೃಂಭಣೆಯ ವಾಸವಿ ಜಯಂತಿ ಆಚರಣೆ.
ಮುದಗಲ್ಲ: ಇಲ್ಲಿನ ಆರ್ಯ ವೈಶ್ಯ ಸಮಾಜ ಹಾಗೂ ವಾಸವಿ ಮಹಿಳಾ ಸಂಘದ ಆಶ್ರಯದಲ್ಲಿ ರವಿವಾರ ವಾಸವಿ ಜಯಂತಿ ಯನ್ನು ವಿಜೃಂಭಣೆ ಯಿಂದ ಆಚರಿಸಲಾಯಿತು.

ಪಟ್ಟಣದ ನಗರೇಶ್ವರ ದೇವಸ್ಥಾನ ದಲ್ಲಿ ವಾಸವಿ ದೇವಿಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಹೋಮ ಹವನಗಳು, ಐಕ್ಯತಾ ಭವ್ಯ ಮೆರವಣಿಗೆ ನಡೆದ್ದಿದು, ಸಮಾಜದ ಬಾಂಧವರು ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.

ದೇವಸ್ಥಾನದ ಆವರಣದಲ್ಲಿ ಗಂಗೆ ಪೂಜೆ ನಡೆಸಿ ಕನ್ನಿಕಾ ಪರಮೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ
ನಾಗರೇಶ್ವರ ದೇವಸ್ಥಾನ ದಿಂದ ಪ್ರಮುಖ ರಸ್ತೆಯ ಬೀದಿ ಮೂಲಕ ನಗರೇಶ್ವರ ದೇವಸ್ಥಾನ ತಲುಪಿತು.
ಮಹಿಳೆಯರು ಏಕವರ್ಣದ ಸೀರೆ ಯಲ್ಲಿ ಭಾಗವಹಿಸಿದ್ದರು.

ನಗರೇಶ್ವರ ದೇಗುಲದಲ್ಲಿ ಪೂಜೆ, ಅಭಿಷೇಕ, ಕುಂಕುಮಾರ್ಚನೆ,ಅಷ್ಟೋತ್ತರ ನಾಮಾವಳಿ, ತೊಟ್ಟಿಲು ಸೇವೆ, ಪ್ರಸಾದ, ಇತರೆ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆದವು.
ಮುದಗಲ್ಲ ಪ್ರಮುಖ ರಸ್ತೆ ಮುಖಾಂತರ ಸಕಲ ವಾಧ್ಯ ವೈಭವ, ಡಿಜೆ ಸಾಂಗ್ ಗೆ ಯುವಕರು ಡ್ಯಾನ್ಸ್ ಮಾಡುವುದು ಗಮನ ಸೆಳೆಯಿತು ಸಾರೋಟಿನ ಮೆರವಣಿಗೆ ನಡೆಯಿತು
ಈ ಸಂದರ್ಭದಲ್ಲಿ ವಾಸವಿ ಜಯಂತಿಯ ಕಾರ್ಯಕ್ರಮದಲ್ಲಿ ಆರ್ಯ ವೈಶ್ಯ ಕುಲ ಬಾಂಧವರು ಭಾಗವಹಿಸಿದ್ದರು.

ವರದಿ:- ಮಂಜುನಾಥ ಕುಂಬಾರ
