You are currently viewing LOCAL NEWS : ಕಾರ್ಯನಿರತ ಪತ್ರಕರ್ತರ ಧ್ವನಿಗೆ ಪ್ರಧಾನ ಕಾರ್ಯದರ್ಶಿ ಕೊನಾರಿ, ಉಪಾಧ್ಯಕ್ಷರಾಗಿ ಮುರಾರಿ ಆಯ್ಕೆ!!

LOCAL NEWS : ಕಾರ್ಯನಿರತ ಪತ್ರಕರ್ತರ ಧ್ವನಿಗೆ ಪ್ರಧಾನ ಕಾರ್ಯದರ್ಶಿ ಕೊನಾರಿ, ಉಪಾಧ್ಯಕ್ಷರಾಗಿ ಮುರಾರಿ ಆಯ್ಕೆ!!

LOCAL NEWS : ಕಾರ್ಯನಿರತ ಪತ್ರಕರ್ತರ ಧ್ವನಿಗೆ ಪ್ರಧಾನ ಕಾರ್ಯದರ್ಶಿ ಕೊನಾರಿ, ಉಪಾಧ್ಯಕ್ಷರಾಗಿ ಮುರಾರಿ ಆಯ್ಕೆ!!

ಪ್ರಜಾ ವೀಕ್ಷಣೆ ಡಿಜಿಟಲ್ ಸುದ್ದಿ : 

ಕುಕನೂರು : ತಾಲೂಕು ಕಾರ್ಯನಿರತ ಪತ್ರಕರ್ತರ ದ್ವನಿ ಸಂಘದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಉದಯವಾಣಿ ಪತ್ರಿಕೆಯ ಹಿರಿಯ ವರದಿಗಾರ ಬಸವರಾಜ್ ಕೊನಾರಿ ಮತ್ತು ಉಪಾಧ್ಯಕ್ಷರಾಗಿ ವಿಶ್ವವಾಣಿ ಪತ್ರಿಕೆಯ ಹಿರಿಯ ವರದಿಗಾರ ಮುರಾರಿ ಬಜೇಂತ್ರಿ ಅವರನ್ನು ಆಯ್ಕೆ ಮಾಡಲಾಗಿದೆ.

ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘದ ಜಿಲ್ಲಾಧ್ಯಕ್ಷ ಸುನಿಲ್ ಮಠದ ಅವರ ಉಪಸ್ಥಿತಿಯಲ್ಲಿ ನೂತನ ಸದಸ್ಯರಿಗೆ ಪ್ರಧಾನ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರ ಜವಾಬ್ದಾರಿ ನೀಡಿ ಸಂಘಕ್ಕೆ ಬರಮಾಡಕೊಂಡರು.

ಈ ಸಂದರ್ಭದಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಹಾಗೂ ಉದಯವಾಣಿ ಪತ್ರಿಕೆ ವರದಿಗಾರ ಬಸವರಾಜ್ ಕೊನಾರಿ ಮಾತನಾಡಿ, ‘ಸಮಾಜದ ಸ್ವಾಸ್ತ್ಯ ಕಾಪಾಡುವುದು ಪತ್ರಕರ್ತರ ಜವಾಬ್ದಾರಿ ಮತ್ತು ಕರ್ತವ್ಯ. ಪತ್ರಕರ್ತರ ಸ್ವಾಸ್ತ್ಯ ಕಾಪಾಡುವುದು ಆಯಾ ಸಂಘದ ಅಧ್ಯಕ್ಷರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

ವಿಶ್ವವಾಣಿ ವರದಿಗಾರ ಮುರಾರಿ ಬಜೇಂತ್ರಿ ಮಾತನಾಡಿ, ‘ಪತ್ರಕರ್ತರ ಶ್ರಯೋಭಿವೃದ್ಧಿಗೆ ಸಂಘಗಳು ಆಸರೆಯಾಗಿವೆ’ ಎಂದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಚಂದ್ರು ಭಾನಾಪುರ, ಗೌರವ ಅಧ್ಯಕ್ಷ ಮಹೇಶ್ ಕಲ್ಮಠ, ಜಿಲ್ಲಾ ಸಹ ಕಾರ್ಯದರ್ಶಿ ವಿರೇಶ್ ವ್ಹಿ ಹಿರೇಮಠ್, ವರದಿಗಾರರಾದ ಈರಯ್ಯ ಕುರ್ತಕೋಟಿ, ವಿಶ್ವನಾಥ್ ಪಟ್ಟಣಶೆಟ್ಟಿ, ಭೀಮಾ ಶಂಕರ್ ಪಾಣೆಗಾಂವ್, ಮಲ್ಲಯ್ಯ, ಅಲ್ಲಾ ಬೇಗಂ ಇತರರು ಉಪಸ್ಥಿತರಿದ್ದರು.

Leave a Reply

error: Content is protected !!