ಮುದಗಲ್ಲ ವರದಿ…
ಮುದಗಲ್ಲ :- ತ್ಯಾಗ – ಬಲಿದಾನದ ಸಂಕೇತ ಬಕ್ರೀದ್: ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ..
ಮುಸ್ಲಿಂ ಬಾಂಧವರಿಂದ ಬಕ್ರೀದ್ ಹಬ್ಬ ಆಚರಣೆ ..
ಮುದಗಲ್ : ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಈದ್ ಉಲ್ ಅದಾ ಬಕ್ರಿದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಸಂಭ್ರಮದಿಂದ ಗುರುವಾರ ಆಚರಿಸಿದರು.

ಬೆಳಿಗ್ಗೆ ಪಟ್ಟಣದ ಎರಡು ಈದ್ಗ ಮೈದಾನ ಸೇರಿದಂತೆ ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭ ಕೋರುವರ ಮೂಲಕ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಹಬ್ಬದ ಆಚರಣೆಯಲ್ಲಿ ಪುಟಾಣಿಗಳು, ಮಕ್ಕಳು, ಹಿರಿಯರು ವೃದ್ಧರು ಸೇರಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಹಬ್ಬದ ಆಚರಣೆಗೆ ಅನುಕೂಲವಾಗುವಂತೆ ಮತ್ತು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸ್ಥಳೀಯ ಪೊಲೀಸ್ ಠಾಣಾ ಪಿಎಸ್ಐ ವೆಂಕಟೇಶ್ ಮಾಡಗೇರಿ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಬ್ಬದ ಮುಂಚಿತವಾಗಿ ಪುರಸಭೆಯವರು ಈದ್ಗ ಮೈದಾನದ ಸ್ವಚ್ಛತೆಯಲ್ಲಿ ಪಾಲ್ಗೊಂಡು ಬಕ್ರೀದ್ ಹಬ್ಬದ ಆಚರಣೆ ಮಾಡಲು ಅನುಕೂಲ ಮಾಡಿಕೊಟ್ಟರು.

ಬಕ್ರೀದ್ ವಿಶೇಷ:ಪ್ರವಾದಿ ಇಬ್ರಾಹಿಂ ಅವರು ತಮ್ಮ ಪುತ್ರನನ್ನು ದೇವರಿಗೆ ಅರ್ಪಣೆ ಮಾಡಲು ಮುಂದಾದಾಗ ಮಹಮ್ಮದ್ ಪೈಗಂಬರರು ಇಬ್ರಾಹಿಂ ಪುತ್ರನನ್ನು ಬಲಿ ನೀಡದೇ ಕುರಿಯನ್ನು ಅರ್ಪಣೆ ಮಾಡುವಂತೆ ಹೇಳುತ್ತಾರೆ. ಆಗ ಕುರಿಯನ್ನು ಅರ್ಪಿಸುತ್ತಾರೆ. ಅಂದಿನಿಂದ ಬಕ್ರೀದ್ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಬಕ್ರೀದ್ನಲ್ಲಿ ಮುಖ್ಯವಾಗಿ ಮುಸಲ್ಮಾನರು ದಾನ ಧರ್ಮಗಳನ್ನು ಮಾಡುವವರು. ಇಂದು ಪ್ರತಿಯೊಬ್ಬ ಮುಸಲ್ಮಾನರು ದಾನವನ್ನು ಮಾಡುತ್ತಾರೆ. ಬಕ್ರೀದ್ನಲ್ಲಿ ನೀಡುವ ಬಲಿಯಲ್ಲಿ ಮೂರು ಭಾಗಗಳನ್ನು ಮಾಡಲಾಗುತ್ತದೆ. ಒಂದು ಭಾಗವನ್ನು ದಾನ ಮಾಡುವವರು ತಾವೇ ಇಟ್ಟುಕೊಂಡು, ಉಳಿದ ಎರಡು ಭಾಗಗಳಲ್ಲಿ ಒಂದು ಭಾಗವನ್ನು ಸಂಬಂಧಿಕರಿಗೆ ಹಾಗೂ ಇನ್ನೊಂದು ಭಾಗವನ್ನು ಅಶಕ್ತರಿಗೆ ನೀಡಲಾಗುತ್ತದೆ. ಇದೇ ಬಕ್ರೀದ್ನ ವಿಶೇಷ ಎನ್ನಬಹುದು.

ಪವಿತ್ರ ಹಜ್ ಯಾತ್ರೆಯು ಇಸ್ಲಾಮಿನ ವಿಶ್ವ ಭ್ರಾತತ್ವದ ಸಂಕೇತವಾಗಿ ಹಾಗೂ ಬಲಿದಾನದ ನೆನಪಿಗಾಗಿ ಬಕ್ರೀದ್ ಹಬ್ಬ ಆಚರಿಸಲಾಗುತ್ತದೆ. ಮಸೀದಿಯ ಮೌಲನ್ ರು ತಮ್ಮ ಸಂದೇಶದಲ್ಲಿ ಸಂಕಷ್ಟದಲ್ಲಿರೋರಿಗೆ ಸಹಾಯ ಮಾಡುವ ಮನೋಭಾವನೆ ಜೀವನದಲ್ಲಿ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಎಲ್ಲರೂ ಪ್ರೀತಿ ಒಗ್ಗಟ್ಟಿನಿಂದ ಸಮಾಜದಲ್ಲಿ ಶಾಂತಿಯುತವಾಗಿ ಬದುಕು ಬೇಕು ಎಂದು ಸಲಹೆ ನೀಡಿದರು.
ವರದಿ:-ಮಂಜುನಾಥ ಕುಂಬಾರ