LOCAL NEWS : ಅಶಿಹಾಳ ತಾಂಡದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿಗಾಗಿ ವಿದ್ಯಾರ್ಥಿಗಳ ಪರದಾಟ..!!

ಅಂಬೇಡ್ಕರ್ ವಸತಿ ಶಾಲೆ ಅಶಿಹಾಳ ತಾಂಡ ಶಾಲೆಯ ಮಕ್ಕಳ ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಕಸ ಕಡಿಗಳು ರಾಶಿ..!
ಮುದಗಲ್ಲ : ಮುದಗಲ್ಲ ಸಮೀಪದ ಅಶಿಹಾಳ ತಾಂಡದ ಸಮಾಜ ಕಲ್ಯಾಣ ಇಲಾಖೆ ಅಧೀನದ ಭಾರತ ರತ್ನ ಡಾ!! ಬಿ .ಆರ್ ಅಂಬೇಡ್ಕರ್ ವಸತಿ ಶಾಲೆ ಯಲ್ಲಿ. ಅಗತ್ಯವಾಗಿ ಬೇಕಾಗಿರುವ ಮೂಲಸೌಕರ್ಯಗಳೇ ಇಲ್ಲ ಎನ್ನುವುದು, ಮಕ್ಕಳ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿವೆ ಕನಿಷ್ಠ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಹಾಗೂ ಶುದ್ದ ನೀರಿನ ಘಟಕ ಸ್ಥಾಪನೆ ಇಲ್ಲದ್ದಿರುವುದು ಹಾಗೂ ಕಂಪೌಂಡ್ ದುರಸ್ತಿ ಹಾಗೂ ಶಾಲೆಯಲ್ಲಿ ಶಿಕ್ಷಕರ ಕೊರತೆ ಹಾಗೂವಸತಿ ನಿಲಯ ಕೊರತೆ ಶಾಲೆಗೆ ಕಾಂಪೌಂಡ್ ಸೌಲಭ್ಯವಿಲ್ಲ ಇಲ್ಲದ್ದಿರುವುದ ನಿಜಕ್ಕೂ ಆತಂಕ ಕಾರಿ ಸಂಗತಿಯಾಗಿದೆ.

ಇಲ್ಲಿ ಮಕ್ಕಳ ಗೋಳು ಕೇಳೋರು ಯಾರು? ಇಲ್ಲ ಶಾಲೆಯಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಕಷ್ಟಪಡು ವಂತಾಗಿದೆ. ಮಕ್ಕಳಿಗೆ ಕುಡಿಯಲು ಸಹ ನೀರಿಲ್ಲ. ಸಮೀಪದ ಟ್ಯಾಂಕ್, ಬೋರ್‍ವೆಲ್, ಶುದ್ಧ ಕುಡಿಯುವ ನೀರಿನ ಸಲುವಾಗಿ ಮನೆಗಳಿಂದ ಬಾಟಲ್ ಮೂಲಕ ನೀರು ಒಯ್ಯ ಬೇಕಿದೆ. ವಿಶಾಲವಾದ ಶಾಲಾ ಮೈದಾನವಿದ್ದರೂ ಅಭಿವೃದ್ಧಿ ಕೊರತೆ ಕಂಡು ಬಂದಿದೆ.

ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಅವರ ಆರೋಗ್ಯ ಮತ್ತು ಉತ್ತಮ ಕಲಿಕೆಗೆ ಅತ್ಯಗತ್ಯವಾಗಿದೆ. ಆದರೆ ಭಾರತ ರತ್ನ ಡಾ!! ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಅಶಿಹಾಳ ತಾಂಡ ದಲ್ಲಿ ಶುದ್ಧೀಕರಣ ವ್ಯವಸ್ಥೆ (Water. Purification) RO ಪ್ಲಾಂಟ್ ಅಳವಡಿಕೆ ಇಲ್ಲ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆರ್‌ಒ (RO) ಅಥವಾ ಯುವಿ (UV) ವಾಟರ್ ಫಿಲ್ಟರ್‌ಗಳನ್ನು ಅಳವಡಿಯಾಗಿಲ್ಲ.

ನೀರಿಗಾಗಿ ಮಕ್ಕಳು ಕಸ ಬಿದ್ದಿರುವ ಟ್ಯಾಂಕರ್ ನೀರು ಬಳಸುವ ಸ್ಥಿತಿ ನಿರ್ಮಾಣವಾಗಿದೆ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಶುದ್ಧ ಕುಡಿವ ನೀರಿಲ್ಲದೇ ಮಕ್ಕಳು ಪರದಾಟ ಪಡುತ್ತಿದ್ದಾರೆ ಸ್ಥಳೀಯ ಮಾಹಿತಿ ಪ್ರಕಾರ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಮಕ್ಕಳು ಅಸ್ವಸ್ಥರಾಗಿರುವುದು ಮತ್ತು ಅನಾರೋಗ್ಯ ಕ್ಕೀಡಾಗಿ ರುವುದು ಕಂಡು ಬಂದಿದೆ.

ಈ ಬಗ್ಗೆ ಗ್ರಾಮಸ್ಥರಾದ ಸ್ಥಳೀಯ ನಿವಾಸಿ ವಿನೋದ್ ರಾಠೋಡ ಅವರು ಮಾತನಾಡಿ ಮಕ್ಕಳಿಗೆ ಕುಡಿಯಲು ಸಹ ನೀರಿಲ್ಲ. ಸಮೀಪದ ಟ್ಯಾಂಕ್, ಬೋರ್‍ವೆಲ್, ಮನೆಗಳಿಂದ ಬಾಟಲ್ ಮೂಲಕ ನೀರು ಒಯ್ಯಬೇಕಿದೆ. ವಿಶಾಲವಾದ ಶಾಲಾ ಮೈದಾನವಿದ್ದರೂ ಅಭಿವೃದ್ಧಿ ಕೊರತೆ ಕಂಡು ಬಂದಿದೆ. ಹಲವಾರು ಬಾರಿ ಶಾಲೆಗೆ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಮಾಡುವಂತೆ ಮನವಿ ಮಾಡಿದರೂ ಪ್ರಯೋಜನ ವಾಗಿಲ್ಲ.ಕುಡಿಯುವ ನೀರಿನ ಸಮಸ್ಯೆಯಿಂದ ಅಂಬೇಡ್ಕರ್ ವಸತಿ ಶಾಲೆ ಅಶಿಹಾಳ ತಾಂಡ ಶಾಲೆಯ ಮಕ್ಕಳಿಗೆ ತೊಂದರೆ ಯಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ರಾಜಕೀಯ ಪಕ್ಷಗಳು ಮುಖಂಡರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು . ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಮುಂಭಾಗ ವಿದ್ಯಾರ್ಥಿ ಗಳು, ಪೋಷಕರು, ಶಾಲಾ ಸಮಿತಿ ಪದಾಧಿಕಾರಿಗಳು ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ವರದಿ:- ಮಂಜುನಾಥ ಕುಂಬಾರ, ಮುದಗಲ್ಲ.