ಮುದಗಲ್ಲ ವರದಿ.
ಮುದಗಲ್ಲ :- ಐತಿಹಾಸಿಕ ಮುದಗಲ್ಲ ಪಟ್ಟಣದ ಸುಪ್ರಸಿದ್ಧ ಮೊರಹಂ ಹಬ್ಬ ಜೂನ್ 17 ರಿಂದ ಪ್ರಾರಂಭ : ಸಾಧೀಕ್ ಅಲಿ..
ಮುದಗಲ್ : ಜೂ. 17 ಬುಧವಾರ ರಿಂದ ಮೊಹರಂ ಪ್ರಾರಂಭ ವಾಗುತ್ತದೆ ಎಂದು ಹುಸೇನಿ ಅಲಂ ಅಶುರ್ ಖಾನ ಕಮೀಟಿ ಕಾರ್ಯದರ್ಶಿ ಮಹ್ಮದ್ ಸಾದೀಕ್ ಅಲಿ ರವಿವಾರ ಹೇಳಿದರು.
ಪಟ್ಟಣದ ಪತ್ರಿಕೆ ಭವನದಲ್ಲಿ ಸುದ್ದಿಗಾರರೊಂದಿಗೆ ಐತಿಹಾಸಿಕ ಮುದಗಲ್ ಭಾವೈಕೈಯ ಮೊರಹಂ ಹಬ್ಬವು ವಿಶೇಷತೆ ಬಗ್ಗೆ ಮಾಹಿತಿ ನೀಡಿದರು .

ಪ್ರತಿ ವರ್ಷದಂತೆ ಈ ವರ್ಷ ಕೂಡ ಹುಸೇನಿಯಾಲಂ ದರ್ಗಾದಿಂದ ಹಳೆಪೇಟೆಯವರಿಗೆ ಹಸಿರು ಜಂಡ ಮೆರವಣಿಗೆ ಮಾಡಲಾಗುವುದು.

ಮೊಹರಂ ಜೂನ್ .18,19, ಹಾಗೂ 20 ಮೂರು ದಿನಗಳ ಕಾಲ ಆಲಂಗಳ ಪ್ರತಿಷ್ಠಾಪನೆ, ಜೂ. 21ರಂದು ಹೊರ ರಾಜ್ಯ ಹಾಗೂ ನಾಡಿನ ವಿವಿಧ ಭಾಗಗಳ ಭಕ್ತರು ತಂದ ಆಲಂಗಳನ್ನು ತೊಳೆಯುವ ದೊಡ್ಡ ಕಾರ್ಯಕ್ರಮ ಸೋಮವಾರ ಜೂನ್ 22 ರಂದು ಒಂದು ಗಂಟೆಗೆ ಜಿಹಾಲ್ ಕಾರ್ಯಕ್ರಮ, ಜೂ.23 ಕ್ಕೆ ಅಬ್ಬಾಸ್ ಪೀರಾ ಸವಾರಿ, ಜೂ.24 ರಂದು ಖಾಸಿಂ ಪೀರಾ ಸವಾರಿ, ಜೂ.25 ಮೌಲಾಲಿ ಪೀರಾ ಸವಾರಿ, ಜೂ.26 ರಂದು ಹಸನ್ -ಹುಸೇನ್ ಸವಾರಿ (ಕತ್ತಲ್ ರಾತ್ರಿ), ಜೂ.27ಕ್ಕೆ ಹಗಲಿ ಸವಾರಿ ಮುಗಿಸಿ ಅಲಂಗಳನ್ನು ಧಫನ್ ಮಾಡಲಾಗುವದು.
ಜೂ.28ಕ್ಕೆ ಯಾವುದೇ ಕಾರ್ಯಕ್ರಮಗಳು ಇರುವುದಿಲ್ಲ. ಜೂ.28ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಜಿಯಾರಾತ್ ಕಾರ್ಯಕ್ರಮ ಜರುಗುತ್ತದೆ.
ಅಕಸ್ಮಾತಾಗಿ ವಿಶೇಷ ಸೂಚನೆ ಯೊಂದಿಗೆ ಜೂ. 16 ಮಂಗಳವಾರ ಚಂದ್ರ ದರ್ಶನವಾದರೆ ಮೇಲ್ಕಂಡ ಎಲ್ಲಾ ವಿಷಯಗಳನ್ನು ಒಂದು ದಿನ ಮುಂಚಿತವಾಗಿ ಜರುಗುತ್ತವೆ. ಹೀಗಾಗಿ ಸಕಲ ಭಕ್ತಾದಿಗಳು ಮೊಹರಂ ಆಚರಣೆಯಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹುಸೇನಿ ಆಲಂ ಅಶುರ್ ಖಾನಾ ಕಮಿಟಿ ಹಾಗೂ ಸಾರ್ವಜನಿಕರ ಪರ ಮೊಹರಂ ಆಚರಣೆ ಭಕ್ತಾದಿಗಳಿಗೆ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಅಮೀರಬೇಗ್ ಉಸ್ತಾದ್, ಮಾಸೂಮ್ ಷರೀಫ್, ಗಯಾಸುಧ್ದೀನ್, ರೆಹಮಾನ್ ಸಾಬ್ ಅರಬ್, ಖಾಜಾಸಾಬ್ ಮಂಡಿ, ಮೀರು ಮಕಾಂದಾರ, ಮೈಬೂಬ್ ಹುಸೇನ್ ಜಂಬಾಳಿ, ಸೈಯದ್ ಹುಸೇನ್ ಖಾದ್ರಿ ಹಾಗೂ ಇತರರಿದ್ದರು.
ವರದಿ:- ಮಂಜುನಾಥ ಕುಂಬಾರ…