You are currently viewing LOCAL NEWS | ಕುಕನೂರು ಪ.ಪಂ. ವ್ಯಾಪ್ತಿಯಲ್ಲಿ 4 ಮತದಾರರ ನೆರವು ಕೇಂದ್ರಗಳ ಸ್ಥಾಪನೆ: ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಮುಖ್ಯಾಧಿಕಾರಿ ನಾಗೇಶ್ ಮನವಿ!

LOCAL NEWS | ಕುಕನೂರು ಪ.ಪಂ. ವ್ಯಾಪ್ತಿಯಲ್ಲಿ 4 ಮತದಾರರ ನೆರವು ಕೇಂದ್ರಗಳ ಸ್ಥಾಪನೆ: ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಮುಖ್ಯಾಧಿಕಾರಿ ನಾಗೇಶ್ ಮನವಿ!

LOCAL NEWS | ಕುಕನೂರು ಪ.ಪಂ. ವ್ಯಾಪ್ತಿಯಲ್ಲಿ 4 ಮತದಾರರ ನೆರವು ಕೇಂದ್ರಗಳ ಸ್ಥಾಪನೆ: ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಮುಖ್ಯಾಧಿಕಾರಿ ನಾಗೇಶ್ ಮನವಿ!

PV NEWS ಕನ್ನಡ 24×7 : ಚಂದ್ರು ಆರ್. ಭಾನಾಪುರ.

ಕುಕನೂರು, ಜು 14 : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ–2026 (Special Intensive Revision – SIR) ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಕೊಪ್ಪಳ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಕುಕನೂರು ಪಟ್ಟಣ ಪಂಚಾಯತ್ ವತಿಯಿಂದ ಪಟ್ಟಣ ವ್ಯಾಪ್ತಿಯಲ್ಲಿ ನಾಲ್ಕು ಮತದಾರರ ನೆರವು ಕೇಂದ್ರಗಳನ್ನು (Voter Facilitation Centre) ಆರಂಭಿಸಲಾಗಿದೆ.

 

ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳುವುದು, ಹೊಸದಾಗಿ ಹೆಸರು ನೋಂದಾಯಿಸುವುದು ಹಾಗೂ ಅಗತ್ಯ ತಿದ್ದುಪಡಿಗಳನ್ನು ಸುಲಭವಾಗಿ ಮಾಡಿಸಿಕೊಳ್ಳುವ ಉದ್ದೇಶದಿಂದ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗೇಶ್ ಅವರು ನೀಡಿದ ಮಾಹಿತಿಯಂತೆ, ಜಿಲ್ಲಾಧಿಕಾರಿಗಳ ಆದೇಶ ಹಾಗೂ ಸರ್ಕಾರದ ಮಾರ್ಗಸೂಚಿಯಂತೆ ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ನಾಲ್ಕು ಮತದಾರರ ನೆರವು ಕೇಂದ್ರಗಳ ವಿವರ

  1. – ಮ್ಯುನಿಸಿಪಲ್ ಕಚೇರಿ – ಪರಶುರಾಮ್

  2. – ಗರ್ಲ್ಸ್ ಸ್ಕೂಲ್, ವಾರ್ಡ್ ನಂ. 6 – ಮೋಹನ್

  3. – ವಿದ್ಯಾನಗರ, ವಾರ್ಡ್ ನಂ. 2ರ ಪ್ರಾಥಮಿಕ ಶಾಲೆ

  4. – ಕೋಳಿಪೇಟೆ ಸರ್ಕಾರಿ ಮಾದರಿ ಶಾಲೆ – ಬಸವರಾಜ್

ಈ ಕೇಂದ್ರಗಳಿಗೆ ಭೇಟಿ ನೀಡುವ ಸಾರ್ವಜನಿಕರು ಮತದಾರರ ಪಟ್ಟಿಗೆ ಸಂಬಂಧಿಸಿದ ಗೊಂದಲಗಳು, ತಿದ್ದುಪಡಿ, ಹೊಸ ನೋಂದಣಿ ಸೇರಿದಂತೆ ವಿವಿಧ ಸೇವೆಗಳ ಕುರಿತು ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಬಹುದು.

ಲಭ್ಯವಿರುವ ಸೌಲಭ್ಯಗಳು

ಮತದಾರರ ಅನುಕೂಲಕ್ಕಾಗಿ ಪ್ರತಿಯೊಂದು ನೆರವು ಕೇಂದ್ರದಲ್ಲೂ ಕಂಪ್ಯೂಟರ್ ಹಾಗೂ ಇಂಟರ್‌ನೆಟ್ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಸ್ವಚ್ಛ ಶೌಚಾಲಯ ಹಾಗೂ ವಾಹನ ನಿಲುಗಡೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರಿಂದ ಸಾರ್ವಜನಿಕರು ಯಾವುದೇ ತೊಂದರೆ ಇಲ್ಲದೆ ಸೇವೆ ಪಡೆಯಲು ಅನುಕೂಲವಾಗಲಿದೆ.

ಸಾರ್ವಜನಿಕರಿಗೆ ಮನವಿ

ಪ್ರತಿಯೊಬ್ಬ ಅರ್ಹ ನಾಗರಿಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಬೇಕು. ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಇತರೆ ಅಗತ್ಯ ಕಾರ್ಯಗಳಿದ್ದಲ್ಲಿ ಸಮೀಪದ ಮತದಾರರ ನೆರವು ಕೇಂದ್ರಕ್ಕೆ ಭೇಟಿ ನೀಡಿ ಈ ಸೌಲಭ್ಯದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಕುಕನೂರು ಪಟ್ಟಣ ಪಂಚಾಯತ್ ಸಾರ್ವಜನಿಕರಿಗೆ ಮನವಿ ಮಾಡಿದೆ.

ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವಲ್ಲಿ ಪ್ರತಿಯೊಬ್ಬ ಮತದಾರರ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದ್ದಾಗಿದ್ದು, ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಈ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

Prajavikshane

Chandru R Bhanapaur

Leave a Reply

error: Content is protected !!