You are currently viewing LOCAL NEWS : ಕುಕನೂರಿನಲ್ಲಿ ಜೋಗಿ ಸಮುದಾಯಕ್ಕೆ ‘ಹಂಡಿ ಜೋಗಿ’ ಜಾತಿ ಪ್ರಮಾಣ ಪತ್ರ ನೀಡುವಂತೆ ತಹಶೀಲ್ದಾರ್‌ಗೆ ಮನವಿ

LOCAL NEWS : ಕುಕನೂರಿನಲ್ಲಿ ಜೋಗಿ ಸಮುದಾಯಕ್ಕೆ ‘ಹಂಡಿ ಜೋಗಿ’ ಜಾತಿ ಪ್ರಮಾಣ ಪತ್ರ ನೀಡುವಂತೆ ತಹಶೀಲ್ದಾರ್‌ಗೆ ಮನವಿ

LOCAL NEWS : ಕುಕನೂರಿನಲ್ಲಿ ಜೋಗಿ ಸಮುದಾಯಕ್ಕೆ ‘ಹಂಡಿ ಜೋಗಿ’ ಜಾತಿ ಪ್ರಮಾಣ ಪತ್ರ ನೀಡುವಂತೆ ತಹಶೀಲ್ದಾರ್‌ಗೆ ಮನವಿ

PV NEWS ಕನ್ನಡ 24×7, ಚಂದ್ರು ಆರ್. ಭಾನಾಪುರ,

ಕುಕನೂರು, ಜು 14 : ಕುಕನೂರು ಪಟ್ಟಣದ ಜೋಗಿ ಸಮುದಾಯದ ಸದಸ್ಯರಿಗೆ ‘ಹಂಡಿ ಜೋಗಿ’ (ಪರಿಶಿಷ್ಟ ಜಾತಿ) ಎಂದು ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ, ಅಖಂಡ ಕರ್ನಾಟಕ ಅಲೆಮಾರಿ ಪಕ್ಷ ಹಾಗೂ ಜಾತಿ ಹಂಡಿ ಜೋಗಿ ಸಮಾಜ ಸುಧಾರಕ ಸಂಘ (ರಿ.), ಕುಕನೂರು ತಾಲೂಕು ವತಿಯಿಂದ ಗ್ರೇಡ್–1 ತಹಶೀಲ್ದಾರ್ ಮುರುಳಿದರಾವ್ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು.

ಇಂದು (ಮಂಗಳವಾರ) ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಸಮುದಾಯದ ಮುಖಂಡರು ಹಾಗೂ ಮಹಿಳೆಯರು ಸೇರಿ ಮನವಿ ಸಲ್ಲಿಸಿ, ಮಾತಾಡಿದ ಶಿವರಾಜ್ ಜೋಗಿನ, ‘ನಮ್ಮ ಸಮುದಾಯವು ಅತ್ಯಂತ ಸಣ್ಣ ಹಾಗೂ ಹಿಂದುಳಿದ ಸಮುದಾಯವಾಗಿದ್ದು, ಬಹುತೇಕ ಕುಟುಂಬಗಳು ಕಿಲಿಪತ್ತಿ, ಡಬ್ಬಾ ರಿಪೇರಿ ಸೇರಿದಂತೆ ಸಾಂಪ್ರದಾಯಿಕ ವೃತ್ತಿಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿವೆ’ ಎಂದು ವಿವರಿಸಿದರು.

ಆಧುನಿಕ ವಸ್ತುಗಳು ಮಾರುಕಟ್ಟೆಗೆ ಬಂದ ಪರಿಣಾಮ ತಮ್ಮ ಸಾಂಪ್ರದಾಯಿಕ ವೃತ್ತಿಗೆ ತೀವ್ರ ಹೊಡೆತ ಬಿದ್ದಿದ್ದು, ಅನೇಕ ಕುಟುಂಬಗಳು ಜೀವನೋಪಾಯದ ಸಂಕಷ್ಟ ಎದುರಿಸುತ್ತಿವೆ. ಹಲವರಿಗೆ ಸ್ವಂತ ಮನೆಗಳೂ ಇಲ್ಲದೆ ಅಂಗಡಿಗಳನ್ನು ಹಾಕಿಕೊಂಡು ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ, ಸರ್ಕಾರ ಹಲವು ವರ್ಷಗಳ ಹಿಂದೆಯೇ ‘ಹಂಡಿ ಜೋಗಿ’ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿದ್ದು, ಕೊಪ್ಪಳ, ಬಳ್ಳಾರಿ, ಕಾರಟಗಿ, ಕನಕಗಿರಿ, ಕುರುಗೋಡು, ಕೊಟ್ಟೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ ಕುಕನೂರು ತಾಲೂಕಿನಲ್ಲಿ ಮಾತ್ರ ಕಳೆದ ಮೂರು-ನಾಲ್ಕು ತಿಂಗಳಿಂದ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ ಹಾಗೂ ಗೊಂದಲ ಉಂಟಾಗಿದ್ದು, ಅರ್ಹರಿಗೆ ಪ್ರಮಾಣ ಪತ್ರ ಸಿಗುತ್ತಿಲ್ಲ ಎಂದು ಸಮುದಾಯದ ಮುಖಂಡರು ಆರೋಪಿಸಿದರು.

ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು, ಕುಕನೂರು ತಾಲೂಕಿನ ಅರ್ಹ ಫಲಾನುಭವಿಗಳಿಗೆ ‘ಹಂಡಿ ಜೋಗಿ’ ಪರಿಶಿಷ್ಟ ಜಾತಿಯ ಜಾತಿ ಪ್ರಮಾಣ ಪತ್ರವನ್ನು ತ್ವರಿತವಾಗಿ ನೀಡುವಂತೆ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು.

ಈ ವೇಳೆಯಲ್ಲಿ ಹಂಡಿ ಜೋಗಿ ಸಮಾಜದ ಮಂಜುನಾಥ ಹಂಡಿ ಜೋಗಿ, ಅಶೋಕ, ಗಿರೀಶ್, ರಾಣಪ್ಪ, ಮಾರುತಿ, ನಾಗರಾಜ್ ಆನಂದ, ಅನ್ನಪೂರ್ಣ,ಪದ್ಮ,ರಾಧಾ,ಮಂಜುಳಾ,ಲಲಿತವ್ವ ಸಂಘದ ಪದಾಧಿಕಾರಿಗಳು, ಮಹಿಳೆಯರು ಹಾಗೂ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು.

Prajavikshane

Chandru R Bhanapaur

Leave a Reply

error: Content is protected !!