You are currently viewing LOCAL NEWS : ಯಲಬುರ್ಗಾ | ರೈತರಿಗೆ ಬೆಳೆ ವಿಮೆ ನೋಂದಣಿಗೆ ಅವಕಾಶ – ಜುಲೈ 31 ಕೊನೆಯ ದಿನ..!

LOCAL NEWS : ಯಲಬುರ್ಗಾ | ರೈತರಿಗೆ ಬೆಳೆ ವಿಮೆ ನೋಂದಣಿಗೆ ಅವಕಾಶ – ಜುಲೈ 31 ಕೊನೆಯ ದಿನ..!

LOCAL NEWS : ಯಲಬುರ್ಗಾ | ರೈತರಿಗೆ ಬೆಳೆ ವಿಮೆ ನೋಂದಣಿಗೆ ಅವಕಾಶ – ಜುಲೈ 31 ಕೊನೆಯ ದಿನ..!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಯಲಬುರ್ಗಾ, ಜುಲೈ 01 : 2026–27ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ (PMFBY) ಯೋಜನೆಗೆ ರೈತರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಯಲಬುರ್ಗಾ ತಾಲೂಕು ಕೃಷಿ ಇಲಾಖೆ ಪ್ರಕಟಿಸಿದೆ.

ಈ ಯೋಜನೆಯನ್ನು IFFCO Tokio General Insurance Company Limited ಸಂಸ್ಥೆಯ ಮೂಲಕ ಜಾರಿಗೊಳಿಸಲಾಗುತ್ತಿದ್ದು, ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ರೈತರು ವಿವಿಧ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬಹುದು.

ಹತ್ತಿ (ನೀರಾವರಿ), ಮೆಣಸಿನ ಜೋಳ (ನೀರಾವರಿ ಹಾಗೂ ಖುಷ್ಕಿ), ಸಜ್ಜೆ, ಸೋಯಾಬಿನ್, ಶೇಂಗಾ, ಹೆಸರು ಸೇರಿದಂತೆ ವಿವಿಧ ಬೆಳೆಗಳಿಗೆ ಜುಲೈ 31, 2026 ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ. ಹತ್ತಿ (ಮಳೆ ಆಶ್ರಿತ) ಬೆಳೆಗೆ ಜುಲೈ 31 ಕೊನೆಯ ದಿನವಾಗಿದ್ದು, ಕೆಲವು ಬೆಳೆಗಳಿಗೆ ಜುಲೈ 15ರವರೆಗೆ ನೋಂದಣಿ ಅವಕಾಶವಿದೆ.

ರೈತರು ಸಮೀಪದ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬ್ಯಾಂಕ್ ಮುಖಾಂತರ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಕೃಷಿ ಇಲಾಖೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ರೈತರು ಯಲಬುರ್ಗಾದ ಚಂದ್ರಪ್ಪ ಹೊಂಡದ (ಮೊ. 9702944943) ಹಾಗೂ ಕುಕನೂರಿನ ಮಹಬೂಬ್ (ಮೊ. 9743678532) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೃಷಿ ಇಲಾಖೆ ರೈತರು ನಿಗದಿತ ಅವಧಿಯೊಳಗೆ ಬೆಳೆ ವಿಮೆ ನೋಂದಣಿ ಮಾಡಿಸಿಕೊಂಡು ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದೆ.

Prajavikshane

Chandru R Bhanapaur

Leave a Reply

error: Content is protected !!