ಮುದಗಲ್ಲ ಪುರಸಭೆಯಲ್ಲಿ  ಬಾಬು ಜಗಜೀವನ ರಾಮ್‌ರ 40 ನೇ ಪುಣ್ಯ ಸ್ಮರಣೆ ಆಚರಣೆ..

ಮುದಗಲ್ಲ ವರದಿ..

ಮುದಗಲ್ಲ ಪುರಸಭೆಯಲ್ಲಿ  ಬಾಬು ಜಗಜೀವನ ರಾಮ್‌ರ 40 ನೇ ಪುಣ್ಯ ಸ್ಮರಣೆ ಆಚರಣೆ..

ಮುದಗಲ್ಲ :-ಸ್ಥಳೀಯ ಪುರಸಭೆ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ 40 ನೇ ಪುಣ್ಯ ಸ್ಮರಣೆ ಆಚರಣೆ ಯನ್ನು ಪುರಸಭೆ  ಸಭಾಂಗಣದಲ್ಲಿ ಸೋಮವಾರ ಸರಳವಾಗಿ ನಡೆಯಿತು. ಪುರಸಭೆ ಸಿಬ್ಬಂದಿ ಚನ್ನಮ್ಮ ದಳವಾಯಿ ಹಿರೇಮಠ ಅವರು  ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಲಿಂಗಸೂರು ತಾಲೂಕು ಅಧ್ಯಕ್ಷ ರಾದ ಶರಣಪ್ಪ ಕಟ್ಟಿಮನಿ ಅವರು ಸ್ವಾತಂತ್ರ್ಯ ಹೋರಾಟ ಗಾರರು ಮತ್ತು ಉತ್ತಮ ಆಡಳಿತ ಗಾರರಾಗಿದ್ದ ಬಾಬು ಜಗಜೀವನ್ ರಾಮ್, ಬಾಬೂಜಿ ಎಂಬುದಾಗಿ ಜನಪ್ರಿಯರಾಗಿದ್ದರು, ಹಿಂದುಳಿದ ಸಮಾಜದವರಿಗೆ ಸಮಾನತೆಯ ಸಮಾಜ ಮತ್ತು ಗೌರವಾನ್ವಿತ ಸ್ಥಾನ ಗಳಿಸಿ ಕೊಡುವುದಕ್ಕಾಗಿ ಐವತ್ತು ವರ್ಷಗಳ ಕಾಲ ವಿಶೇಷ ಪ್ರಯತ್ನ ಪಟ್ಟಿದ್ದರು. ಒಬ್ಬ ರಾಷ್ಟ್ರೀಯ ನಾಯಕ, ಸಂಸತ್ ಪಟು, ಕೇಂದ್ರದ ಮಂತ್ರಿ, ಹಿಂದುಳಿದ ವರ್ಗ ಮತ್ತು ದಲಿತರ ಅಭಿವೃದ್ಧಿಯ ಹರಿಕಾರರಾದ ಬಾಬೂಜಿಯವರು ರಾಜಕೀಯ ಸಾಮರ್ಥ್ಯದಲ್ಲಿನ ಸಮತಾ ಭಾವದ ಹುರುಪು, ಆದರ್ಶ ಮತ್ತು ಅನನ್ಯ ಸ್ಪೂರ್ತಿ ಇಂದಿಗೂ ಅನುಕರಣೀಯವಾಗಿದೆ. ಬಾಬೂಜಿಯವರ ರಾಜಕೀಯ ನಾಯಕತ್ವವು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟದಷ್ಟೆ ಅಲ್ಲ, ಆಧುನಿಕ ಪ್ರಜಾಪ್ರಭುತ್ವದ ನಿರ್ಮಾಣಕ್ಕೆ ಭದ್ರ ಬುನಾದಿ ಒದಗಿಸಿಕೊಟ್ಟರು ಎಂದು 
ಈ ಸಂದರ್ಭದಲ್ಲಿ ಪುರಸಭೆ ಮ್ಯಾನೇಜರ್ ಜಗದೀಶ ಬಿರಾದಾರ, ಸಿಬ್ಬಂದಿ ವೆಂಕಟೇಶ್ ತಳವಾರ,ಬಸವರಾಜ ಕೊಟ್ಟೂರು, ಸಂಜೀವಪ್ಪ ,ವಿನೋದ್ ತಳವಾರ, ದಲಿತ ಸಮಾಜದ ಮುಖಂಡ ರಾದ ರಾಘವೇಂದ್ರ ಕುದಿಸಿ ,ಬಸವರಾಜ ಬುಲೆಟ್,ಮಾರುತಿ, ಬಸವರಾಜ ಮುದಗಲ್ಲ ,ಹಾಗೂ ವೆಂಕಣ್ಣ ಕುಲಕರ್ಣಿ, ಪೌರ ಕಾರ್ಮಿಕರು ಉಪಸ್ಥಿತರಿದ್ದರು.
 ವರದಿ:-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!