You are currently viewing ಬೆಳಗಾವಿ–ಹುನಗುಂದ–ರಾಯಚೂರು ಹೆದ್ದಾರಿ ನಿರ್ಮಾಣ ಕಾಮಗಾರಿ ನಿಧಾನ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ ವಾಹನ ಸವಾರರು

ಬೆಳಗಾವಿ–ಹುನಗುಂದ–ರಾಯಚೂರು ಹೆದ್ದಾರಿ ನಿರ್ಮಾಣ ಕಾಮಗಾರಿ ನಿಧಾನ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ ವಾಹನ ಸವಾರರು

ಮುದಗಲ್ಲ :- ಬೆಳಗಾವಿ–ಹುನಗುಂದ–ರಾಯಚೂರು ಹೆದ್ದಾರಿ ನಿರ್ಮಾಣ ಕಾಮಗಾರಿ ನಿಧಾನ ನಿತ್ಯ ಸಂಕಷ್ಟ ಅನುಭವಿಸುತ್ತಿ ದ್ದಾರೆ ವಾಹನ ಸವಾರರು..

ಮುದಗಲ್ : ಉತ್ತರ ಕರ್ನಾಟಕದ ಮಹತ್ವದ ರಸ್ತೆ ಯೋಜನೆಗಳಲ್ಲಿ ಒಂದಾದ ಬೆಳಗಾವಿ–ಹುನಗುಂದ–ರಾಯಚೂರು ರಾಷ್ಟ್ರೀಯ ಹೆದ್ದಾರಿ(ಎನ್‌ಎಚ್-748ಎ) ನಾಲ್ಕು ಪಥ ರಸ್ತೆ ಕಾಮಗಾರಿ ಮಣ್ಣಿನ ಕೊರತೆಯಿಂದ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಅಲಲ್ಲಿ ಮೂಲ ರಸ್ತೆ ಹತ್ತಿರ ನಡೆಯುತ್ತಿರುವ ಕಾಮಗಾರಿಯಿಂದ ಸಾರ್ವಜನಿಕರು, ರೈತರು, ವಾಹನ ಸವಾರರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೆದ್ದಾರಿ ವಿಸ್ತರಣೆಗಾಗಿ ರಸ್ತೆ ಎತ್ತರಿಸುವ ಕೆಲಸ, ಸೇತುವೆ, ಚರಂಡಿ, ಸರ್ವಿಸ್ ರಸ್ತೆ ಹಾಗೂ ಅಂಡರ್‌ಪಾಸ್ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. ಆದರೆ ಅಗತ್ಯ ಪ್ರಮಾಣದಲ್ಲಿ ಮಣ್ಣು ದೊರೆಯದ ಕಾರಣ ಅನೇಕ ಕಡೆಗಳಲ್ಲಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಮಳೆಗಾಲ ಆರಂಭವಾಗಿರುವುದರಿಂದ ಮಣ್ಣಿನ ಸಾಗಣೆಗೂ ತೊಂದರೆಯಾಗಿದ್ದು, ಕಾಮಗಾರಿ ವೇಗ ಇನ್ನಷ್ಟು ಕುಂಠಿತವಾಗಿದೆ. ಮುದಗಲ್ಲ,ಆಮದಿಹಾಳ, ಬುದ್ದಿನ್ನಿ, ಸಂತೆಕೆಲ್ಲೂರ ಸೇರಿದಂತೆ ಹಲವು ಭಾಗಗಳಲ್ಲಿ ರಸ್ತೆ ಅಗೆಯಲಾಗಿದ್ದು, ತಾತ್ಕಾಲಿಕ ರಸ್ತೆಗಳಲ್ಲಿ ವಾಹನ ಸಂಚಾರ ನಡೆಯುತ್ತಿದೆ. ಧೂಳು, ಗುಂಡಿಗಳು ಹಾಗೂ ಅಸಮತಟ್ಟಾದ ರಸ್ತೆಯಿಂದ ದ್ವಿಚಕ್ರ ವಾಹನ ಸವಾರರು ಹೆಚ್ಚು ಪರದಾಡುತ್ತಿದ್ದಾರೆ. ಭಾರೀ ವಾಹನಗಳ ಸಂಚಾರದಿಂದ ಧೂಳಿನ ಪ್ರಮಾಣ ಹೆಚ್ಚಾಗಿ ರಸ್ತೆ ಬದಿ ನಿವಾಸಿಗಳು, ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.

ಉದ್ದೇಶ ಯೋಜನೆಯ ಮಹತ್ವ ಬೆಳಗಾವಿಯಿಂದ ರಾಯಚೂರುವರೆಗೆ ಪ್ರಮುಖ ಸಂಪರ್ಕ ಹೆದ್ದಾರಿ. ಉತ್ತರ ಕರ್ನಾಟಕದ ವ್ಯಾಪಾರ, ಕೃಷಿ, ಕೈಗಾರಿಕಾ ಬೆಳವಣಿಗೆಗೆ ಪೂರಕ ಯೋಜನೆ. ಪ್ರಯಾಣದ ಸಮಯ, ವಾಹನ ನಿರ್ವಹಣಾ ವೆಚ್ಚ ಕಡಿಮೆಯಾಗುವ ನಿರೀಕ್ಷೆ. ಸಾವಿರಾರು ವಾಹನಗಳ ಸಂಚಾರಕ್ಕೆ ಸುರಕ್ಷಿತ ಹಾಗೂ ವೇಗದ ರಸ್ತೆ ವ್ಯವಸ್ಥೆ ಆಗಲಿದೆ.

ಕಾಮಗಾರಿಗೆ ವೇಗಕ್ಕೆ ಒತ್ತಾಯ

ಮಣ್ಣಿನ ಕೊರತೆಗೆ ತಕ್ಷಣ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕಾಮಗಾರಿ ವೇಗಗೊಳಿಸಬೇಕು. ರಸ್ತೆ ಬದಿಯಲ್ಲಿ ಎಚ್ಚರಿಕೆ ಫಲಕಗಳು, ರಾತ್ರಿ ಬೆಳಕಿನ ವ್ಯವಸ್ಥೆ ಹಾಗೂ ಧೂಳು ನಿಯಂತ್ರಣಕ್ಕಾಗಿ ನೀರು ಸಿಂಪಡಿಸುವ ಕಾರ್ಯವನ್ನು ನಿಯಮಿತವಾಗಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆ ಸಂಸ್ಥೆ ಸಮನ್ವಯದಿಂದ ಉಳಿದಿರುವ ಅಡೆತಡೆಗಳನ್ನು ಶೀಘ್ರ ನಿವಾರಿಸಿ, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಈ ಮಹತ್ವದ ಯೋಜನೆ ಪೂರ್ಣಗೊಂಡರೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೊಸ ದಿಕ್ಕು ದೊರೆಯಲಿದೆ ಎಂಬುದು ಇಲ್ಲಿನ ಸಾರ್ವಜನಿಕರ ಆಶಯವಾಗಿದೆ.

” ಅಲ್ಲಲ್ಲಿ ಸಣ್ಣಸಣ್ಣ ಸಮಸ್ಯೆ ಬಿಟ್ಟರೆ ಹೆದ್ದಾರಿ ನಿರ್ಮಾಣಕ್ಕಿರುವ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಮಣ್ಣಿನ ಕೊರತೆ ನಿಗಿಸಲು ಕೆರೆಗಳನ್ನು ಹೂಳೆತ್ತುವ ಮೂಲಕ ಮಣ್ಣಿನ ವ್ಯವಸ್ಥೆ ಮಾಡಲಾಗಿದೆ -ಬಸಣ್ಣಪ್ಪ ಕಲ್ಲಶೆಟ್ಟಿ, ಉಪವಿಭಾಗಾಧಿಕಾರಿಗಳು ಲಿಂಗಸುಗೂರ

ವರದಿ:-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!