ಮುದಗಲ್ಲ ವರದಿ..
ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ: ಸುಜಾತಾ ಹೂನುರು..
ಮುದಗಲ್ಲ :-ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ 2026-27 ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಸುಜಾತಾ ಹೂನುರು ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿದರು.
ಕ್ರೀಡಾಕೂಟಗಳು ಕಲಿಕೆಯ ಅವಿಭಾಜ್ಯ ಭಾಗವಾಗಿದ್ದು, ಒತ್ತಡದ ಸಂದರ್ಭಗಳನ್ನು ಹೇಗೆ ಎದುರಿಸಬೇಕು ಹಾಗೂ ಮಾನಸಿಕವಾಗಿ ಹೇಗೆ ಸದೃಢವಾಗಿರಬೇಕು ಎಂಬುದನ್ನು ಕ್ರೀಡೆಗಳು ಕಲಿಸುತ್ತವೆ. ಪಠ್ಯಚಟುವಟಿಕೆಗಳಲ್ಲಿ ಹಿಂದುಳಿದಿದ್ದರೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿ ಉತ್ತಮ ಸಾಧನೆ ಮಾಡಿದ ಅನೇಕ ಉದಾಹರಣೆಗಳಿವೆ ಎಂದು ಹೇಳಿದರು.

ನಂತರ ಮಾತನಾಡಿದ ಸರಕಾರದ ಪಂಚಾಯತ್ ರಾಜ್ ವಿಶೇಷ ಕಾಯ೯ದಶಿ೯ ಗಳಾದ ಶ್ರೀ ಚಂದ್ರಶೇಖರ್ ಅವರು
ಸಾಧನೆಗೆ ನಿರ್ದಿಷ್ಟ ಕ್ಷೇತ್ರ ಎಂಬುದಿಲ್ಲ. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು. ಅದಕ್ಕಾಗಿ ಶಿಸ್ತು, ಸಂಯಮ, ಏಕಾಗ್ರತೆ ಮತ್ತು ಗುರಿ ತಲುಪುವ ಛಲ ಅಗತ್ಯ. ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಒಂದು ಸೋಲು ನೂರಾರು ಗೆಲುವುಗಳಿಗೆ ದಾರಿಯಾಗಬಹುದು. ಆದ್ದರಿಂದ ಸೋತ ಮಾತ್ರಕ್ಕೆ ನಿರುತ್ಸಾಹ ಗೊಳ್ಳಬಾರದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕ್ರೀಡಾಕೂಟದಲ್ಲಿ ಕಬ್ಬಡ್ಡಿ, ಖೋ-ಖೋ, ವಾಲಿಬಾಲ್, ಥ್ರೋಬಾಲ್, ಗುಂಡು ಎಸೆತ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.

ಈ ಸಂದರ್ಭದಲ್ಲಿಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರಾದ ದುರಗಪ್ಪ ಹಾಗೂ ನಿವೃತ್ತ ಹಿರಿಯ ದಹಿಕ ಶಿಕ್ಷಕ ಸುಕುಮಾರ(ಎಸ್ ಎನ್ ಅಕ್ಕಿ ) ಮುಖ್ಯ ಗುರುಗಳು ಬಸ್ಸಪ್ಪ ಹಂದ್ರಾಳ,ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ಬೋಗರ್ ,ರಾಮಚಂದ್ರ ಡವಳೆ,ಮಂಜನಾಥ ಬನ್ನಿಗೋಳರ , ಸಂಗಮೇಶ ಸರಗಣಚಾರಿ, ಹಾಗೂ ದೈಹಿಕ ಶಿಕ್ಷಕರು, ಸಿಬ್ಬಂದಿ ವರ್ಗದವರು ವಿಧ್ಯಾರ್ಥಿ ಗಳು ಉಪಸ್ಥಿತರಿದ್ದರು
ವರದಿ:-ಮಂಜುನಾಥ ಕುಂಬಾರ