You are currently viewing BREAKING : ಕೊಪ್ಪಳ |ಬಸ್ ಹತ್ತುವಾಗ ಕಾಲು ಜಾರಿ ಬಿದ್ದು ವೃದ್ಧೆ ಸಾವು : ಪ್ರಯಾಣಿಕರ ನೂಕುನುಗ್ಗಲಿನಲ್ಲಿ ದುರ್ಘಟನೆ!

BREAKING : ಕೊಪ್ಪಳ |ಬಸ್ ಹತ್ತುವಾಗ ಕಾಲು ಜಾರಿ ಬಿದ್ದು ವೃದ್ಧೆ ಸಾವು : ಪ್ರಯಾಣಿಕರ ನೂಕುನುಗ್ಗಲಿನಲ್ಲಿ ದುರ್ಘಟನೆ!

BREAKING : ಕೊಪ್ಪಳ |ಬಸ್ ಹತ್ತುವಾಗ ಕಾಲು ಜಾರಿ ಬಿದ್ದು ವೃದ್ಧೆ ಸಾವು : ಪ್ರಯಾಣಿಕರ ನೂಕುನುಗ್ಗಲಿನಲ್ಲಿ ದುರ್ಘಟನೆ!

PV NEWS ಕನ್ನಡ 24×7 : 

ಕೊಪ್ಪಳ, ಆ.27: ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ ಕೆಎಸ್‌ಆರ್‌ಟಿಸಿ ಬಸ್ ಹತ್ತುವ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ವೃದ್ಧ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಇಲಕಲ್ ಗ್ರಾಮದ ಯಮನವ್ವ ತಾಳಕೇರಿ (65) ಎಂದು ಗುರುತಿಸಲಾಗಿದೆ.

ಕೊಪ್ಪಳದಿಂದ ಕುಷ್ಟಗಿ ಕಡೆಗೆ ತೆರಳಲು ಕೇಂದ್ರೀಯ ಬಸ್ ನಿಲ್ದಾಣದಲ್ಲಿ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್ ಹತ್ತುವ ಸಂದರ್ಭದಲ್ಲಿ ಪ್ರಯಾಣಿಕರ ನೂಕುನುಗ್ಗಲು ಉಂಟಾಗಿದೆ. ಇದೇ ವೇಳೆ ಬಸ್‌ನ್ನು ಚಾಲಕ ಹಿಂದಕ್ಕೆ (ರಿವರ್ಸ್) ಚಲಾಯಿಸಿದ ಪರಿಣಾಮ ಯಮನವ್ವ ಅವರು ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.

ಚಾಲಕ–ನಿರ್ವಾಹಕರ ನಿರ್ಲಕ್ಷ್ಯ ಆರೋಪ

ಬಸ್ ನಿಲ್ದಾಣದಲ್ಲಿ ಬಸ್ ನಿಂತಿದ್ದ ಸಂದರ್ಭದಲ್ಲಿ ಪ್ರಯಾಣಿಕರು ಬಸ್ ಹತ್ತುತ್ತಿರುವುದನ್ನು ಖಚಿತಪಡಿಸಿಕೊಳ್ಳದೆ ಬಸ್‌ನ್ನು ರಿವರ್ಸ್ ತೆಗೆದುಕೊಂಡಿರುವುದು ಹಾಗೂ ಬಾಗಿಲು ಮುಚ್ಚುವ ಮುನ್ನವೇ ಬಸ್ ಚಲಾಯಿಸಿರುವುದು ದುರ್ಘಟನೆಗೆ ಕಾರಣವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

ನಿಂತಿರುವ ಬಸ್‌ಗೆ ಪ್ರಯಾಣಿಕರು ಸುರಕ್ಷಿತವಾಗಿ ಹತ್ತಿ, ಇಳಿದಿರುವುದನ್ನು ಖಚಿತಪಡಿಸಿಕೊಂಡು, ಬಾಗಿಲು ಮುಚ್ಚಿದ ಬಳಿಕವೇ ಬಸ್ ಸಂಚಾರ ಆರಂಭಿಸಬೇಕೆಂಬ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಅವುಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ದುರ್ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಕುರಿತು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಾಗೂ ಪೊಲೀಸರು ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ಚಾಲಕ ಹಾಗೂ ನಿರ್ವಾಹಕರ ನಿರ್ಲಕ್ಷ್ಯವೇ ವೃದ್ಧೆಯ ಸಾವಿಗೆ ಕಾರಣವೇ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.

Prajavikshane

Chandru R Bhanapaur

Leave a Reply

error: Content is protected !!