PV NEWS : ಕುಕನೂರು |“ಕೊಪ್ಪಳದ ಈದ್ ಮಿಲಾದ್ ಸಂಭ್ರಮ ನೋಡಲು ಹೊರಟ ಸ್ನೇಹಿತರು ಶವವಾಗಿ ಮರಳಿದರು!”

ಬನ್ನಿಕೊಪ್ಪ NH-67ರಲ್ಲಿ ಭೀಕರ ಅಪಘಾತ; ನರಗುಂದದ ಮೂವರು ಯುವಕರು ಸ್ಥಳದಲ್ಲೇ ಸಾವು!
PV NEWS ಕನ್ನಡ 24×7:
ಕುಕನೂರು, ಆ.26: ಕೊಪ್ಪಳದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಡಿಜೆ ಮ್ಯೂಸಿಕ್ ನೋಡಲು ನರಗುಂದದಿಂದ ಕೊಪ್ಪಳದತ್ತ ಬರುತ್ತಿದ್ದ ಪಲ್ಸರ್ ಬೈಕ್‌ವೊಂದು ಬನ್ನಿಕೊಪ್ಪ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಚರ್ ಆಗಿ ರಸ್ತೆಬದಿಯಲ್ಲಿ ನಿಂತಿದ್ದ ಮಹೇಂದ್ರ ಗೂಡ್ಸ್ ವಾಹನಕ್ಕೆ ಹಿಂಬದಿಯಿಂದ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ನರಗುಂದ ಪಟ್ಟಣದ ಮಾಬೂಸಾಬ್ ತಂದೆ ಬುಡನ್ ಸಾಬ್ ಮಟಗೇರಿ (17), ಫಕ್ರುಸಾಬ್ ತಂದೆ ಹಸನಸಾಬ್ ವಟಗೇರಿ (19) ಹಾಗೂ ಶಾನುಸಾಬ್ ಬಸಾಪುರ (15) ಎಂದು ಗುರುತಿಸಲಾಗಿದೆ.
