ಮುದಗಲ್ಲ ವರದಿ..
ಮುದಗಲ್ಲ ನಲ್ಲಿ ಶ್ರದ್ಧಾಭಕ್ತಿಯ ಈದ್ ಮಿಲಾದ್ ಆಚರಣೆ..
ಮುದಗಲ್ಲ : ಇಸ್ಲಾಂ ಧರ್ಮ ಸಂಸ್ಥಾಪಕ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನವನ್ನು ‘ಈದ್ ಮಿಲಾದ್’ ಹೆಸರಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಶ್ರದ್ಧಾಭಕ್ತಿಯಿಂದ ಮುದಗಲ್ಲ ನಲ್ಲಿ ಆಚರಿಸಲಾಯಿತು.

ಪಟ್ಟಣದ ಮುಖ್ಯ ರಸ್ತೆಯಲ್ಲಿ ಹಾಡುತ್ತಾ, ಶಾಂತಿ, ಸೌಹಾರ್ದದ ಘೋಷಣೆ ಕೂಗುತ್ತಾ ಶಿಸ್ತು ಬದ್ಧವಾಗಿ ಮೆರವಣಿಗೆ ನಡೆಸಿದರು.

ಬ್ಯಾನರ್, ದೀಪಾಲಂಕಾರ: ಈದ್ ಮಿಲಾದ್ ಉಲ್ ನಬೀ ಅಂಗವಾಗಿ ಮಸೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿ ಕಂಗೊಳಿಸಲಾಗಿದೆ. ಪ್ರಮುಖ ಬೀದಿಗಳನ್ನು ಬಂಟಿಂಗ್ಸ್ ಮತ್ತು ಬ್ಯಾನರ್‌ಗಳಿಂದ ಶೃಂಗರಿಸಲಾಗಿದೆ.
ಸಮಾಜದ ಯುವಕರು ತಮ್ಮ ತಮ್ಮ ವಾಹನಗಳಿಗೆ ಹಸಿರು ಬಣ್ಣದ ಧ್ವಜಗಳಿಂದ ಶೃಂಗಾರ ಮಾಡಿಕೊಂಡಿದ್ದು ಕಂಡು ಬಂದಿತ್ತು.

ವಿಶೇಷ ಎಂದರೆ ಗುಲಾಮೇ ಮುಸ್ತಫಾ ನವ ಜವಾನ್ ಕಮಿಟಿ ವತಿಯಿಂದ ಮೆರವಣಿಗೆಯಲ್ಲಿ ಇಂದ ಮುಸ್ಲಿಂ ಬಂಧುಗಳಿಗೆ ಜುಸ್ ಹಾಗೂ ತಂಪು ಪಾನಿಯನ್ನು ನೀಡಲಾಯಿತು….

ಈ ಸಂದರ್ಭದಲ್ಲಿ ಎಲ್ಲಾ ಮುಸ್ಲಿಂ ಸಮಾಜದ ಬಾಂಧವರಿಗೆ ಶುಭಾಶಯಗಳು ಕೋರಿದ ಮಾಜಿ ಶಾಸಕರಾದ ಡಿ.ಎಸ್ ಹುಲಿಗೇರಿ ,ಸೈಯದ್ ನಯಿಮ್ ಜುನೈದಿ, ಸೈಯದ್ ಅಬ್ದುಲ್ ರವೂಫ್ ಜುನೈದಿ, ಮಂಜುನಾಥ್, ಬನ್ನಿಗೋಳಕರ್, ಮೌಲಾನಾ ಮೊಹಮ್ಮದ್ ಹಾಶಿಮ್, ಡಾಕ್ಟರ್ ವಿನೋದ್ ಕುಮಾರ್, ಗುರು ಬಸಪ್ಪ ಸಜ್ಜನ್, ಎಸ್ ಎನ್ ಖಾದ್ರಿ, ಸೈಯದ್ ರೆಹಮಾನ್ ಜುನೈದಿ, ದೇವೇಂದ್ರ ವಕೀಲರು, ಅಸರಾರ್ ಅಹಮದ್, ಸೈಯದ್ ಹಕೀಮ್ ಜುನೈದಿ, ಮೆಹಬೂಬ್ ಕಡ್ಡಿಪುಡಿ, ಇರ್ಫಾನ್ ದಪೇದಾರ್, ಸೈಯದ್ ಅರ್ಫಾತ್ ಜುನೈದಿ, ಹಾಗೂ ಕೃಷ್ಣ ಛಲವಾದಿ ,ಮೆಹಬೂಬ್ ಬಾರಿಗಿಡ್ ಸಾದಿಕ್ ಅಲಿ, ಮಾಸೂಮ್ ಷರೀಫ್, ಗ್ಯಾನ್ಯಪ್ಪ ಮೇಗಳಪೇಟೆ, ಗ್ಯಾರಂಟಿ ಸದಸ್ಯರು ನ್ಯಾಮತ ಖಾದ್ರಿ ,ಸಯ್ಯದ್ ಸಾಬ ಹಳೇಪೇಟೆ, ಖಾಲೀದ್. ಕಿಲ್ಲಾ ಇತರರು ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕುಂಬಾರ
