ಮುದಗಲ್ಲ ವರದಿ…
ಈದ್ ಮಿಲಾದ್ ಅಂಗವಾಗಿ ಆಲ್ ಜುನೈದಿ ವೆಲ್ಫೇರ್ ಟ್ರಸ್ಟ್ ವತಿಯಿಂದ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ವಿತರಣೆ.
ಮುದಗಲ್ :- ಪಟ್ಟಣದ ಅಲ್ ಜುನೈದಿ ವೆಲ್ಫೇರ್ ಟ್ರಸ್ಟ್ ವತಿಯಿಂದ ಪ್ರವಾದಿ ಹಜರತ್ ಮೊಹಮ್ಮದ್ ಮುಸ್ತಫ ಸಲ್ಲಲ್ಲಾಹು ಅಲೈಹಿವ ಸ್ವಲ್ಲಂ ಅವರ 15001 ನೇ ಜನ್ಮ ದಿನೋತ್ಸವದ ಅಂಗವಾಗಿ ಸಮುದಾಯ ಆರೋಗ್ಯ ಕೇಂದ್ರ ದ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ವಿತರಿಸುವ ಮೂಲಕ ಈದ್ ಮಿಲಾದ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು ಈ ಸಂದರ್ಭದಲ್ಲಿ ರಾಜ್ಯ ಪಂಚಾಯತ್ ರಾಜ್ ಇಲಾಖೆ ಮುಖ್ಯ ಕಾರ್ಯದರ್ಶಿ ಎಂ ಚಂದ್ರಶೇಖರ್ ಅವರು ಮಾತನಾಡಿ ಪ್ರವಾದಿಯವರ ಜನ್ಮದಿನದ ಅಂಗವಾಗಿ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ವಿತರಣೆ ಮಾಡುವ ಕಾರ್ಯ ಮೆಚ್ಚುವಂತದ್ದು ಮುದಗಲ್ ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಸಮುದಾಯದವರು ಸಹೋದರತ್ವದಿಂದ ಹಬ್ಬಗಳನ್ನು ಆಚರಿಸುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೈಯದ್ ನಯಿಮ್ ಜುನೈದಿ, ಸೈಯದ್ ಅಬ್ದುಲ್ ರವೂಫ್ ಜುನೈದಿ, ಮಂಜುನಾಥ್, ಬನ್ನಿಗೋಳಕರ್, ಮೌಲಾನಾ ಮೊಹಮ್ಮದ್ ಹಾಶಿಮ್, ಡಾಕ್ಟರ್ ವಿನೋದ್ ಕುಮಾರ್, ಗುರು ಬಸಪ್ಪ ಸಜ್ಜನ್, ಎಸ್ ಎನ್ ಖಾದ್ರಿ, ಸೈಯದ್ ರೆಹಮಾನ್ ಜುನೈದಿ, ದೇವೇಂದ್ರ ವಕೀಲರು, ಅಸರಾರ್ ಅಹಮದ್, ಸೈಯದ್ ಹಕೀಮ್ ಜುನೈದಿ, ಮೆಹಬೂಬ್ ಕಡ್ಡಿಪುಡಿ, ಇರ್ಫಾನ್ ದಪೇದಾರ್, ಸೈಯದ್ ಅರ್ಫಾತ್ ಜುನೈದಿ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವರದಿ:-ಮಂಜುನಾಥ ಕುಂಬಾರ
