ಮುದಗಲ್ಲ:- ದೇವರ ದಾಸಿಮಯ್ಯ ಜಯಂತಿ ಆಚರಣೆ…

ಮುದಗಲ್ಲ ವರದಿ..

ದೇವರ ದಾಸಿಮಯ್ಯ ಜಯಂತಿ ಆಚರಣೆ..

ಮುದಗಲ್ಲ :- ಕಾಯಕತತ್ವ ಪ್ರಚುರಪಡಿಸಿದ ಹನ್ನೆರಡನೇ ಶತಮಾನದ ಶರಣರು ಸಾಮಾಜಿಕ ಪಿಡುಗು ತೊಲಗಿಸಲು ಶ್ರಮಿಸಿದರು. ವಚನಕಾರ ದೇವರದಾಸಿಮಯ್ಯ ತಮ್ಮ ವೈಚಾರಿಕ ನಿಲುವಿನೊಂದಿಗೆ ಎಲ್ಲರ ಗಮನ ಸೆಳೆಯುತ್ತಾರೆ ಎಂದು ಮುದಗಲ್ಲ ಪುರಸಭೆ ಯ ಮುಖ್ಯಾಧಿಕಾರಿ ಪ್ರವೀಣ್ ಬೋಗರ್  ಹೇಳಿದರು.

ಜಯಂತಿ ಆಚರಣೆ ಮಾಡಿ ಮಾತನಾಡಿ ಅವರು  ವಚನಗಳು ಮನ ಪರಿವರ್ತನೆ ಮಾಡುವ ಶಕ್ತಿ ಹೊಂದಿವೆ. ತಿಳಿವಳಿಕೆಯನ್ನು ಹೆಚ್ಚಿಸುತ್ತವೆ ಎಂದರು. ದೇವರ ದಾಸಿಮಯ್ಯ ಅವರ ಭಾವಚಿತ್ರ ಕ್ಕೆ ಸಮುದಾಯ ಸಂಘಟನಾ ಅಧಿಕಾರಿ ಚನ್ನಮ್ಮ ದಳವಾಯಿ ಮಠ ಅವರು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಂದಾಯ ವಿಭಾಗದ ಅಧಿಕಾರಿಯಾದ  ಅಂತೋಣಿ ರಾಜ ಪುರಸಭೆಯ ಮ್ಯಾನೇಜರ್ ಸುರೇಶ್ ಹೊನ್ನಳ್ಳಿ, ಸಮುದಾಯ ಸಂಘಟನಾ ಅಧಿಕಾರಿ ಚನ್ನಮ್ಮ ದಳವಾಯಿ ಮಠ , ನಿಸಾರ್ ಅಹಮದ್,ಜಿಲಾನಿ ಪಾಶ, ಧಮ೯ನಗೌಡ,  ಶಂಕರಪ್ಪ ಜೀಡಿ , ವೆಂಕಟೇಶ ಅಯ್ಯ (ಶೆಟ್ಟರು), ಸಂಗೀತ ಗಾಯಕರಾದ ಯಂಕಣ್ಣ ,  ಇತರರು ಉಪಸ್ಥಿತರಿದ್ದರು.

 ವರದಿ:- ಮಂಜುನಾಥ ಕುಂಬಾರ

Leave a Reply

error: Content is protected !!