ಗ್ರಾಮ ಪಂಚಾಯತಿಯನ್ನು ಗ್ರೇಡ್ 1 ದರ್ಜೆಗೇರಿಸಲು ಜಿ.ಪಂ. ಸಿಇಓ ಗೆ ಮನವಿ

You are currently viewing ಗ್ರಾಮ ಪಂಚಾಯತಿಯನ್ನು ಗ್ರೇಡ್ 1 ದರ್ಜೆಗೇರಿಸಲು ಜಿ.ಪಂ. ಸಿಇಓ ಗೆ ಮನವಿ

ಕುಕನೂರು : ತಾಲೂಕಿನ ಬಳಗೇರಿ ಗ್ರಾಮ ಪಂಚಾಯತಿಯು 2021 ರ ಜನಗಣತಿ ಪ್ರಕಾರ 6 ಸಾವಿರ ಜನಸಂಖ್ಯೆ ದಾಟಿದರೂ ಗ್ರೇಡ್ 2 ದರ್ಜೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದೆ, ಇದರಿಂದಾಗಿ ಸ್ಥಳೀಯವಾಗಿ ಪಂಚಾಯತಿ ಮಟ್ಟದಲ್ಲಿ ಸಿಗುವ ಅನುದಾನ, ಸೌಲಭ್ಯ ಗಳಲ್ಲಿ ಕಡಿತ ಉಂಟಾಗುತ್ತಿದೆ. ಈ ಕುರಿತಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ಮo ಪಾಂಡೆ ಅವರಿಗೆ ಸಾರ್ವಜನಿಕ ಮನವಿ ಸಲ್ಲಿಸಲಾಯಿತು.

ಕುಕನೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಆಹವಾಲು ಸ್ವೀಕಾರ ಸಭೆ ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ರತ್ನo ಪಾಂಡೆ ಅವರಿಂದ ನಡೆಯಿತು.

ಈ ಸಂದರ್ಭದಲ್ಲಿ ಬಳಗೇರಿ ಗ್ರಾಮ ಪಂಚಾಯತಿ ಗ್ರೇಡ್ 2 ನಲ್ಲಿಯೇ ಇದ್ದು
ಪಂಚಾಯತ್ ಸ್ಥಾನಮಾನವನ್ನು ಗ್ರೇಡ್ 1 ದರ್ಜೆಗೆ ಎತ್ತರಿಸುವ ಬಗ್ಗೆ ಮನವಿ ಪತ್ರದ ಮೂಲಕ ಸಿಇಓ ಅವರ ಗಮನಕ್ಕೆ ತರಲಾಯಿತು.

ಈ ಕುರಿತಂತೆ ಮನವಿ ಪತ್ರ ಸ್ವೀಕರಿಸಿದ ಜಿ. ಪಂ, ಸಿಇಓ ರಾಹುಲ್ ರತ್ನo ಅವರು ಗ್ರೇಡ್ 1 ದರ್ಜೆಗೆ ಎತ್ತರಿಸುವ ಅಗತ್ಯ ಕ್ರಮ ಕೈಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

Leave a Reply

error: Content is protected !!