ಮುದಗಲ್ಲ ವರದಿ..
ಮುದಗಲ್ಲ ದಲ್ಲಿ ಗಣೇಶೋತ್ಸ ವವನ್ನು ಶಾಂತಿಯುತವಾಗಿ ಆಚರಿಸಲುಡಿವೈಎಸ್‌ಪಿ :ದತ್ತಾತ್ರಯ ಕಾರ್ನಾಡ ಸೂಚನೆ..
ಮುದಗಲ್ಲ : ‘ಪಟ್ಟಣದಲ್ಲಿ ಗಣೇಶೋತ್ಸವವನ್ನು ಶಾಂತಿಯುತವಾಗಿ ಆಚರಿಸಬೇಕು’ ಎಂದು ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ ಸೂಚಿಸಿದರು.
ಡಿವೈಎಸ್ಪಿ ದತ್ತಾತ್ರೇಯ ಮುದಗಲ್ಲ ಪೊಲೀಸ್ ಠಾಣಾ ವತಿಯಿಂದ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು‘ಐತಿಹಾಸಿಕ ಹಿನ್ನೆಲೆ ಹೊಂದಿರುವ ಮುದಗಲ್ಲ ಪಟ್ಟಣದಲ್ಲಿ ನಾವೆಲ್ಲರೂ ಸೇರಿ ಸಂಭ್ರಮದಿಂದ ಗಣೇಶೋತ್ಸವ ಆಚರಿಸೋಣ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸೋಣ. ಪಿಒಪಿ ಗಣೇಶ ಮೂರ್ತಿಗಳಿಗೆ ಕಡಿವಾಣ ಹಾಕಿ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕು. ಫ್ಲೆಕ್ಸ್, ಬಂಟಿಂಗ್ಸ್ ಹಾಕಬೇಕಾದರೆ ಅನುಮತಿ ಪಡೆಯಬೇಕು. ಗ್ರಾಮ ಪಂಚಾಯಿತಿ, ಅಗ್ನಿಶಾಮಕ ಠಾಣೆ, ವಿದ್ಯುತ್ ಇಲಾಖೆ ಹಾಗೂ ಧ್ವನಿವರ್ಧಕ ಅಳವಡಿಸಲು ತಹಶೀಲ್ದಾರ್ ಅನುಮತಿ ಪಡೆದು ಪೊಲೀಸರು ನೀಡುವ ಸಲಹೆ–ಸೂಚನೆಗಳನ್ನು ಪಾಲಿಸಬೇಕು’ ಎಂದು ಹೇಳಿದರು

ವಿಸರ್ಜನೆ ವೇಳೆ ಈಜಲು ಬಾರದವರು ನೀರಿಗಿಳಿಯಬಾರದು. ಗಣೇಶ ಮೂರ್ತಿ ಪೆಂಡಾಲ್ ಬಳಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಜೊತೆಗೆ ಪರಿಸರ ಮಾಲಿನ್ಯ ಹಾಗೂ ಶಬ್ಧ ಮಾಲಿನ್ಯಕ್ಕೆ ಆಸ್ಪದ ನೀಡದೆ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು’ ಎಂದರು.
ಪಿಎಸ್ಐ ವೆಂಕಟೇಶ್ ಮಾಡಗೇರಿ
ಮಾತನಾಡಿ, ‘ಗಣೇಶ ಹಬ್ಬವನ್ನು ಶಾಂತಿ, ಸೌಹಾರ್ದಯಿಂದ ಆಚರಿಸಬೇಕು. ಹಬ್ಬದ ನೆಪದಲ್ಲಿ ಕಾನೂನು ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ , ಜೆಸ್ಕಾಂ ಇಲಾಖೆ ಸಿಬ್ಬಂದಿ ಬನ್ನೆಪ್ಪ, ಪುರಸಭೆ ವ್ಯವಸ್ಥಾಪಕ ಜಗದೀಶ್,
ಸಂಗಪ್ಪ ಹಿರೇಮನಿ, ಸೈಯದ್ ಯಾಸೀನ್ ಖಾದ್ರಿ, ಎಸ್.ಎ. ನಯೀಮ್, ಅಮೀರ್ ಬೇಗ್, ಸೈಯದ್ ಸಾಬ್, ಸೈಯದ್ ನಯೀಮ್ ಖಾದ್ರಿ, ಶರಣಪ್ಪ ಕಟ್ಟಿಮನಿ, ಬಸವರಾಜ ಬಕಂದಮನಿ, ಮಹೆಬೂಬ್ ಕಡ್ಡಿಪುಡಿ, ಸಾಬು ಹುಸೇನ್, ಜವರಿಲಾಲ್ ಶೇಟ್, ಮಂಜುನಾಥ್ ನಂದವಾಡಗಿ, ರಘುವೀರ್, ರಹೆಮಾನ್ ಅರಬ್, ಕೃಷ್ಣ ಚಲವಾದಿ, ಭೀಮಣ್ಣ ಉಪ್ಪಾರ, ದಿಲೀಪ್, ಮೌನೇಶ್ ಚಲುವಾದಿ, ಹನುಮಂತ ಭಜಂತ್ರಿ, ಮಹೆಬೂಬ್ ಹಳೆಪೇಟೆ ಸಭೆಯಲ್ಲಿ ಗಣೇಶ ಹಬ್ಬದ ಆಯೋಜಕರು, ವಿವಿಧ ಸಂಘಟನೆ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ವರದಿ:-ಮಂಜುನಾಥ ಕುಂಬಾರ