You are currently viewing ಗಲಗ:- ಹಿಂದೂ ಮಹಾ ಗಣಪತಿ ಯುವಕ ಮಂಡಳಿ ವತಿಯಿಂದ ರಕ್ತದಾನ ಶಿಬಿರ ಯಶಸ್ವಿ…

ಗಲಗ:- ಹಿಂದೂ ಮಹಾ ಗಣಪತಿ ಯುವಕ ಮಂಡಳಿ ವತಿಯಿಂದ ರಕ್ತದಾನ ಶಿಬಿರ ಯಶಸ್ವಿ…

ಗಲಗ ವರದಿ..

ಹಿಂದೂ ಮಹಾ ಗಣಪತಿ ಗಲಗ ಯುವಕ ಮಂಡಳಿ ವತಿಯಿಂದ ರಕ್ತದಾನ ಶಿಬಿರ ಯಶಸ್ವಿ…

ಗಲಗ:- ಗಣೇಶೋತ್ಸವವನ್ನು ಸಮಾಜಮುಖಿ ಸೇವೆಯೊಂದಿಗೆ ಆಚರಿಸುವ ಮೂಲಕ ಹಿಂದೂ ಮಹಾ ಗಣಪತಿ ಗೆಳೆಯರ ಬಳಗದ ಯುವಕರು ಮಾದರಿ ಯಾಗಿದ್ದಾರೆ ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ಈ ಶಿಬಿರದಲ್ಲಿ ಯುವಕರು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು.

ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ಈ ಶಿಬಿರದಲ್ಲಿ
ಯುವಕರು ಉತ್ಸಾಹದಿಂದ ಭಾಗವಹಿಸಿ ರಕ್ತದಾನ
ಮಾಡಿದರು.

ಇಲ್ಲಿನ ಹಿಂದೂ ಮಹಾ ಗಣಪತಿ ಗಲಗ ಯುವಕ ಮಂಡಳದ ವತಿಯಿಂದ ರಿಮ್ಸ್ ಆಸ್ಪತ್ರೆ ರಾಯಚೂರು ಅವರಿಂದ ರಕ್ತ ನಿಧಿ ಹಿಂದೂ ಮಹಾ ಗಣಪತಿ ಆವರಣದಲ್ಲಿ ರಕ್ತದಾನ ಶಿಬಿರ ಗಣೇಶ್ ಉತ್ಸವ ದ ಆರನೇ ದಿನ ಶನಿವಾರ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ!! ಕಾವ್ಯ ಅವರು ರಕ್ತದಾನ ಶಿಬಿರದ ಮಹತ್ವವನ್ನು ವಿವರಿಸಿದರು.ಆರೋಗ್ಯವಂತ ಯುವಕರು, ಯುವತಿಯರು ರಕ್ತದಾನ ಮಾಡಲು ಸ್ವಯಂ ಪ್ರೇರಿತವಾಗಿ ಮುಂದೆ ಬರಬೇಕು ಆರೋಗ್ಯವಂತ ಯುವಕರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಇದರಿಂದ ಆರೋಗ್ಯದ ಮೇಲೆ ಯಾವುದೇ ತೊಂದರೆ ಆಗುವುದಿಲ್ಲ. ಜೊತೆಗೆ ಹೊಸಚೈತನ್ಯ ಮೂಡಿಸುತ್ತದೆ. ಈ ಬಗ್ಗೆ ಪ್ರತಿ ಯೊಬ್ಬರು ಅರಿತುಕೊಂಡು ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಡಾ!! ಹೌಕಿಫ್ , ಡಾ!! ಟಿ. ಸ್ನೇಹಾ , ಡಾ!! ಸ್ವಾತಿ ಹಾಗೂ ಹಿಂದೂ ಮಹಾಗಣಪತಿ ಮಂಡಳಿಯ ಯುವಕರು ಹಾಗೂ ಊರಿನ ಹಿರಿಯರು , ಗಣ್ಯರು ಉಪಸ್ಥಿತರಿದ್ದರು

ವರದಿ:-ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!