PV NEWS : ಕುಕನೂರು |ಮದುವೆಯಾಗಿಲ್ಲವೆಂಬ ಜಿಗುಪ್ಸೆ: ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ!
PV NEWS ಕನ್ನಡ 24×7|
ಕುಕನೂರು, ಸೆ 20 : ಮದುವೆಯಾಗಿಲ್ಲವೆಂಬ ಜಿಗುಪ್ಸೆಯಿಂದ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಲಕಮಾಪುರ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಲಕಮಾಪುರದ ಈರಪ್ಪ ಮುದ್ಲಾಪುರ (39) ಎಂದು ಗುರುತಿಸಲಾಗಿದೆ. ಮದುವೆ ನಿಶ್ಚಯವಾಗದಿರುವುದರಿಂದ ಮನನೊಂದು ಅವರು ವಿಷ ಸೇವಿಸಿದ್ದಾರೆ ಎನ್ನಲಾಗಿದೆ.
ಈರಪ್ಪ ಅವರು ವಯೋವೃದ್ಧ ತಾಯಿ ಗಂಗಮ್ಮ ಹಾಗೂ ವಿಶೇಷಚೇತನ ಸಹೋದರನಿಗೆ ಆಸರೆಯಾಗಿದ್ದರು. ವಿಷ ಸೇವಿಸಿದ್ದ ಅವರನ್ನು ತಾಯಿ ಚಿಕಿತ್ಸೆಗಾಗಿ ಕೊಪ್ಪಳದ ಆಸ್ಪತ್ರೆಗೆ ಕರೆದೊಯ್ದರಾದರೂ, ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈರಪ್ಪ ಅವರ ನಿಧನದಿಂದ ವಯೋವೃದ್ಧ ತಾಯಿ ಹಾಗೂ ವಿಶೇಷಚೇತನ ಸಹೋದರ ಇದೀಗ ಆಸರೆ ಕಳೆದುಕೊಂಡಿದ್ದು, ಕುಟುಂಬ ಅತಂತ್ರ ಸ್ಥಿತಿಗೆ ಸಿಲುಕಿದೆ.
ಘಟನೆ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.