ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಬಹಳ ಮುಖ್ಯವಾದ ಯೋಜನೆಯೇ ಇದು ಮೂರನೇ ಗ್ಯಾರಂಟಿಯಾಗದ “ಅನ್ನಭಾಗ್ಯ ಯೋಜನೆ”ಯನ್ನು ಕಳೆದ ಎರಡು ದಿನಗಳ ಹಿಂದೆಯೇ (ಜುಲೈ.10ರಂದು) ಮುಖ್ಯಮಂತ್ರಿ ಸಿದ್ಧರಾಮಯ್ಯ ಜಾರಿಗೆ ತಂದಿದ್ದರು. ಆರಂಭದಲ್ಲಿ ಕೇವಲ ಕೋಲಾರ ಜಿಲ್ಲೆ ಸೇರಿದಂತೆ ಎರಡು ಜಿಲ್ಲೆಗಳ ಪಡಿತರ ಚೀಟಿದಾರರ ಖಾತೆಗೆ ಹೆಚ್ಚುವರಿ ಐದು ಕೆಜಿ ಅಕ್ಕಿ ಹಣ ಖಾತೆಗೆ ಜಮಾ ಮಾಡಿದ್ದರು. ಇಂದು ಮುಂದುವರೆದ ಭಾಗವಾಗಿ ಬರೋಬ್ಬರಿ 10 ಜಿಲ್ಲೆಗಳ ಪಡಿತರದಾರರ ಖಾತೆಗೆ “ಅನ್ನಭಾಗ್ಯ ಯೋಜನೆ”ಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ತಿಳಿದು ಬಂದಿದೆ.
ಇಂದು ಬಿಪಿಎಲ್ ಕಾರ್ಡ್‌ದಾರರಿಗೆ ಸಿಎಂ ಸಿದ್ಧರಾಮಯ್ಯ ಘೋಷಿಸಿದಂತೆ 5 ಕೆಜಿ ಹೆಚ್ಚುವರಿ ಅಕ್ಕಿಯ ಬದಲಾಗಿ 170 ರೂ.ಗಳಂತೆ ಪ್ರತಿ ಕುಟುಂಬದ ಸದಸ್ಯರ ಖಾತೆಗೆ ಹಣ ಹಾಕುವುದಕ್ಕೆ ಇಂದು ಆದೇಶ ಆಗಿರುವುದರಿಂದ 10 ಜಿಲ್ಲೆಗಳಿಗೆ ವಿಸ್ತರಣೆಯಾಗಲಿದೆ ಎಂದು ಮಾಹಿತಿ ಇದೆ.
ಇಂದು ರಾಜ್ಯದ ಈ ಜಿಲ್ಲೆಗಳಿಗೆ ಅನ್ನಭಾಗ್ಯದ ಎರಡನೇಯ ಸುತ್ತಿನ ಹಣ ಹಾಕಲಾಗುತ್ತಿದೆ. ಅದರಂತೆ ರಾಜ್ಯದ ಜಿಲ್ಲೆಗಳಾದ ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕಲಬುರ್ಗಿ, ರಾಮನಗರ, ಶಿವಮೊಗ್ಗ, ತುಮಕೂರು, ರಾಯಚೂರು ಸೇರಿದಂತೆ 10 ಜಿಲ್ಲೆಗಳ ಪಡಿತರದಾರರ ಖಾತೆಗೆ 5 ಕೆಜಿ ಅಕ್ಕಿ ಹಣ ಡಿಬಿಟಿ ಮೂಲಕ ನೇರವಾಗಿ ವರ್ಗಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ನಂತರದಲ್ಲಿ ಮುಂದಿನ ದಿನಗಳಲ್ಲಿ ಇತರೆ ಜಿಲ್ಲೆಯ ಜನರ ಪಡಿತರ ಚೀಟಿದಾರರ ಖಾತೆಗೆ ಹಣ ವರ್ಗಾವಣೆಯಾಗಲಿದೆ ಎನ್ನಲಾಗಿದೆ.