ಕೊಪ್ಪಳ : ರಾಜ್ಯದ ಕೆಲವು ಭಾಗಗಳಲ್ಲಿ ಇಂದಿನಿಂದ ಬರೋಬ್ಬರಿ ಐದು ದಿನಗಳ ಕಾಲ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೊಪ್ಪಳ ಜಿಲ್ಲಾದ್ಯಂತ ಇನ್ನು 5 ದಿನಗಳು ಸಾದಾರಣ ಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ. ಅದರಂತೆ ಹವಾಮಾನ ಇಲಾಖೆಯು ಜಿಲ್ಲೆಯಲ್ಲಿ ತಾಲೂಕಾವಾರು ಎಷ್ಟು ಪ್ರಮಾಣದಲ್ಲಿ ಮಳೆಯಾಗಲಿದೆ ಎಂಬುವುದರ ಬಗ್ಗೆ ವಿಸ್ತೃತ ವರದಿ ನೀಡಿದೆ.
ಕೊಪ್ಪಳ ತಾಲೂಕಿನ ವ್ಯಾಪ್ತಿಯಲ್ಲಿ ಮೊದಲ ದಿನ ಇಂದು (ಜುಲೈ 19) 4.3 ಮಿ.ಮೀ.ನಷ್ಟು ಮಳೆಯಾಗಲಿದೆ. ಅದರಂತೆ 2ನೇ ದಿನ ಜುಲೈ 20 ರಂದು 6.7 ಮಿ.ಮೀ.ನಷ್ಟು ಮಳೆಯಾಗಲಿದೆ. 3ನೇ ದಿನ ಜುಲೈ 21ರಂದು 1.8 ಮಿ.ಮೀನಷ್ಟು ಮಳೆಯಾಗಲಿದೆ. 4 ನೇ ದಿನ 1.3 ಮಿ.ಮೀನಷ್ಟು ಮಳೆಯಾಗಲಿದೆ. 5 ನೇ ದಿನ 0.8 ಮಿ.ಮೀನಷ್ಟು ಮಳೆಯಾಗಲಿದೆ. ಅದೇ ರೀತಿಯಲ್ಲಿ ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿ ಮೊದಲ ದಿನ 1.4 ಮಿ.ಮೀನಷ್ಟು ಮಳೆಯಾಗಲಿದೆ. 2ನೇ ದಿನ 4.3 ಮಿ.ಮೀನಷ್ಟು ಮಳೆಯಾಗಲಿದೆ. 3ನೇ ದಿನ 0.87 ಮಿ.ಮೀನಷ್ಟು ಮಳೆಯಾಗಲಿದೆ. 4ನೇ ದಿನ 0.7 ಮಿ.ಮೀ.ನಷ್ಟು ಮಳೆಯಾಗಲಿದೆ. 5ನೇ ದಿನ 0.2 ಮಿ.ಮೀ.ನಷ್ಟು ಮಳೆಯಾಗಲಿದೆ. ಕುಷ್ಟಗಿ ತಾಲೂಕಿನಲ್ಲಿ ಮೊದಲ ದಿನ 6.4 ಮಿ.ಮೀ.ನಷ್ಟು ಮಳೆಯಾಗಲಿದೆ. 2ನೇ ದಿನ 10.1 ಮಿ.ಮೀ.ನಷ್ಟು ಮಳೆಯಾಗಲಿದೆ. 3ನೇ ದಿನ 2.2 ಮಿ.ಮೀ.ನಷ್ಟು ಮಳೆಯಾಗಲಿದೆ. 4ನೇ ದಿನ 1.1 ಮಿ.ಮೀ.ನಷ್ಟು ಮಳೆಯಾಗಲಿದೆ. 5ನೇ ದಿನ 1.6 ಮಿ.ಮೀ.ನಷ್ಟು ಮಳೆಯಾಗಲಿದೆ. ಯಲಬುರ್ಗಾ ತಾಲೂಕಿನಲ್ಲಿ ಮಳೆಯಾಗುವ ಪ್ರಮಾಣ ಹೀಗಿದೆ. ಮೊದಲ ದಿನ 5.3 ಮಿ.ಮೀ.ನಷ್ಟು ಮಳೆಯಾಗಲಿದೆ. 2ನೇ ದಿನ 8.3 ಮಿ.ಮೀ.ನಷ್ಟು ಮಳೆಯಾಗಲಿದೆ. 3ನೇ ದಿನ 1.4 ಮಿ.ಮೀ.ನಷ್ಟು ಮಳೆಯಾಗಲಿದೆ. 4ನೇ ದಿನ 1.9 ಮಿ.ಮೀ.ನಷ್ಟು ಮಳೆಯಾಗಲಿದೆ. 5ನೇ ದಿನ 1.3 ಮಿ.ಮೀ.ನಷ್ಟು ಮಳೆಯಾಗಲಿದೆ. ಕಾರಟಗಿ ತಾಲೂಕು ವ್ಯಾಪ್ತಿಯಲ್ಲಿ ಮೊದಲ ದಿನ 2.5 ಮಿ.ಮೀ.ನಷ್ಟು ಮಳೆಯಾಗಲಿದೆ. 2ನೇ ದಿನ 4.3 ಮಿ.ಮೀ.ನಷ್ಟು ಮಳೆಯಾಗಲಿದೆ. 3ನೇ ದಿನ 1.5 ಮಿ.ಮೀ.ನಷ್ಟು ಮಳೆಯಾಗಲಿದೆ. 4ನೇ ದಿನ 1.3 ಮಿ.ಮೀ.ನಷ್ಟು ಮಳೆಯಾಗಲಿದೆ. 5ನೇ ದಿನ 0.6 ಮಿ.ಮೀ.ನಷ್ಟು ಮಳೆಯಾಗಲಿದೆ. ಕುಕನೂರ ತಾಲೂಕಿನಲ್ಲಿ ಮೊದಲ ದಿನ 9.2 ಮಿ.ಮೀ.ನಷ್ಟು ಮಳೆಯಾಗಲಿದೆ. 2ನೇ ದಿನ 14.4 ಮಿ.ಮೀ.ನಷ್ಟು ಮಳೆಯಾಗಲಿದೆ. 3ನೇ ದಿನ 7.1 ಮಿ.ಮೀ.ನಷ್ಟು ಮಳೆಯಾಗಲಿದೆ. 4ನೇ ದಿನ 4.1 ಮಿ.ಮೀ.ನಷ್ಟು ಮಳೆಯಾಗಲಿದೆ. 5ನೇ ದಿನ 10.2 ಮಿ.ಮೀ.ನಷ್ಟು ಮಳೆಯಾಗಲಿದೆ.* ಕನಕಗಿರಿ ತಾಲೂಕಿನಲ್ಲಿ ಮೊದಲ ದಿನ ಮಳೆಯ ಪ್ರಮಾಣ 3.6 ಮಿ.ಮೀ.ನಷ್ಟು ಮಳೆಯಾಗಲಿದೆ. 2ನೇ ದಿನ 4.7 ಮಿ.ಮೀ.ನಷ್ಟು ಮಳೆಯಾಗಲಿದೆ. 3ನೇ ದಿನ 2.2 ಮಿ.ಮೀ.ನಷ್ಟು ಮಳೆಯಾಗಲಿದೆ. 4ನೇ ದಿನ 1.8 ಮಿ.ಮೀ.ನಷ್ಟು ಮಳೆಯಾಗಲಿದೆ. 5ನೇ ದಿನ 0.8 ಮಿ.ಮೀ.ನಷ್ಟು ಮಳೆಯಾಗಲಿದೆ. ಜಿಲ್ಲಾದ್ಯಂತ ಮುಂದಿನ ಐದು ದಿನಗಳು ಮೋಡ ಕವಿದ ವಾತವರಣವಿದ್ದು, ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.