LOCAL NEWS : ಮಳೆಯ ಅವಾಂತರ : ಬೆಳೆ ಹಾನಿ ಸಮೀಕ್ಷೆ ಮಾಡಿದ ತಹಶೀಲ್ದಾರ್ ವಾಸುದೇವ್ ಸ್ವಾಮಿ
ಗದಗ : ಲಕ್ಷ್ಮೇಶ್ವರ ತಾಲೂಕಿನ ಸಿಗ್ಲಿ ಗ್ರಾಮದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಬೆಳೆ ಹಾನಿ ಉಂಟಾಗಿದೆ. ಇದಕ್ಕೆ ಸಂಬಂಧಿಸಿದಂತೆ ಗುರುವಾರ (ಅಕ್ಟೋಬರ್ 24ರಂದು) ರೈತರ ಜಮೀನಿಗೆ ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ವಾಸುದೇವ್ ಸ್ವಾಮಿ ಅವರು ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ವೀಕ್ಷಿಸಿದರು.
ಈ ವೇಳೆ ಕೃಷಿ ಇಲಾಖೆ ಅಧಿಕಾರಿ ನರಸಮ್ಮನವರ್, ಕಂದಾಯ ನಿರೀಕ್ಷಕರಾದ ನದಾಫ, ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಭಾಗಿಯಾಗಿದ್ದರು.