ಕಳೆದ ಜುಲೈ 20ರಿಂದ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಆರಂಭಗೊಂಡಿದ್ದು, ಇಂದೀಗೆ 2ನೇ ದಿನವಾಯಿತು. ನಿನ್ನೆಗೆ ಬರೋಬ್ಬರಿ 7.77 ಲಕ್ಷ ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. ಈ ನಡುವೆ ಇನ್ನೂ ಹೆಚ್ಚಿನ ಮಹಿಳೆಯರು ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಳ್ಳುವುದು ಇರುವ ಕಾರಣ, ನಾಳೆ ಭಾನುವಾರದ ರಜಾ ದಿನವಾಗಿದ್ದು, ಆದ್ದರಿಂದ ನೋಂದಣಿ ಮಾಡಿಸಿಕೊಂಡಿದ್ದಾರೆ. ಹಾಗಾಗಿ ನಾಳೆ ಸೇವಾ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಇರಲಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ನಿನ್ನೆಯ 2ನೇ ದಿನದಂದು ಗೃಹಲಕ್ಷ್ಮೀ ಯೋಜನೆ ನೋಂದಣಿಗಾಗಿ ಸರ್ಕಾರಿ ಕಛೇರಿಗಳಿಗೆ ಮಹಿಳೆಯರು ಮುಗಿ ಬಿದ್ದಿದ್ದಾರೆ. ಹೀಗಾಗಿ ಸರ್ವಸ್ ಸಮಸ್ಯೆ ಕೂಡ ಆಗಿದೆ. ನಿನ್ನೆ ಒಂದೇ ದಿನ ದುಪ್ಪಟ್ಟು ನೋಂದಣಿಯಾಗಿದೆ ಎಂದು ಹೇಳಲಾಗುತ್ತಿದೆ.
ಎರಡನೇ ದಿನ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ 7.77 ಲಕ್ಷ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡುವುದು ಬಾಕಿ ಇರುವ ಕಾರಣ, ಇಂದು ಮತ್ತು ನಾಳೆ ಎಲ್ಲಾ ಸೇವಾ ಕೇಂದ್ರಗಳಲ್ಲಿ ನೋಂದಣಿ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕಳೆದ ಜುಲೈ.19ರ ಬುಧವಾರ ಸಂಜೆ 5 ಗಂಟೆಗೆ “ಗೃಹಲಕ್ಷ್ಮಿ ಯೋಜನೆ”ಗೆ ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಿದ್ದರು. ಈ ಸಂದರ್ಭದಲ್ಲಿ ಇ-ಆಡಳಿತ ಇಲಾಖೆಯಿಂದ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಯಾವಾಗ ನೋಂದಣಿ ಮಾಡಿಸಬೇಕು. ಸಮಯ ಎಷ್ಟೊತ್ತಿಗೆ ಎನ್ನುವ ಸಂದೇಶ ಕಳುಹಿಸಲಾಗುತ್ತಿದೆ. ಅದರಂತೆ ಮಹಿಳೆಯರು ಸೇವಾ ಕೇಂದ್ರದ ಬಳಿಗೆ ತೆರಳಿ, ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದರು.