ಕೂಕನೂರು : ಕಳೆದ ಜುಲೈ. 20ರಿಂದ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಆರಂಭಗೊಂಡಿದ್ದು, ಇದುವರೆಗೆ ಬರೋಬ್ಬರಿ 7.77 ಲಕ್ಷ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಇತ್ತ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿವಾಗ ಮಹಿಳೆಯರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಕೊಪ್ಪಳ ಜಿಲ್ಲೆಯ ಕೂಕನೂರು ಪಟ್ಟಣದಲ್ಲಿ ಈ ತರ ಅವ್ಯವ್ಯಹಾರ ಕೆಲ ನೆಟ್ ಸೆಂಟರ್‌ಗಳಲ್ಲಿ ನಡೆಯುತ್ತಿದೆ ಎಂದು ಅಲ್ಲಿನ ಕೆಲ ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪಟ್ಟಣದ ನಾಡ ಕಛೇರಿ, ಪಟ್ಟಣ ಪಂಚಾಯತ್ ಕಚೇರಿ, ತಹಶೀಲ್ದಾರ್‌ಗಳಲ್ಲಿ ಈಗಾಗಲೇ ‘ಗೃಹಲಕ್ಷ್ಮೀ ಯೋಜನೆ’ಗೆ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಆದರೆ ಅಲ್ಲಿನ ಕೆಲ ಸಿಬ್ಬಂದಿಗಳು ಇನ್ನು ಬೇರೆ ಬೇರೆ ಫಾರ್ಂಗಳನ್ನು ತುಂಬಿಕೊಂಡು ಬನ್ನಿ ಎಂದು ಕೇಳುತ್ತಿದ್ದಾರೆ. ಇದರಿಂದಾಗಿ ಮಹಿಳೆಯರು ನೆಟ್ ಸೆಂಟರ್ ಹಾಗೂ ಝರಾಕ್ಸ್ ಶಾಪ್‌ಗಳ ಮೊರೆ ಹೊಗುತ್ತಿದ್ದಾರೆ. ಅರ್ಜಿ ಫಾರ್ಂ ತರಲು ಹೊದ ಮಹಿಳೆಯರಿಗೆ ಝರಾಕ್ಸ್ ಶಾಪ್‌ಗಳ ಮಾಲಿಕರು ಈ ಅರ್ಜಿಯನ್ನು ನಾವು ಭರ್ತಿ ಮಾಡಿಕೊಡುತ್ತೇವೆ ಎಂದು ಪ್ರತಿ ಒಂದು ಅರ್ಜಿಗೆ 200 ರೂ.ಅಂತೆ ಹಣ ಪಡೆದುಕೊಳ್ಳುತ್ತಾರೆ ಎಂದು ಆರೋಪ ಕೇಳಿ ಬಂದಿದೆ.
ಗೃಹಲಕ್ಷ್ಮೀ ಯೋಜನೆ’ಯ ನೋಂದಣಿಗೆ ಬೇಕಾಗುವ ದಾಖಲೆತಿಗಳು ಇಂತಿವೆ. ಮನೆಯ ಯಜಮಾನಿ ಹಾಗೂ ಪತಿಯ ಆಧರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್ ಈ ಮೂಲ ದಾಖಲೆಗಳು ಇದ್ದಾರೆ ಸಾಕು, ‘ಗೃಹಲಕ್ಷ್ಮೀ ಯೋಜನೆ’ಗೆ ನೋಂದಣಿ ಪ್ರಕ್ರಿಯೆ ಮುಕ್ತಾಯವಾಗುತ್ತದೆ. ಆದರೆ ಕೂಕನೂರ ಪಟ್ಟಣದಲ್ಲಿ ಕೆಲ ನೆಟ್ ಸೆಂಟರ್ ಹಾಗೂ ಝರಾಕ್ಸ್ ಶಾಪ್‌ಗಳಿಂದ ಸಾರ್ವಜನಿಕರ ಜೆಬಿಗೆ ಕತ್ತರಿ ಬೀಳುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದು, “ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅರ್ಜಿ ಹರಿದಾಡುತ್ತಿದ್ದು, ಯಾವುದೇ ಕಾಗದದ ಅರ್ಜಿಗಳು ಇರುವುದಿಲ್ಲ. ನಕಲಿ ಅರ್ಜಿ ಗಳ ಮೂಲಕ ಕೆಲ ಕಿಡಿಗೇಡಿಗಳು ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಕಲಿ ಅರ್ಜಿ ಹಾವಳಿ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸಿಡಿಪಿಒ ಅಧಿಕಾರಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ) ಸಿಂಧೂ ಅಂಗಡಿ ಅವರು ಮಾಧ್ಯಮ ಪ್ರತಿನಿಧಿ ಜೊತೆಗೆ ಮಾತನಾಡಿ, “ಗೃಹಲಕ್ಷ್ಮೀ ಯೋಜನೆ ನೋಂದಣಿ ಪ್ರಕ್ರಿಯೆ ಅನ್ನು ಯಾವುದೇ ಖಾಸಗಿ ವ್ಯಕ್ತಿಗಳು ಅಥವಾ ನೆಟ್ ಸೆಂಟರ್, ನೆಟ್ ಕಫೆಗಳಿಗೆ ಅವಕಾಶ ಇರುವುದಿಲ್ಲ. ಒಂದು ವೇಳೆ ಸಾರ್ವಜನಿಕರು ವಂಚನೆಗೆ ಒಳಗಾಗುತ್ತಿದ್ದರೆ, ಅಂತಹ ಶಾಪ್ ಅಥವಾ ನೆಟ್ ಸೆಂಟರ್ ಹಾಗೂ ಝರಾಕ್ಸ್ ಶಾಪ್‌ಗಳ ವಿರುದ್ಧ ಸೂಕ್ತ ಕ್ರಮ ಜರಗಿಸಲು ಮೇಲಧಿಕಾರಿಗಳ ಆಗಮನಕ್ಕೆ ತರುತ್ತೇನೆ ಎಂದು ಸ್ಪಷ್ಟನೆ ನೀಡಿದರು.