ಕೊಪ್ಪಳ : ತಾಲೂಕಿನ ಹಿರೇಬಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಬಗನಾಳ ಸಮೀಪದ ಧ್ರುವದೇಶ್ ಮೆಟಾಸ್ಟೀಲ್ ಪ್ರೈವೇಟ್ ಲಿಮಿಟೆಡ್ (DHRUVDESH METASTEEL PRIVATE LIMITED,KOPPAL) ಕಾರ್ಖಾನೆಗೆ ಹೆಚ್ಚುವರಿ ಘಟಕ ಸ್ಥಾಪನೆಗೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರಿಂದ ವ್ಯಾಪಕವಾಗಿ ವಿರೋಧವಾಗಿದ್ದು, ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿಗಳು ಅನುಮತಿ ನೀಡಬಾರದೆಂದು ಅಭಿಪ್ರಾಯ ವ್ಯಕ್ತವಾಯಿತು.
ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮದ ಕರಿಯಮ್ಮ ದೇವಸ್ಥಾನದ ಆವರಣದಲ್ಲಿ ನಿನ್ನೆ (ಆಗಸ್ಟ್ 19) ಶನಿವಾರದಂದು ಗ್ರಾಮ ಪಂಚಾಯಿತಿಯಿಂದ ನಡೆದ ಗ್ರಾಮ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಹಿರೇಬಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ಥಾಪನೆಗೊಂಡಿರುವ ಕಾರ್ಖಾನೆಗಳಿಂದ ವಾಯು ಹಾಗೂ ಜಲಮಾಲಿನ್ಯವಾಗುತ್ತಿದ್ದು, ಸಾಕಷ್ಟು ಭಾರೀ ಜಿಲ್ಲಾಡಳಿತಕ್ಕೆ ಹಾಗೂ ವಾಯುಮಾಲಿನ್ಯ ನಿಯಂತ್ರಣ ಮಂಡಳಿಗಯ ಗಮನಕ್ಕೆ ತಂದಿದ್ದರು ಯಾವುದೇ ಪ್ರಯೋಜನವಾಗುತ್ತಿಲ್ಲ.
ಕಾರ್ಖಾನೆಯಿಂದ ಹೊರ ಸೂಸುವ ಕಪ್ಪು ಮಿಸ್ರಿತ ವಿಷಪೂರಿತ ಬೂದಿ ಹಾಗೂ ದುರ್ವಾಸನೆಯಿಂದ ರೈತರಿಗೆ ಜಾನುವಾರುಗಳಿಗೆ ಜಲ ಚರಂಡಿಗಳಿಗೆ ತೀರ್ವತರವಾದ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕಾರ್ಖಾನೆಗಳ ಕುಲಷಿತ ತ್ಯಾಜ್ಯ ಕಲಬೆರಿಕೆಯೊಂದಿಗೆ ತುಂಗಭದ್ರ ನದಿಗೆ ಸೇರುತ್ತಿದೆ. ಕುಲಷಿತ ನೀರು ಸೇವಿಸುವುದರಿಂದ ರೈತರಿಗೆ ಹಾಗೂ ಜನುವಾರಿಗಳಿಗೆ ನಾನ್ನ ರೀತಿಯ ಕಾಯಿಲೆಗಳು ಬರುತ್ತವೆ ಹೀಗಾಗಿ ಹಿರೇ ಬಗನಾಳಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಯಾವುದೇ ಕಾರ್ಖಾನೆಗಳ ಸ್ಥಾಪನೆಗೆ ಅನುಮತಿ ನೀಡಬಾರದೆಂದು ಗ್ರಾಮ ಪಂಚಾಯತಿ ಪಿಡಿಒ ಗಮನಕ್ಕೆ ತಂದರು.
ಈ ಸಭೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು, ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಯುವಕರು ಪಾಲ್ಗೊಂಡು ತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.
ವರದಿ : ಚಂದ್ರು ಆರ್ ಭಾನಾಪೂರ್