KOPPAL NEWS : ಅಕ್ರಮ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದವರ ಬಂಧನ..!

You are currently viewing KOPPAL NEWS : ಅಕ್ರಮ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದವರ ಬಂಧನ..!

ಕೊಪ್ಪಳ : ತಾಲೂಕಿನ ಮುನಿರಾಬಾದ್‌ನಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದವರ ಬಂಧನವಾಗಿದ್ದು, ಸೋಮವಾರ ತಡ ರಾತ್ರಿ (ಸೆಪ್ಟಂಬರ್‌ 4) ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮುನಿರಾಬಾದ್ ಹೊಸಪೇಟೆ ರಸ್ತೆಯ ಎನ್.ಹೆಚ್.-50 ರಸ್ತೆಯಲ್ಲಿ ಹೊಸಪೇಟೆ ಕಡೆಗೆ ಒಂದು ಲಾರಿಯು ಪಡಿತರ ಅಕ್ಕಿ ತುಂಬಿಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರ ಬಳಿಕ ದಾಳಿ ಮಾಡಿದ್ದಾರೆ.

ಬಂಧಿತರಿಂದ ಅಂದಾಜು 3,45,000/-ರೂ. ಬೆಲೆಬಾಳುವ 150 ಕ್ವಿಂಟಾಲ್ ತೂಕದ 300 ಅಕ್ಕಿ ಮೂಟೆ ಚೀಲಗಳು ಹಾಗೂ ಕೃತ್ಯಕ್ಕೆ ಬಳಸಿದ 8,00,000/-ರೂ ಬೆಲೆ ಬಾಳುವ ಲಾರಿ ವಶ ಹಾಗೂ ಒಟ್ಟು 11,45,000=00 ರೂ ಮೌಲ್ಯವುಳ್ಳ ಲಾರಿ ಮತ್ತು ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರು ಯಶೋಧಾ ವಂಟಗೊಡಿ ಐ.ಪಿ.ಎಸ್, ಶರಣಬಸಪ್ಪ ಸುಬೇದಾರ್ ಡಿ.ಎಸ್.ಪಿ., ಮಹಾಂತೇಶ ಸಜ್ಜನ್ ವೃತ್ತ ನಿರೀಕ್ಷಕರು ಇವರ ಮಾರ್ಗದರ್ಶನದಲ್ಲಿ ಸುನೀಲ್, ಹೆಚ್ ಪಿ.ಎಸ್.ಐ ರವರ ತಂಡವು ದಾಳಿ ಮಾಡಿ ಆರೋಪಿ ಚಾಲಕ ಮಂಜುನಾಥ ತಂದೆ ಚಂದ್ರಪ್ಪ ಕುಂದೂರು ಸಾ: ತರಲಗಟ್ಟ ತಾ: ಕುಂದುಗೋಳ್‌ ಜಿ: ಧಾರವಾಡ ಈತನನ್ನು ಬಂಧನ ಮಾಡಿದ್ದಾರೆ.

ದಾಳಿ ಮಾಡಿದ ತಂಡದಲ್ಲಿ ಶ್ರೀ ಸುನೀಲ್ ಹೆಚ್ ಪಿ.ಎಸ್.ಐ (ಕಾ&ಸು) ಮುನಿರಾಬಾದ್‌, ಶ್ರೀಮತಿ ಮೀನಾಕ್ಷಿ ಪಿ.ಎಸ್‌.ಐ (ತನಿಖೆ) ಮುನಿರಾಬಾದ್, ಶ್ರೀ ಕೃಷ್ಣ ವಿ ಎ.ಎಸ್.ಐ ಹಾಗೂ ಸಿಬ್ಬಂದಿಯವರಾದ ಶ್ರೀ ಹನುಮಂತಪ್ಪ, ಶ್ರೀ ಅಂಜಿನಪ, ಶ್ರೀ ಮಹೇಶ ಸಜ್ಜನ್, ಶ್ರೀ, ಮಂಜುನಾಥ, ಶ್ರೀ ಶರಣಪ್ಪ, ಶ್ರೀ ನರಸಪ್ಪ, ಶ್ರೀ ನಿಂಗಪ್ಪ, ಶ್ರೀ ಶಶಿಕುಮಾರ ಕಾಳಿ, ಚಾಲಕರಾದ ಶ್ರೀ ವೆಂಕಟೇಶ, ಶ್ರೀ ಚಂದ್ರಶೇಖರ್ ರವರು ಇದ್ದು, ಈ ಪ್ರಕರಣದಲ್ಲಿ ಎಸ್.ಪಿ ಕೊಪ್ಪಳರವರು ಶ್ಲಾಘನೆ ಮಾಡಿ ಅಧಿಕಾರಿ & ಸಿಬ್ಬಂದಿ ವರ್ಗದವರಿಗೆ ಬಹುಮಾನ ಘೋಷಣೆ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Leave a Reply

error: Content is protected !!