ಕೊಪ್ಪಳ : ಜಿಲ್ಲೆಯ ಹೊಸಲಿಂಗಾಪುರ ಗ್ರಾಮದಲ್ಲಿರುವ ಆಶ್ರಯ ಬಡಾವಣೆಯಲ್ಲಿರುವ ಮನಯೆಲ್ಲಿ ಮೂವರು ಶವ ಪತ್ತೆಯಾಗಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೌದು, ಮೂವರ ಅನುಮಾನಾಸ್ಪದ ಶವಗಳು ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಸ್ಥಳೀಯರ ಅಭಿಪ್ರಾಯ ವಾಗಿತ್ತು. ಆದರೆ, ಇದೀಗ ಈ ಒಂದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನನ್ನನ್ನು ಬಿಟ್ಟು ಅಣ್ಣನನ್ನು ಮದುವೆಯಾಗಿದ್ದಕ್ಕೆ ತಮ್ಮನೊಬ್ಬ ಮೂವರನ್ನು ಭೀಕರವಾಗಿ ಕೊಲೆಗೈದಿದ್ದಾನೆ ಎಂದು ರಹಸ್ಯ ಹೊರಬಂದಿದೆ.
ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿರುವ ಆಶ್ರಯ ಬಡಾವಣೆಯಲ್ಲಿರುವ ಮನಯೆಲ್ಲಿ ನಿನ್ನೆ ಮೂವರು ಶವವಾಗಿ ಪತ್ತೆಯಾಗಿತ್ತು. ಒಂದೇ ಮನೆಯಲ್ಲಿ ಮೂವರು ನಿಗೂಢವಾಗಿ ಸಾವನಪ್ಪಿದ ಪ್ರಕರಣ ಮೂವರದು ಆತ್ಮಹತ್ಯೆ ಅಲ್ಲ ಕೊಲೆಯಾಗಿದೆ ಎಂದು ಹೇಳಲಾಗುತ್ತಿದೆ.
ಹೊಸ ಲಿಂಗಾಪುರ ಗ್ರಾಮದ ನಿವಾಸಿಗಳಾದ ಐವತ್ತು ವರ್ಷದ ರಾಜೇಶ್ವರಿ, ರಾಜಶ್ವರಿ ಪುತ್ರಿಯಾಗಿರುವ ಇಪ್ಪತ್ತೆಂಟು ವರ್ಷದ ವಸಂತಾ, ಮತ್ತು ವಸಂತಾಳ ಐದು ವರ್ಷದ ಮಗ ಸಾಯಿ ಧರ್ಮತೇಜ್, ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದೀಗ ಪೊಲೀಸರು ತನಿಖೆ ಕೈಗೊಂಡಾಗ ಬೆಚ್ಚಿಬಿದ್ದಿದ್ದು, “ತನ್ನನ್ನು ಬಿಟ್ಟು ಅಣ್ಣನನ್ನು (ಆರಿಫ್) ಮದುವೆಯಾಗಿದ್ದಕ್ಕೆ ಮೂವರನ್ನು ತಮ್ಮ (ಆಸೀಫ್) ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಇನ್ನು ತೀವ್ರ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.