BIG UPDATE : ಸೂರ್ಯಯಾನ-1ರ ಕುರಿತು ಹೊಸದೊಂದು ಮಾಹಿತಿ ಹಂಚಿಕೊಂಡ ಇಸ್ರೋ..!!

You are currently viewing BIG UPDATE : ಸೂರ್ಯಯಾನ-1ರ ಕುರಿತು ಹೊಸದೊಂದು ಮಾಹಿತಿ ಹಂಚಿಕೊಂಡ ಇಸ್ರೋ..!!

ಬೆಂಗಳೂರು : ಸೂರ್ಯಯಾನ-1ರ ಭಾಗವಾಗಿ ನಿನ್ನೆ ಆದಿತ್ಯ-L1 ಉಪಗ್ರಹ ಉಡಾವಣೆ ಮಾಡಲಾಗಿತ್ತು.ಈ ಉಡಾವಣೆ ಕಾರ್ಯ ಯಶಸ್ವಿ ಕೂಡ ಆಗಿತ್ತು. ಇದರ ಬೆನ್ನಲ್ಲೇ ಆದಿತ್ಯ-ಎಲ್1 ಉಪಗ್ರಹದ ಬಗ್ಗೆ ಇಸ್ರೋದಿಂದ ಹೊಸದೊಂದು ಅಪ್‌ಡೇಟ್‌ ನೀಡಲಾಗಿದೆ. ಅದೇ ಉಪಗ್ರಹವು ಆರೋಗ್ಯಕರವಾಗಿದೆ ಹಾಗೂ ತನ್ನ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿದೆ ಎಂದು ತಿಳಿಸಿದೆ.

ಈ ಕುರಿತು ಇಸ್ರೋದಿಂದ ಮಾಹಿತಿ ಹಂಚಿಕೊಳ್ಳಲಾಗಿದ್ದು, ‘ಆದಿತ್ಯ-ಎಲ್1 ಉಪಗ್ರಹವು ಆರೋಗ್ಯಕರವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, EBN1 ಅನ್ನು ಬೆಂಗಳೂರಿನ ISTRACನಿಂದ ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ ಎಂದಿದೆ.

ಆದಿತ್ಯ-ಎಲ್1 ಉಪಗ್ರಹವನ್ನು ಹೊಸ ಕಕ್ಷೆಯು 245 ಕಿ.ಮೀ x 22459 ಕಿ.ಮೀ ತಲುಪಿದೆ ಹಾಗೂ ಮುಂದಿನ ಕಾರ್ಯಕ್ಷಮತೆಯನ್ನು ಸೆಪ್ಟೆಂಬರ್ 5ರಂದು ನಿಗದಿಪಡಿಸಲಾಗಿದೆ ಎಂದು ಇಸ್ರೋ ಸೂರ್ಯಯಾನ-1ರದ ಬಗ್ಗೆ ಮಾಹಿತಿ ನೀಡಿದೆ.

Leave a Reply

error: Content is protected !!