ಭಾರತೀಯ ಧಾರ್ಮಿಕ ಪರಂಪರೆಯ ರಾಯಭಾರಿ ಎಂದೇ ಹೆಸರುವಾಸಿ ಹಾಗೂ ಬಂಜಾರ ಸಮಾಜದ ಆರಾಧ್ಯ ದೈವ, ಮಹಾ ಗುರು ಸದ್ಗರು ಸಂತ ಶ್ರೀಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು. ತಮ್ಮ ಲೀಲೆಗಳನ್ನು ಪ್ರದರ್ಶನ ಮಾಡುತ್ತಾ, ಜಗದಾಂಬೆ ಮರಿಯಮ್ಮದೇವಿಯ ಆರಾಧಕರಾಗಿ ಇಡೀ ಜೀವಮಾನದುದ್ದಕ್ಕೂ ಬ್ರಹ್ಮಚರ್ಯವನ್ನೇ ಪಾಲನೆ ಮಾಡಿದ ಸಂತ ಸೇವಾಲಾಲರು, ಇಂದಿಗೂ ಜನ ಮಾನಸದಲ್ಲಿ ಗುರುವಿನ ಸ್ಥಾನವನ್ನು ಪಡೆದಿದ್ದಾರೆ. ಇಂದು ಶ್ರೀಸೇವಾಲಾಲ್ ಮಹಾರಾಜರ 285ನೇ ಜನ್ಮ ದಿನದ ಸ್ಮರಣೆ ಇಡೀ ವಿಶ್ವಾದ್ಯಂತ ಆಚರಣೆ ಮಾಡಲಾಗುತ್ತದೆ.
