ಗಂಗಾವತಿ : ಅತ್ತಿಬೇಲೆ ಪಟಾಕಿ ದುರಂತದ ಬೆನ್ನಲ್ಲೇ ಗಂಗಾವತಿ ಪೊಲೀಸರು ಎಚ್ಚೆತ್ತುಕೊಂಡು ಇಂದು ಕೊಪ್ಪಳ ಜಿಲ್ಲೆ ಗಂಗಾವತಿ ನಗರದ ಜನವಸತಿ ಪ್ರದೇಶಗಳಲ್ಲಿ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಟಾಕಿಗಳನ್ನ ವಶಕ್ಕೆ ಪಡೆದಿದ್ದಾರೆ.
ಗಂಗಾವತಿ ನಗರದಲ್ಲಿ ಕೆಲವು ಗೊಡೌನ್ ನಲ್ಲಿ ಪರವಾನಿಗೆ ಪಡೆಯದೆ ಸಂಗ್ರಹಿಸಿದ್ದ ಲಕ್ಷಾಂತರ ಮೌಲ್ಯದ ಪಟಾಕಿ ಗೋಡೌನ್ ಮೇಲೆ ನಗರಸಭೆ ಅಧಿಕಾರಿಗಳು ಪರವಾನಿಗೆ ಪಡೆದು ಮಿತಿ ಮೀರಿ ಜನವಸತಿ ಪ್ರದೇಶದಲ್ಲಿ ದಾಸ್ತಾನು ಮಾಡಿರುವ ವ್ಯಾಪಾರಸ್ಥರ ಮೇಲೆ ದಾಳಿ ನಡೆಸಿದ್ದಾರೆ.